ನಾಲ್ಕು ವರ್ಷಗಳಿಂದ ಡೇಟಿಂಗ್ನಲ್ಲಿದ್ದ ಬಾಲಿವುಡ್ ಕಿರುತೆರೆ ತಾರೆಯರಾದ ವರುಣ್ ಸೂದ್ ಮತ್ತು ದಿವ್ಯಾ ಅಗರ್ವಾಲ್ ಸಂಬಂಧ ಕಳೆದ ವರ್ಷ ಮುರಿದು ಬಿದ್ದಿತ್ತು. ಅಭಿಮಾನಿಗಳ ಫೇವರೆಟ್ ಜೋಡಿಯಾಗಿದ್ದ ಇವರು ಒಂದು ವರ್ಷದ ನಂತರ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ವರುಣ್ ಸೂದ್ ಅವರ ತಂಗಿ ಅಕ್ಷಿತಾ ಸೂದ್ ಅವರು ಎರಡು ದಿನಗಳ ಹಿಂದೆ ಟ್ವೀಟ್ ಮಾಡಿ, ದಿವ್ಯಾ ಅಗರ್ವಾಲ್ ತಮ್ಮ ಕುಟುಂಬದ ಪೂರ್ವಜರ ಆಭರಣಗಳನ್ನು ಹಿಂದಿರುಗಿಸಿಲ್ಲ ಎಂದು ಆರೋಪಿಸಿದ್ದಾರೆ.
-
Giving back the “jewellery”😂 pic.twitter.com/rHPGJ3J2AJ
— Divya Agarwal (@Divyakitweet) February 23, 2023 " class="align-text-top noRightClick twitterSection" data="
">Giving back the “jewellery”😂 pic.twitter.com/rHPGJ3J2AJ
— Divya Agarwal (@Divyakitweet) February 23, 2023Giving back the “jewellery”😂 pic.twitter.com/rHPGJ3J2AJ
— Divya Agarwal (@Divyakitweet) February 23, 2023
ಆರೋಪ ಮಾಡಿರುವ ಟ್ವೀಟ್‌ಗಳನ್ನು ಡಿಲೀಟ್ ಮಾಡಲಾಗಿದ್ದರೂ, ದಿವ್ಯಾ ಅಗರ್ವಾಲ್ ಸರಣಿ ಟ್ವೀಟ್‌ಗಳಲ್ಲಿ ಉತ್ತರಿಸಿದ್ದಾರೆ. ಬಿಗ್ಬಾಸ್ ಒಟಿಟಿ ಸೀಸನ್ 1ರ ವಿಜೇತೆ ದಿವ್ಯಾ ಅಗರ್ವಾಲ್ ಅವರು ತಮ್ಮ ಟ್ವೀಟ್‌ಗಳಲ್ಲಿ ಯಾರನ್ನೂ ಹೆಸರಿಸದೇ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಭರಣಗಳನ್ನು ಕೈಯಲ್ಲಿ ಹಿಡಿದ ಫೋಟೋವನ್ನು ಪೋಸ್ಟ್ ಮಾಡಿ 'ಹಿಂದಿರುಗಿಸುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಲೋಲ್ (ಸ್ಮೈಲ್) ಎಮೋಜಿಯನ್ನು ಸೇರಿಸಿದ್ದಾರೆ. ಇನ್ನೊಂದು ಪೋಸ್ಟ್ನಲ್ಲಿ ಅದರೊಂದಿಗೆ ಕೆಲವು 'ಕಿಸ್' ಚಾಕೊಲೇಟ್ಗಳನ್ನು ಕಳುಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಹಲವಾರು ನೆಟಿಜನ್ಗಳು ಮತ್ತು ವರುಣ್ ಸೂದ್ ಅಭಿಮಾನಿಗಳು ಟ್ವೀಟ್ಗೆ ಕಾಮೆಂಟ್ ಮಾಡಿದ್ದಾರೆ.
-
With some kisses 😘 pic.twitter.com/IStB6pJ19y
— Divya Agarwal (@Divyakitweet) February 23, 2023 " class="align-text-top noRightClick twitterSection" data="
">With some kisses 😘 pic.twitter.com/IStB6pJ19y
— Divya Agarwal (@Divyakitweet) February 23, 2023With some kisses 😘 pic.twitter.com/IStB6pJ19y
— Divya Agarwal (@Divyakitweet) February 23, 2023
ಇದನ್ನೂ ಓದಿ: 'ಪ್ಯಾರ್ ತೋ ಹೋನಾ ಹಿ ಥಾ, ಪ್ಯಾರ್ ತೋ ಹೈ': ಕಾಜೋಲ್ - ಅಜಯ್ 24ನೇ ವಿವಾಹ ವಾರ್ಷಿಕೋತ್ಸವ
ದಿವ್ಯಾ ಅವರ ಟ್ವೀಟ್ಗೆ ಕೆಲವು ನೆಟ್ಟಿಗರು ಗೋಲ್ಡ್ ಡಿಗ್ಗರ್ (Gold Digger) ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ. ಇಂತಹ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಕೋಪದೊಂದಿಗೆ ಉತ್ತರಿಸಿರುವ ನಟಿ, "ನಿಮಗೆ ಗೊತ್ತಾ? ಇದೆಲ್ಲವನ್ನು ನಿಲ್ಲಿಸಿ ಬಿಡಿ. ನನ್ನ ತಂದೆಯನ್ನು ಯಾವ ಕಾರಣಕ್ಕಾಗಿ ಟ್ರೋಲ್ ಮಾಡ್ತೀರಾ? ಇದೆಲ್ಲವೂ ನಿಜಕ್ಕೂ ನನಗೆ ಇಷ್ಟವಾಗುವುದಿಲ್ಲ. ಜೊತೆಗೆ ಇಂತಹ ವಿಷಯಗಳು ತಮಾಷೆಯಲ್ಲ. ನಾನು ಗೋಲ್ಡ್ ಡಿಗ್ಗರಾ? ನಾನು ಯಾವತ್ತೂ ಹಾಗಾಗಲೂ ಸಾಧ್ಯವಿಲ್ಲ. ನಾನು ಸೂಪರ್ ಸೆಲ್ಫ್ ಮೇಡ್ ವುಮೆನ್" ಎಂದು ಹೇಳಿದ್ದಾರೆ.
ಅಪೂರ್ವ ಜೊತೆ ದಿವ್ಯಾ ಅಗರ್ವಾಲ್ ನಿಶ್ಚಿತಾರ್ಥ: ದಿವ್ಯಾ ಅಗರ್ವಾಲ್ ಅವರು 30ನೇ ವರ್ಷದ ಹುಟ್ಟುಹಬ್ಬದಂದು ಉದ್ಯಮಿ ಅಪೂರ್ವ ಪಡ್ಗಾಂವ್ಕರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಜನ್ಮದಿನದಂದು ಎಂಗೇಜ್ಮೆಂಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಕಿರುತೆರೆ ನಟಿ, "ನಾನು ಎಂದಾದರೂ ನಗುವುದನ್ನು ನಿಲ್ಲಿಸುತ್ತೇನೆಯೇ? ಬಹುಶಃ ಇಲ್ಲ. ನನ್ನ ಬದುಕಿನ ಪ್ರಯಾಣವನ್ನು ಹಂಚಿಕೊಳ್ಳಲು ಸರಿಯಾದ ವ್ಯಕ್ತಿಯನ್ನು ಕಂಡುಕೊಂಡಿದ್ದೇನೆ. ಈ ಮಹತ್ವದ ದಿನದಿಂದ ನಾನೊಬ್ಬಳೇ ಒಂಟಿಯಾಗಿ ನಡೆಯುವುದಿಲ್ಲ" ಎಂದು ಬರೆದುಕೊಂಡಿದ್ದರು.
ಮುರಿದು ಬಿತ್ತು ನಾಲ್ಕು ವರ್ಷದ ಪ್ರೀತಿ: ನಾಲ್ಕು ವರ್ಷಗಳಿಂದ ಡೇಟಿಂಗ್ನಲ್ಲಿದ್ದ ಬಾಲಿವುಡ್ ಕಿರುತೆರೆ ಜೋಡಿ ದಿವ್ಯಾ ಅಗರ್ವಾಲ್ ಮತ್ತು ವರುಣ್ ಸೂದ್ ಕಳೆದ ವರ್ಷ ತಮ್ಮ ಸಂಬಂಧವನ್ನು ಮರಿದುಕೊಂಡಿದ್ದರು. ತಾವಿಬ್ಬರು ಬೇರೆಯಾಗುತ್ತಿರುವ ವಿಷಯವನ್ನು ಇನ್ಸ್ಟಾಗ್ರಾಮ್ನಲ್ಲಿ ಸ್ಪಷ್ಟಪಡಿಸಿದ್ದರು. "ಪ್ರೀತಿಯಿಂದ ಹೊರಗೆ ಬರುವುದು ನನ್ನ ಆಯ್ಕೆಯಾಗಿತ್ತು. ವರುಣ್ ಜೊತೆ ಕಳೆದ ಎಲ್ಲಾ ಕ್ಷಣಗಳನ್ನು ಗೌರವಿಸುತ್ತೇನೆ. ಅವನು ಯಾವಾಗಲೂ ನನಗೆ ಆತ್ಮೀಯ ಗೆಳೆಯನಾಗಿರುತ್ತಾನೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು.
ಇದನ್ನೂ ಓದಿ: 'ಈಶ್ವರ್' ಸಿನಿಮಾಗೆ 34ರ ಸಂಭ್ರಮ: ನಿರ್ದೇಶಕ ಕೆ.ವಿಶ್ವನಾಥ್ ನೆನಪಿಸಿಕೊಂಡ ನಟ ಅನಿಲ್ ಕಪೂರ್