ETV Bharat / entertainment

ಬ್ರಹ್ಮಾಸ್ತ್ರ ಭಾಗ 2ರಲ್ಲಿ ಮಿಂಚಲಿದ್ದಾರೆ ದೀಪಿಕಾ ರಣ್​​ವೀರ್​ - ನಟ ರಣ್​​ವೀರ್ ಸಿಂಗ್

ಬ್ರಹ್ಮಾಸ್ತ್ರ ಭಾಗ 2 ರಲ್ಲಿ ಭಾಗ 1ರಲ್ಲಿರುವ ನಟ ರಣ್​​​ಬೀರ್ ಕಪೂರ್, ನಟಿ ಆಲಿಯಾ ಭಟ್ ಜೊತೆಗೆ ನಟ ರಣ್​​ವೀರ್ ಸಿಂಗ್, ನಟಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ​​

Deepika Ranveer couple in Brahmastra Part 2
ಬ್ರಹ್ಮಾಸ್ತ್ರ ಭಾಗ 2ರಲ್ಲಿ ದೀಪಿಕಾ ರಣ್​​ವೀರ್​
author img

By

Published : Aug 23, 2022, 3:34 PM IST

ಟ್ರೈಲರ್, ಹಾಡುಗಳಿಂದಲೇ ಸಖತ್ ಸುದ್ದಿಯಾಗುತ್ತಿರುವ ಪೌರಾಣಿಕ ಫ್ಯಾಂಟಸಿ ಸಾಹಸ ಚಿತ್ರ 'ಬ್ರಹ್ಮಾಸ್ತ್ರ ಭಾಗ 1 ಶಿವ' ಸಿನಿಮಾ ಮುಂದಿನ ಭಾಗದ ಬಗ್ಗೆ ಚರ್ಚೆ ಶುರುವಾಗಿದೆ. ಬ್ರಹ್ಮಾಸ್ತ್ರ ಭಾಗ 2 ರಲ್ಲಿ ಭಾಗ 1ರಲ್ಲಿರುವ ನಟ ರಣ್​​​ಬೀರ್ ಕಪೂರ್, ನಟಿ ಆಲಿಯಾ ಭಟ್ ಜೊತೆಗೆ ನಟ ರಣ್​​ವೀರ್ ಸಿಂಗ್, ನಟಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನುವ ಸುದ್ದಿಯಿದೆ. ​​

ಬ್ರಹ್ಮಾಸ್ತ್ರ ಭಾಗ 1 ತೆರೆಗೆ ಬರುವ ಮೊದಲೇ ಚಿತ್ರದ ಎರಡನೇ ಭಾಗದಲ್ಲಿ ತಾರಾ ದಂಪತಿ ನಟ ರಣ್​​ವೀರ್ ಸಿಂಗ್ ಮತ್ತು ಅವರ ಪತ್ನಿ, ನಟಿ ದೀಪಿಕಾ ಪಡುಕೋಣೆ ಪಾತ್ರವರ್ಗವಿರಲಿದೆ ಎಂದು ಬಲ್ಲಮೂಲಗಳು ತಿಳಿಸಿವೆ. ಬ್ರಹ್ಮಾಸ್ತ್ರ ಭಾಗ 2 ದೀಪ್‌ವೀರ್ ಮತ್ತು ರಾಲಿಯಾ ಅವರನ್ನು ಒಟ್ಟಿಗೆ ತರುತ್ತದೆ ಎಂದು ಈ ಯೋಜನೆಯ ಬಗ್ಗೆ ಬಲ್ಲ ಮೂಲವೊಂದು ತಿಳಿಸಿದೆ. ಈ ನಾಲ್ವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಮತ್ತು ರಣಬೀರ್ ಭಾಗ 1 ರಲ್ಲಿರುವ ಪಾತ್ರಗಳಲ್ಲೇ ಮುಂದುವರಿಯುತ್ತಾರೆ. ದೀಪ್​ವೀರ್​​ಗೂ ಸಹ ಪ್ರಮುಖ ಪಾತ್ರವಿರಲಿದೆ ಎಂದು ಮೂಲಗಳು ತಿಳಿಸಿವೆ.

'ಬ್ರಹ್ಮಾಸ್ತ್ರ ಭಾಗ 1 : ಶಿವ' ಎಂಬುದು ಭಾರತೀಯ ಪುರಾಣಗಳಲ್ಲಿ ಆಳವಾಗಿ ಬೇರೂರಿರುವ ಪರಿಕಲ್ಪನೆಗಳು, ಕಥೆಗಳಿಂದ ಸ್ಫೂರ್ತಿ ಪಡೆದ ಸಿನಿಮಾ. ಅಯಾನ್‌ ಮುಖರ್ಜಿ ಅವರ ನಿರ್ದೇಶನದ ಈ ಚಿತ್ರವನ್ನು ಎಸ್.ಎಸ್ ರಾಜಮೌಳಿ ತಮಿಳು, ತೆಲುಗು, ಕನ್ನಡ, ಮಲಯಾಳಂನಲ್ಲಿ ನಿರ್ಮಿಸಿ ಪ್ರಸ್ತುತಪಡಿಸಲಿದ್ದಾರೆ. ಸ್ಟಾರ್ ಸ್ಟುಡಿಯೋಸ್, ಧರ್ಮ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 9ರಂದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ವೈದ್ಯರು, ನರ್ಸ್​​ಗಳ ಸವಾಲುಗಳನ್ನು ತೋರಿಸಲಿದೆ ಸೆಪ್ಟಂಬರ್ 13 ಸಿನಿಮಾ

ಈಗಾಗಲೇ ಪೌರಾಣಿಕ ಫ್ಯಾಂಟಸಿ ಸಾಹಸ ಚಿತ್ರ 'ಬ್ರಹ್ಮಾಸ್ತ್ರ ಭಾಗ 1 : ಶಿವ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಬಾಲಿವುಡ್​ನಲ್ಲಿ ಭರವಸೆ ಮೂಡಿಸಿದೆ. ರಣಬೀರ್ ಕಪೂರ್, ಆಲಿಯಾ ಭಟ್​​, ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ತೆಲುಗು ಸ್ಟಾರ್ ನಾಗಾರ್ಜುನ್ ಅಕ್ಕಿನೇನಿ ಈ ಸಿನಿಮಾದ ಪ್ರಮುಖ ತಾರಾಗಣ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.