ETV Bharat / entertainment

ರೇಮೊ ಶೂಟಿಂಗ್​ ವಿಡಿಯೋ ವೈರಲ್: ಆಶಿಕಾರಲ್ಲಿ ಕ್ಷಮೆ ಕೇಳಿದ ನಿರ್ದೇಶಕ ಪವನ್‌ ಒಡೆಯರ್

ರೇಮೊ ಶೂಟಿಂಗ್​ ಸಮಯದಲ್ಲಿ ತೆಗೆದ ದೃಶ್ಯದ ತುಣುಕು ವೈರಲ್​ ಅದ ಬೆನ್ನಲ್ಲೇ ಈ ಬಗ್ಗೆ ನಿರ್ದೇಶಕ ಪವನ್‌ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.

author img

By

Published : Nov 19, 2022, 3:57 PM IST

director Pawan Wadeyar reacts on ashika viral video
ಆಶಿಕಾ ಎಣ್ಣೆ ರಂಪಾಟ ಪ್ರರಕಣ

ನಟಿ ಆಶಿಕಾ ರಂಗನಾಥ್​ ಅವರ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ನಟಿ ಕುಡಿದು ಕಾರು ಅಪಘಾತ ಮಾಡಿ, ಸಿಕ್ಕ ಸಿಕ್ಕವರಿಗೆ ಆವಾಜ್‌ ಹಾಕುತ್ತಿರುವ ದೃಶ್ಯ ವೈರಲ್ ಆಗುತ್ತಿದೆ. ಆದರೆ ಇದು ರಿಯಲ್ ಅಲ್ಲ. ಕೇವಲ ರೀಲ್. ಹೀಗೆ ಕೈಯಲ್ಲಿ ಎಣ್ಣೆ ಬಾಟ್ಲಿ ಹಿಡಿದು ಗಲಾಟೆ ಮಾಡಿರೋದು ಕೇವಲ ಕ್ಯಾಮರಾ ಮುಂದೆ ಅಷ್ಟೇ. ಆಶಿಕಾ ರಂಗನಾಥ್ ಅಭಿನಯದ ರೇಮೊ ಚಿತ್ರದ ಶೂಟಿಂಗ್​ ಸಮಯದಲ್ಲಿ ತೆಗೆದ ದೃಶ್ಯದ ತುಣುಕಷ್ಟೇ. ಈ ವಿಡಿಯೋ ವೈರಲ್​ ಅಗಿದ್ದು, ನಟಿ ಬೇಸರಗೊಂಡಿದ್ದಾರೆ. ಇದಕ್ಕೆ ನಿರ್ದೇಶಕ ಪವನ್‌ ಒಡೆಯರ್ ಕ್ಷಮೆ ಕೇಳಿದ್ದಾರೆ.

ನಿರ್ದೇಶಕ ಪವನ್‌ ಒಡೆಯರ್

ಆಶಿಕಾ ರಂಗನಾಥ್ ಹೀಗೆ ಕುಡಿದ ಅಮಲಿನಲ್ಲಿ ತೂರಾಡಿರುವ ದೃಶ್ಯ, ಮಧ್ಯದ ಬೆರಳನ್ನು ತೋರಿಸಿ ಹೊರಟು ಹೋಗುವ ದೃಶ್ಯ ಕುರಿತು ಸುದ್ದಿಯಾಗಿತ್ತು. ಆದರೆ, ಇದು ರೇಮೊ ಸಿನಿಮಾದ ಚಿತ್ರೀಕರಣದ ವಿಡಿಯೋ ತುಣುಕು ಅನ್ನೋದು ಆಮೇಲೆ ಗೊತ್ತಾಯಿತು. ಆದ್ರೆ ಸೋಷಿಯಲ್ ಮೀಡಿಯಾ ಹಾಗು ಮಾಧ್ಯಮಗಳಲ್ಲಿ ಆಶಿಕಾ ರಂಗನಾಥ್ ಕುಡಿದು ರಂಪಾಟ ಮಾಡಿದ್ದಾರೆ ಎಂಬ ಸುದ್ದಿಯಂತೆ ಎಲ್ಲಾ ಕಡೆ ಸಿಕ್ಕಾಪಟ್ಟೇ ವೈರಲ್ ಆಗಿರೋದು ಆಶಿಕಾ ರಂಗನಾಥ್ ಅಸಮಾಧಾನಕ್ಕೆ ಕಾರಣವಾಗಿದೆ.

ಈ ರೀತಿಯ ಹೆಡ್ ಲೈನ್​​ಗಳು ಆಶಿಕಾ ರಂಗನಾಥ್ ಅವರಿಗೆ ನೋವುಂಟು ಮಾಡಿರೋ ಕಾರಣ ಈಗ ನಾನು ಸಿನಿಮಾ ಪ್ರಚಾರಕ್ಕೆ ಬರೋಲ್ಲ ಎಂಬ ಮಾತನ್ನ ಹೇಳಿದ್ದಾರಂತೆ. ಹೀಗಾಗಿ ನಿರ್ದೇಶಕ ಪವನ್‌ ಒಡೆಯರ್ ಆಶಿಕಾರಲ್ಲಿ ಕ್ಷಮೆ ಕೇಳಿದ್ದಾರೆ. ಆಶಿಕಾ ಎಣ್ಣೆ ಪಾರ್ಟಿ ಮಾಡುವ ನಟಿ ಅಲ್ಲ. ಸಿನಿಮಾ ಮಾರ್ಕೆಟಿಂಗ್ ತಂಡದಿಂದ ಹೆಚ್ಚು ಕಡಿಮೆ ಅಗಿ ಈ ವಿಡಿಯೋ ಲೀಕ್​ ಅಗಿದೆ. ಇದು ರೇಮೊ ಚಿತ್ರದ ವಿಡಿಯೋ ಎಂದು ಸ್ಪಷ್ಟನೆ‌ ಕೊಟ್ಟಿದ್ದಾರೆ. ಜೊತೆಗೆ ಆಶಿಕಾರಿಗೆ ನೋವುಂಟು ಮಾಡಿದ್ದಕ್ಕೆ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಎಣ್ಣೆ ನಶೆಯಲ್ಲಿ ನಟಿ ಆಶಿಕಾ ರಂಗನಾಥ್ ರಂಪಾಟ ಮಾಡಿದ್ರಾ?!: ವಿಡಿಯೋ ವೈರಲ್

ಇನ್ನೂ ಪವನ್ ಒಡೆಯರ್ ನಿರ್ದೇಶನ, ಇಶಾನ್ ಹಾಗು ಆಶಿಕಾ ರಂಗನಾಥ್ ಅಭಿನಯದ ರೇಮೊ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿದೆ. ಇದೊಂದು ಪಕ್ಕಾ ಮ್ಯೂಸಿಕಲ್ ಲವ್ ಸ್ಟೋರಿಯಾಗಿದ್ದು, ಟ್ರೈಲರ್​​ನಿಂದಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದೆ. ಇದೇ 25ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ 'ರೇಮೊ'.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.