ETV Bharat / entertainment

ಕನ್ನಡಕ್ಕೆ ಮೂರು ನ್ಯಾಷನಲ್​ ಅವಾರ್ಡ್​​: ಡೊಳ್ಳು, ತಲೆದಂಡ, ನಾದದ ನವನೀತ ಚಿತ್ರಕ್ಕೆ ಪ್ರಶಸ್ತಿಯ ಗರಿ! - ಡೊಳ್ಳು ಸಿನಿಮಾದ ನಿರ್ದೇಶಕ ಸಾಗರ್ ಪುರಾಣಿಕ್

ಕನ್ನಡ ಮೂರು ಚಿತ್ರಗಳಿಗೆ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಪುರಸ್ಕೃತ ಸಿನಿಮಾದ ನಿರ್ದೇಶಕರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

dollu-taledanda-and-nadada-navaneeta-kannada-movies-get-national-award
ಕನ್ನಡಕ್ಕೆ ಮೂರು ನ್ಯಾಷನಲ್​ ಅರ್ವಾಡ್​: 'ಡೊಳ್ಳು', ತಲೆದಂಡ, 'ನಾದದ ನವನೀತ' ಚಿತ್ರಕ್ಕೆ ಪ್ರಶಸ್ತಿಯ ಗರಿ
author img

By

Published : Jul 22, 2022, 9:24 PM IST

Updated : Jul 22, 2022, 9:32 PM IST

ಇಂದು ಪ್ರಕಟವಾದ 2020ನೇ ಸಾಲಿನ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡದ ಸಿನಿಮಾಗಳು ಕಮಾಲ್​ ಮಾಡಿದ್ದು, ಕನ್ನಡ ಚಿತ್ರರಂಗಕ್ಕೆ ಮೂರು ​ಗಳು ಸಿಕ್ಕಿವೆ. 'ಡೊಳ್ಳು', 'ತಲೆದಂಡ' ಹಾಗೂ 'ನಾದದ ನವನೀತ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ ಮುಡಿಗೇರಿದೆ.

ಸಾಗರ್ ಪುರಾಣಿಕ್ ನಿರ್ದೇಶನ ಮತ್ತು ಪವನ್ ಒಡೆಯರ್ ನಿರ್ಮಾಣದ 'ಡೊಳ್ಳು' ಸಿನಿಮಾ ಕನ್ನಡ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ದಿ.ಸಂಚಾರಿ ವಿಜಯ್ ನಟನೆಯ 'ತಲೆದಂಡ' ಸಿನಿಮಾಗೂ ರಾಷ್ಟ್ರ ಪ್ರಶಸ್ತಿ ಸಂದಿದ್ದು, ಪ್ರವೀಣ್ ಕೃಪಾಕರ್ ನಿರ್ದೇಶನದ 'ತಲೆದಂಡ' ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿ ಪ್ರಶಸ್ತಿ ಲಭಿಸಿದೆ. ಅಲ್ಲದೇ, ಗಿರೀಶ್ ಕಾಸರವಳ್ಳಿ ನಿರ್ದೇಶನದ 'ನಾದದ ನವನೀತ' ಚಿತ್ರಕ್ಕೂ ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರದ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿದೆ.

ಕನ್ನಡಕ್ಕೆ ಮೂರು ನ್ಯಾಷನಲ್ ಅವಾರ್ಡ್​​

ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾದ 'ಡೊಳ್ಳು' ಸಿನಿಮಾದ ನಿರ್ದೇಶಕ ಸಾಗರ್ ಪುರಾಣಿಕ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಗೆ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಒಂದು ಒಳ್ಳೆಯ ತಂಡ ಸೇರಿದರೆ ಆ ತಂಡ ಗುರಿಯನ್ನು ಬೇಕಾದರೂ ತಲುಪಬಹುದು ಎಂದು 'ಡೊಳ್ಳು' ಸಿನಿಮಾದಿಂದ ಸಾಬೀತಾಗಿದೆ ಎಂದು ಹೇಳಿದ್ದಾರೆ.

  • Many congratulations to the team of Taledanda. A thought provoking film about conserving nature in which Vijay Sanchari is immortalised by one of his career’s best performances. Congratulations to Girish Kasaravalli sir and the team of Dollu too on their win. #NationalFilmAwards pic.twitter.com/K7APhNDXVN

    — Divya Spandana/Ramya (@divyaspandana) July 22, 2022 " class="align-text-top noRightClick twitterSection" data=" ">

ಮುಖ್ಯವಾಗಿ ಚಿತ್ರಕ್ಕೆ ಪವನ್​ ಒಡೆಯರ್​ ಮತ್ತು ಅಪೇಕ್ಷಾ ಪುರೋಹಿತ್ ಅಂತಹ ಉತ್ತಮವಾದ ನಿರ್ಮಾಪಕರು ಸಿಕ್ಕರು. ದೊಡ್ಡ ಹಿಟ್​ ಸಿನಿಮಾಗಳನ್ನು ಕೊಟ್ಟಿರುವ ಪವನ್​ ಒಡೆಯರ್​ ಮತ್ತೊಬ್ಬ ನಿರ್ದೇಶಕನ ಮೇಲೆ ನಂಬಿಕೆ ಇಟ್ಟು, ಪ್ರೋತ್ಸಾಹಿಸಿದರು. ಬರಹಗಾರರು ಸೇರಿ ಇಡೀ ಚಿತ್ರತಂಡ ಒಂದೊಳ್ಳೆ ಸಿನಿಮಾದ ಖುಷಿ ಇದೆ ಎಂದು ಎಂದು ಸಾಗರ್ ಪುರಾಣಿಕ್ ಹೇಳಿದರು.

ಇದನ್ನೂ ಓದಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಡೊಳ್ಳು' ಅತ್ಯುತ್ತಮ ಕನ್ನಡ ಚಿತ್ರ

ದಿ.ಸಂಚಾರಿ ವಿಜಯ್ ಅಭಿನಯದ ಹಾಗೂ ಪ್ರವೀಣ್ ಕೃಪಾಕರ್ ನಿರ್ದೇಶನದ 'ತಲೆದಂಡ' ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಬಂದಿರುವ ಬಗ್ಗೆ ನಿರ್ದೇಶಕ ಪ್ರವೀಣ್​ ಕೃಪಾಕರ್ ಖುಷಿಯಾಗಿದ್ದಾರೆ. ನನ್ನ ಪ್ರಥಮ ನಿರ್ದೇಶನದ ಸಿನಿಮಾ. ಪ್ರಶಸ್ತಿಯ ಸಿಗಬೇಕೆಂದು ತಲೆಯಲ್ಲಿಟ್ಟುಕೊಂಡು ಸಿನಿಮಾ ಮಾಡಲಿಲ್ಲ. ಭವಿಷ್ಯದಲ್ಲಿ ಪರಿಸರವನ್ನ ಉಳಿಸುವ ಪ್ರಯತ್ನದಿಂದ ಮನದಲ್ಲಿಟ್ಟುಕೊಂಡು 'ತಲೆದಂಡ' ಸಿನಿಮಾ ಮಾಡಿದ್ದು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸಂಚಾರಿ ವಿಜಯ್ ಅವರನ್ನು ಸ್ಮರಿಸಿರುವ ಅವರು, ಸಂಚಾರಿ ವಿಜಯ್ ನಮ್ಮ ಜೊತೆ ಇಲ್ಲ. ಆದರೆ, ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಮಾಡಿರುವ ಪಾತ್ರಕ್ಕೆ ಪ್ರಶಸ್ತಿ ಬರುತ್ತೆ ಅಂತಾ ಅಂದುಕೊಂಡಿದ್ವು. ಆದರೆ, ಈಗ ವಿಜಯ್ ಗೆ ಬರಲಿಲ್ಲ. ಒಟ್ಟಾರೆ ಸಿನಿಮಾಗೆ ಪ್ರಶಸ್ತಿ ಬಂದಿರೋದು ಖುಷಿಯ ವಿಚಾರ ಎಂದು ತಿಳಿಸಿದರು.

ಕನ್ನಡ ಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದಕ್ಕೆ ನಟಿ ರಮ್ಯಾ ಟ್ವೀಟ್​ ಮಾಡಿ, ಪ್ರಶಸ್ತಿ ಪುರಷ್ಕೃತರಿಗೆ ಹಾಗೂ ಸಿನಿಮಾ ತಂಡಗಳಿಗೆ ಶುಭ ಹಾರೈಯಿಸಿದ್ದಾರೆ.

ಇದನ್ನೂ ಓದಿ: ಸಲಗ ಸಿನಿಮಾ ಆರಂಭವಾಗಿದ್ದು ಕೇವಲ 40 ರೂಪಾಯಿಯಲ್ಲಿ.! ಕಷ್ಟದ ದಿನಮಾನಗಳನ್ನು ನೆನದ ದುನಿಯಾ ವಿಜಯ್​

Last Updated : Jul 22, 2022, 9:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.