ಸಿನಿಮಾ ಎಂಬ ಕಲರ್ ಫುಲ್ ದುನಿಯಾಗೆ ಪ್ರತಿಭಾವಂತ ಕಲಾವಿದರು ವಿಭಿನ್ನ ಕಂಟೆಂಟ್ ಜೊತೆಗೆ ಬರ್ತಿದ್ದಾರೆ. ಅಂತೆಯೇ ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಮೂಲಕ ನಿರ್ಮಾಣವಾಗಿರುವ, ರಾಮ್ ದೀಪ್ ನಿರ್ದೇಶನದ 'ಡೈಮಂಡ್ ಕ್ರಾಸ್' ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಹೊಸಪೇಟೆ ಉದ್ಯಮಿ ಮನೀಶ್, ಖ್ಯಾತ ನಟ ಮಿತ್ರ ಹಾಗೂ ಅವರ ಸ್ನೇಹಿತರ ಮನೀಶ್ & ಮಿತ್ರ ಎಂಟರ್ಟೈನ್ಮೆಂಟ್ ಮೂಲಕ ಈ ಚಿತ್ರ ಬಿಡುಗಡೆಯಾಗುತ್ತಿದೆ.
ಇತ್ತೀಚೆಗೆ ಚಿತ್ರದ ಟೀಸರ್ ಅನಾವರಣಗೊಂಡಿದೆ. ಬೆಂಗಳೂರಿನ ಪಾತಕ ಲೋಕದಲ್ಲಿ ಗುರುತಿಸಿಕೊಂಡಿದ್ದ ಜೇಡರಹಳ್ಳಿ ಕೃಷ್ಣಪ್ಪ ಸಿನಿಮಾ ಟೀಸರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಜೈಕೃಷ್ಣ ಕೂಡ ಉಪಸ್ಥಿತರಿದ್ದರು.
ಈ ವೇಳೆ, ನಟ ಮಿತ್ರ ಮಾತನಾಡಿ, "ಹೊಸಪೇಟೆ ಉದ್ಯಮಿ ಮನೀಶ್ ನನ್ನ ಮಿತ್ರರು. ಮನೀಶ್ ಅವರಿಗೆ ಸಿನಿಮಾ ನಿರ್ಮಾಣ ಮಾಡುವ ಆಸಕ್ತಿಯಿತ್ತು. ಆದರೆ, ನಾನು ಮೊದಲು ಸಿನಿಮಾ ನಿರ್ಮಾಣ ಮಾಡಬೇಡಿ. ಸಾಕಷ್ಟು ಒಳ್ಳೆಯ ಚಿತ್ರಗಳು ನಿರ್ಮಾಣವಾಗಿರುತ್ತದೆ. ಅಂತಹ ಚಿತ್ರಗಳನ್ನು ವಿತರಣೆ ಮಾಡುವ ಮೂಲಕ ಚಿತ್ರಮಂದಿರಗಳಿಗೆ ತರುವ ಪ್ರಯತ್ನ ಮಾಡಿ. ಆನಂತರ ಸಿನಿಮಾ ಮಾಡಿ ಎಂದು ಸಲಹೆ ನೀಡಿದೆ. ಅದಕ್ಕೆ ಮನೀಶ್ ಒಪ್ಪಿದರು. ನನ್ನ ಕೆಲವು ಸ್ನೇಹಿತರು ಇದಕ್ಕೆ ಜೊತೆಯಾದರು. ಈಗ ಮನೀಶ್ & ಮಿತ್ರ ಎಂಟರ್ಟೈನ್ಮೆಂಟ್ ಸಂಸ್ಥೆಯ ಮೂಲಕ ರಾಮ್ ದೀಪ್ ನಿರ್ದೇಶನದ 'ಡೈಮಂಡ್ ಕ್ರಾಸ್' ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ" ಎಂದರು.
ಇದನ್ನೂ ಓದಿ: Salaar Teaser: ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಟೀಸರ್ ರಿಲೀಸ್; ಕೆಜಿಎಫ್‌ಗೆ ಹೋಲಿಸಿದ ಫ್ಯಾನ್ಸ್!
ಬಳಿಕ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಮನೀಶ್ ಮಾತನಾಡಿ, "ಮಿತ್ರ ಅವರು ಕೊಟ್ಟ ಸಲಹೆ ಚೆನ್ನಾಗಿದೆ. ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ ನಾವು ಕೆಲಸ ಶುರು ಮಾಡಿದ್ದೇವೆ. ಮೊದಲು ಒಳ್ಳೆಯ ಚಿತ್ರಗಳನ್ನು ವಿತರಣೆ ಮಾಡಿ, ಆನಂತರ ನಿರ್ಮಾಣ ಮಾಡುತ್ತೇನೆ. ಈಗ ಮೊದಲ ಹೆಜ್ಜೆಯಾಗಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ತುಂಬಾ ಚೆನ್ನಾಗಿದೆ" ಎಂದರು. "ಇದೊಂದು ಸೈಬರ್ ಕ್ರೈಮ್ ಕಥಾಹಂದರ ಹೊಂದಿರುವ ಚಿತ್ರ ಎಂದ ನಿರ್ದೇಶಕ ರಾಮ್ ದೀಪ್, ಸದ್ಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡಲು ಚಿಂತಿಸಿದ್ದೇವೆ. ಸದ್ಯದಲ್ಲೇ ತೆರೆಗೆ ತರುವುದಾಗಿ ತಿಳಿಸಿದರು.
ಚಿತ್ರತಂಡ ಹೀಗಿದೆ.. ಚಿತ್ರಕ್ಕೆ ರಾಮಚಂದ್ರ ಬಾಬು ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ರೋಜರ್ ನಾರಾಯಣ್ , ನಟಿ ರೂಪಿಕಾ, ರಜತ್ ಅಣ್ಣಪ್ಪ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮನು ಕೆ.ಎಂ ಛಾಯಾಗ್ರಹಣ, ಸಂತೋಷ್ ರಾಧಾಕೃಷ್ಣನ್ ಸಂಕಲನ, ಸಂಗೀತ ನಿರ್ದೇಶಕ ಲೇಖನ್ ಹಾಗೂ ಅನೀಶ್ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸದ್ಯ ಟೀಸರ್ನಿಂದಲೇ ಕುತೂಹಲ ಹುಟ್ಟಿಸಿರೋ ಡೈಮಂಡ್ ಕ್ರಾಸ್ ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ.
ಇದನ್ನೂ ಓದಿ: Salaar: 400 ಕೋಟಿ ರೂಪಾಯಿ ವೆಚ್ಚ, 14 ಅದ್ಭುತ ಸೆಟ್‌ಗಳಲ್ಲಿ ಶೂಟಿಂಗ್! ಸಲಾರ್ ಸಿನಿಮಾ ನಿರ್ಮಾಣದ ರೋಚಕ ಮಾಹಿತಿ