ಮುಂಬೈ: ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ಬಾಲಿವುಡ್ನ ಜನಪ್ರಿಯ ತಾರಾ ಜೋಡಿಗಳಲ್ಲೊಂದು. ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳಂತೆ ಇವರೂ ಕೂಡಾ ಐಷಾರಾಮಿ ಜೀವನ ನಡೆಸುತ್ತಾರೆ. ಇದೀಗ ಪ್ರತಿಷ್ಟಿತ ಬಾಂದ್ರಾ ಪ್ರದೇಶದಲ್ಲಿ 119 ಕೋಟಿ ರೂಪಾಯಿಯ ಮೌಲ್ಯದ ಅಪಾರ್ಟ್ಮೆಂಟ್ ಒಂದರಲ್ಲಿ ನಾಲ್ಕಂತಸ್ತಿನ ಲಕ್ಸುರಿ ಮನೆ ಕೊಂಡುಕೊಂಡಿದ್ದಾರೆ. ಈ ಅಪಾರ್ಟ್ಮೆಂಟ್ ಸಮುದ್ರಕ್ಕೆ ಅಭಿಮುಖವಾಗಿದ್ದು, ಬಾಲಿವುಡ್ನ ನಟ ಶಾರುಖ್ ಖಾನ್ ಮನೆಗೂ ಸಮೀಪದಲ್ಲಿದೆ.
ವರದಿಯೊಂದರ ಪ್ರಕಾರ, 16, 17, 18 ಮತ್ತು 19ನೇ ಮಹಡಿಯನ್ನೊಳಗೊಂಡ ಮನೆ ಇದಾಗಿದ್ದು 1,300 ಚದರಡಿ ಟೆರೇಸ್ ಹೊಂದಿದೆ. ಪ್ರತಿಚದರಡಿಗೆ ಈ ಪ್ರದೇಶದಲ್ಲಿ 1.5 ಲಕ್ಷ ರೂ ಮೌಲ್ಯವಿದ್ದು, 19 ಕಾರುಗಳನ್ನು ಪಾರ್ಕಿಂಗ್ ಮಾಡುವ ಸ್ಥಳಾವಕಾಶ ಹೊಂದಿದೆ.
ಐಷಾರಾಮಿ ಮನೆ ಬ್ಯಾಂಡ್ಸ್ಟ್ಯಾಂಡ್ನ ಸೂಪರ್-ಪ್ರೀಮಿಯಂ ರೆಸಿಡೆನ್ಶಿಯಲ್ ಟವರ್ನಲ್ಲಿದೆ. ವಿಶೇಷವೆಂದರೆ, ಕಂದಾಯ ಇಲಾಖೆಗೆ 7.13 ಕೋಟಿ ರೂಪಾಯಿ ಸ್ಟ್ಯಾಂಪ್ ತೆರಿಗೆಯನ್ನು ರಣವೀರ್ ಪಾವತಿಸಿದ್ದಾರೆ. ಸದ್ಯ ಇವರು ರೋಹಿತ್ ಶೆಟ್ಟಿ ನಿರ್ದೇಶನದ 'ಸರ್ಕಸ್' ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ತಿಂಗಳ ನಂತರ ಮುಂಬೈಗೆ ಆಲಿಯಾ ಭಟ್.. ಏರ್ಪೋರ್ಟ್ನಲ್ಲೇ ಸರ್ಪ್ರೈಸ್ ಕೊಟ್ಟ ರಣಬೀರ್ ಸಿಂಗ್