ETV Bharat / entertainment

ಸಂಜಯ್ ಲೀಲಾ ಬನ್ಸಾಲಿ ಜನ್ಮದಿನ: ವಿರೋಧದ ನಡುವೆಯೂ ಹಿಟ್ ಆದ ಸಿನಿಮಾಗಳಿವು!

ಹಿರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ 60ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ.

Sanjay Leela Bhansali Birthday
ಸಂಜಯ್ ಲೀಲಾ ಬನ್ಸಾಲಿ ಜನ್ಮದಿನ
author img

By

Published : Feb 24, 2023, 1:50 PM IST

ಹಿಂದಿ ಚಿತ್ರರಂಗದ ಹಿರಿಯ ನಿರ್ದೇಶಕ, ಚಿತ್ರಕಥೆಗಾರ ಮತ್ತು ಸಂಗೀತ ಸಂಯೋಜಕ ಸಂಜಯ್ ಲೀಲಾ ಬನ್ಸಾಲಿ ಇಂದು (ಫೆಬ್ರವರಿ 24) ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 60ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಖ್ಯಾತ ನಿರ್ದೇಶಕರಿಗೆ ಕುಟುಂಬಸ್ಥರು, ಆಪ್ತರು, ಚಿತ್ರರಂಗದವರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಜನ್ಮದಿನದ ಶುಭ ಕೋರುತ್ತಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ. ತಮ್ಮ ನಿರ್ದೇಶನದಿಂದಾಗಿ ಚಲನಚಿತ್ರ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಈ ಪೈಕಿ 4 ರಾಷ್ಟ್ರೀಯ ಪ್ರಶಸ್ತಿಗಳು, 10 ಫಿಲ್ಮ್‌ಫೇರ್ ಪ್ರಶಸ್ತಿಗಳು ಜೊತೆಗೆ ಕೆಲ ವಿದೇಶಿ ಪ್ರಶಸ್ತಿಗಳನ್ನು ಪಡೆದಿರುವ ಇವರು 'BAFTA' ನಲ್ಲಿ ನಾಮನಿರ್ದೇಶನವನ್ನೂ ಸ್ವೀಕರಿಸಿದ್ದಾರೆ. ಇದಲ್ಲದೇ ಭಾರತದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ವೃತ್ತಿಜೀವನ: ಸಿನಿಮಾ ಇಂಡಸ್ಟ್ರಿಯಲ್ಲಿ ಇವರ ಬಹುತೇಕ ಸಿನಿಮಾಗಳು ವಿವಾದಗಳಿಲ್ಲದೇ ಬಿಡುಗಡೆ ಆಗುವುದಿಲ್ಲ. ನಿರ್ದೇಶಕರ ಕೊನೆಯ ಕೆಲ ಚಿತ್ರಗಳು ಸಹ ಕೆಲವರಿಂದ ಆಕ್ರೋಶ ಎದುರಿಸಿದೆ. ಬಿಡುಗಡೆಯ ದಿನವೂ ಜನರು ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ 25 ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ ಪ್ರಮುಖವಾಗಿ 10 ಚಲನ ಚಿತ್ರಗಳು ಸದ್ದು ಮಾಡಿವೆ. ಆ ಪೈಕಿ ಕೇವಲ ಎರಡು ಚಿತ್ರಗಳು (ಖಾಮೋಶಿ - ದಿ ಮ್ಯೂಸಿಕಲ್ ಮತ್ತು ಸಾವರಿಯಾ) ವಿಫಲವಾಗಿವೆ. ಉಳಿದ ಎಂಟು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿವೆ. ಆದರೆ, ಈ 8 ಚಿತ್ರಗಳ ಪೈಕಿ 5 ಚಿತ್ರಗಳು ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿವೆ. ಆ ಐದು ಚಿತ್ರಗಳು ಯಾವವು ಅಂತಾ ನೋಡುವುದಾದರೆ,

ಗಂಗೂಬಾಯಿ ಕಥಿಯಾವಾಡಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಕೊನೆಯ ಚಿತ್ರ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ'. ಈ ಚಿತ್ರ ಕಳೆದ ವರ್ಷ ಫೆಬ್ರವರಿ 25ರಂದು ಬಿಡುಗಡೆಯಾಗಿತ್ತು. ಆದರೆ ಬಿಡುಗಡೆಗೂ ಮುನ್ನ ಈ ಚಿತ್ರ ಹಲವರಿಂದ ವಿರೋಧ ಎದುರಿಸಿದೆ. ಈ ಚಿತ್ರದ ಬಗ್ಗೆ ಎರಡು ಕಡೆಯಿಂದ ವಿವಾದವಿತ್ತು. ಮೊದಲನೆಯದಾಗಿ, ಚಲನಚಿತ್ರವನ್ನು ಆಧರಿಸಿದ ಮಹಿಳೆಯ ಕುಟುಂಬ (ಗಂಗೂಬಾಯಿ) ಮತ್ತು ಎರಡನೆಯದಾಗಿ ಚಿತ್ರ ಸೆಟ್ಟೇರಿರುವ ಪ್ರದೇಶದ (ಕಥಿಯಾವಾಡಿ) ಜನರು ಇದನ್ನು ತೀವ್ರವಾಗಿ ವಿರೋಧಿಸಿದರು.

ವೇಶ್ಯಾವಾಟಿಕೆ ಸಂಸ್ಕೃತಿ ಬಹಳ ಹಿಂದೆಯೇ ಕೊನೆಗೊಂಡಿದೆ ಎಂದು ಹೇಳಿದ್ದರು. ಈ ಸಿನಿಮಾ ಇಲ್ಲಿನ ಜನರ ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಿರೋಧಿಸುವವರು ಆರೋಪಿಸಿದ್ದರು. ಇನ್ನೊಂದೆಡೆ ಚಿತ್ರದಲ್ಲಿ ಗಂಗೂಬಾಯಿ ಪಾತ್ರಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಗಂಗೂಬಾಯಿ ಕುಟುಂಬ ಕೂಡ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿತ್ತು.

ಪದ್ಮಾವತ್: ಈ 'ಪದ್ಮಾವತ್' ಸಂಜಯ್ ಲೀಲಾ ಬನ್ಸಾಲಿ ಅವರ ವೃತ್ತಿ ಜೀವನದಲ್ಲಿ ಒಂಭತ್ತನೇ ಚಿತ್ರ. ಚಿತ್ರವು 25 ಜನವರಿ 2018ರಂದು ಬಿಡುಗಡೆಯಾಯಿತು. ಆದರೆ 'ಪದ್ಮಾವತ್' ಚಿತ್ರಮಂದಿರಗಳನ್ನು ತಲುಪಲು ಸಾಕಷ್ಟು ಪರೀಕ್ಷೆ ಎದುರಿಸಿತ್ತು. ಈ ಚಿತ್ರದ ಬಗ್ಗೆ ಬಹುತೇಕ ಕಡೆಗಳಲ್ಲಿ ಪ್ರತಿಭಟನೆ ನಡೆದಿತ್ತು. ಚಿತ್ರದ ಹೆಸರನ್ನು ಪದ್ಮಾವತಿಯಿಂದ ಪದ್ಮಾವತ್ ಎಂದು ಬದಲಾಯಿಸಲಾಯಿತು. ಚಿತ್ರದಲ್ಲಿ ಪದ್ಮಾವತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದರು. ‘ಘೂಮರ್’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಸೊಂಟ ಬಳುಕಿಸಿದ್ದರು. ಇದಕ್ಕೆ ಕರ್ಣಿ ಸೇನಾ ವಿರೋಧ ವ್ಯಕ್ತಪಡಿಸಿತ್ತು. ನಂತರ ಕರ್ಣಿ ಸೇನೆಯ ಬೇಡಿಕೆಗಳನ್ನು ಒಪ್ಪಿಕೊಂಡು, ಚಿತ್ರವನ್ನು, ಹಾಡನ್ನು ಎಡಿಟ್ ಮಾಡಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯಿತು. ಇನ್ನು 'ಪದ್ಮಾವತ್' ಸಿನಿಮಾದ ಚಿತ್ರೀಕರಣದ ವೇಳೆ ಅದರ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣ ಸೆಟ್ ಸುಟ್ಟು ಭಸ್ಮವಾಗಿದೆ. ಈ ಚಿತ್ರ ಮಾಡಲು 215 ಕೋಟಿ ರೂಪಾಯಿ ಬಜೆಟ್ ಬಳಸಲಾಗಿದ್ದು, ಚಿತ್ರ 585 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಚಿತ್ರದ ಪ್ರಮುಖ ತಾರಾಗಣ ಎಂದರೆ ಶಾಹಿದ್ ಕಪೂರ್, ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ.

ಬಾಜಿರಾವ್ ಮಸ್ತಾನಿ: 2013ರಲ್ಲಿ ಗೋಲಿಯೋನ್ ಕಿ ರಾಸ್ಲೀಲಾ ರಾಮ್ಲೀಲಾ ಚಿತ್ರ ತೆರೆಕಂಡ ನಂತರ ರಣ್​​ವೀರ್​ ಸಿಂಗ್​​ ​ಮತ್ತು ದೀಪಿಕಾ ಪಡುಕೋಣೆ ನಟನೆಯ ಎರಡನೇ ಚಿತ್ರ ಬಾಜಿರಾವ್ ಮಸ್ತಾನಿ. 2015ರಲ್ಲಿ ರಿಲೀಸ್​ ಆದ ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪೇಶ್ವ ಮತ್ತು ಛತ್ರಸಾಲ್ ವಂಶಸ್ಥರು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಚಿತ್ರವು ಇತಿಹಾಸವನ್ನು ತಿರುಚಿದೆ ಎಂದು ಆರೋಪಿಸಲಾಗಿದೆ. ಚಿತ್ರದ ಡೈಲಾಗ್ ಕೂಡ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. 145 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 356 ಕೋಟಿ ರೂ. ಕಲೆಕ್ಷನ್​​ ಮಾಡಿದೆ.

ಗೋಲಿಯೋನ್ ಕಿ ರಾಸ್ಲೀಲಾ ರಾಮ್​ಲೀಲಾ: 2013ರಲ್ಲಿ ತೆರೆಕಂಡ ಈ ಚಿತ್ರ ರಣ್​​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸಿದ ಮೊದಲ ಚಿತ್ರ. ಈ ಸಿನಿಮಾ ಸಂಜಯ್ ಲೀಲಾ ಬನ್ಸಾಲಿ ಅವರ ವೃತ್ತಿಜೀವನದ ಏಳನೇ ಚಿತ್ರ. ಈ ಸಿನಿಮಾ ಬಗ್ಗೆಯೂ ಸಾಕಷ್ಟು ಅಪಸ್ವರ ಎದ್ದಿತ್ತು. ಚಿತ್ರದ ಶೀರ್ಷಿಕೆಯಲ್ಲಿ ಹಿಂದೂ ದೇವರುಗಳಿಗೆ ಅವಮಾನ ಮಾಡಲಾಗಿದೆ ಎಂದು ಹೇಳುವ ಮೂಲಕ ವಿರೋಧಿಸಲಾಯಿತು. ಚಿತ್ರದ ವಿವಾದವು ಅದರ ಶೀರ್ಷಿಕೆಗೆ ಸಂಬಂಧಿಸಿದೆ. ಈ ಚಿತ್ರವನ್ನ 48 ಕೋಟಿಯಲ್ಲಿ ನಿರ್ಮಿಸಲಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ 220 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರದ ಸಮಯದಲ್ಲಿ ರಣ್​​ವೀರ್ ಮತ್ತು ದೀಪಿಕಾ ಪ್ರೀತಿಸಿದ್ದು, 2018 ರಲ್ಲಿ ವಿವಾಹವಾದರು.

ಇದನ್ನೂ ಓದಿ: ಶ್ರೀದೇವಿ 5ನೇ ವರ್ಷದ ಪುಣ್ಯತಿಥಿ: ಮರೆಯಲಾದಿತೇ ಲೇಡಿ ಸೂಪರ್​ಸ್ಟಾರ್​ ಸಿನಿಗಾಥೆ!

ಗುಝಾರಿಶ್: 2010ರಲ್ಲಿ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿ ಅವರ ಮೊದಲ ವಿವಾದಾತ್ಮಕ ಚಿತ್ರ 'ಗುಝಾರಿಶ್'. ಇದರಲ್ಲಿ ಹೃತಿಕ್ ರೋಷನ್ ಮತ್ತು ಐಶ್ವರ್ಯಾ ರೈ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಕಥೆ ಕದ್ದಿದ್ದಾರೆ ಎಂಬ ಆರೋಪ ಎದುರಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.