ETV Bharat / entertainment

ಸರಳ ಉಡುಪಿನಲ್ಲಿ ಅಭಿಮಾನಿಗಳನ್ನು ಆಕರ್ಷಿಸಿದ ನಟಿ ದೀಪಿಕಾ ಪಡುಕೋಣೆ - ವಿಡಿಯೋ - ಈಟಿವಿ ಭಾರತ ಕನ್ನಡ

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಸರಳವಾದ ಡ್ರೆಸ್​ನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

Deepika Padukone
ದೀಪಿಕಾ ಪಡುಕೋಣೆ
author img

By

Published : Jul 28, 2023, 8:23 PM IST

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ತಮ್ಮ ಫ್ಯಾಷನ್​ನಿಂದಲೇ ಗಮನ ಸೆಳೆಯುತ್ತಾರೆ. ಪ್ರತಿ ಬಾರಿಯೂ ವಿಭಿನ್ನ ಸ್ಟೈಲ್​ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಆಕರ್ಷಿಸುತ್ತಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಯಾವಾಗ ಕಾಣಿಸಿಕೊಂಡರೂ ಸುದ್ದಿಯಾಗುತ್ತಾರೆ. ಸರಳವಾದ ಡ್ರೆಸ್​ ಕೂಡ ಅವರ ಚೆಲುವನ್ನು ತೋರುವಂತೆ ಮಾಡುತ್ತದೆ. ಪಾಪರಾಜಿಗಳ ಗಮನವನ್ನು ಕದಿಯಲು ಯಶಸ್ವಿಯಾಗುವುದರ ಜೊತೆಗೆ ಅಭಿಮಾನಿಗಳನ್ನು ತಮ್ಮ ನೋಟದಿಂದಲೇ ಮಂತ್ರ ಮುಗ್ಧಗೊಳಿಸುತ್ತಾರೆ.

ಇತ್ತೀಚೆಗಿನ ಅವರ ವಿಮಾನ ನಿಲ್ದಾಣದ ನೋಟ ಭಿನ್ನವಾಗಿರಲಿಲ್ಲ. ಶುಕ್ರವಾರ ಅಮೆರಿಕದಿಂದ ವಾಪಸಾಗುವ ವೇಳೆ ಮುಂಬೈ ಏರ್​ಪೋರ್ಟ್​ನಲ್ಲಿ ಕಾಣಿಸಿಕೊಂಡರು. ಸಂಪೂರ್ಣ ಕಪ್ಪು ಉಡುಪಿನಲ್ಲಿ ಕಣ್ಮನ ಸೆಳೆದರು. ಪಾಪರಾಜಿ ಖಾತೆಯಿಂದ ಹಂಚಿಕೊಂಡಿರುವ ವಿಡಿಯೋದಲ್ಲಿ, ದೀಪಿಕಾ ಮ್ಯಾಚಿಂಗ್ ಕಾರ್ಗೋ ಪ್ಯಾಂಟ್‌ಗೆ ಕಪ್ಪು ಕಾಲರ್ ಸ್ವೆಟ್‌ಶರ್ಟ್ ಅನ್ನು ಧರಿಸಿದ್ದರು. ಕೈಯಲ್ಲಿ ಬ್ಲ್ಯಾಕ್​ ಬ್ಯಾಗ್​ ಜೊತೆಗೆ ಸನ್​ಗ್ಲಾಸ್​ನೊಂದಿಗೆ ತಮ್ಮ ನೋಟವನ್ನು ಸಂಪೂರ್ಣಗೊಳಿಸಿದರು. ಚೆನ್ನೈ ಎಕ್ಸ್​ಪ್ರೆಸ್​ ನಟಿ ಕಾರಿನತ್ತ ಸಾಗುವ ವೇಳೆ ಪಾಪರಾಜಿಗಳ ಕ್ಯಾಮರಾ ನೋಡಿ ಮುಗುಳ್ನಕ್ಕರು.

ಅಭಿಮಾನಿಗಳ ಪ್ರತಿಕ್ರಿಯೆ ಹೀಗಿತ್ತು.. ವಿಡಿಯೋವನ್ನು ಕೈಬಿಟ್ಟ ಕೂಡಲೇ ಸಾಮಾಜಿಕ ಮಾಧ್ಯಮ ಬಳಕೆದಾರರು ಕಮೆಂಟ್​ ವಿಭಾಗಕ್ಕೆ ಲಗ್ಗೆ ಇಟ್ಟರು. ನಟಿಯ ಅಂದ ಚೆಂದವನ್ನು ಹಾಡಿ ಹೊಗಳಿದರು. ನೆಟ್ಟಿಗರೊಬ್ಬರು, "ದೀಪಿಕಾ ಸರಳವಾದ ಡ್ರೆಸ್​ನಲ್ಲೂ ಕೊಲ್ಲುತ್ತಾರೆ. ಸೌಂದರ್ಯ" ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, "ಅವರು ಯಾವಾಗಲೂ ವಿಮಾನ ನಿಲ್ದಾಣದ ನೋಟದಿಂದ ಆಕರ್ಷಿಸುತ್ತಾರೆ" ಎಂದಿದ್ದಾರೆ. ಅಭಿಮಾನಿಯೊಬ್ಬರು "ಸಂಪೂರ್ಣ ಸೌಂದರ್ಯ" ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕ್ಯಾಶುವಲ್​ ಲುಕ್​ನಲ್ಲಿ ದೀಪಿಕಾ ಪಡುಕೋಣೆ: ಮಿಲಿಯನ್ ಡಾಲರ್ ಸ್ಮೈಲ್​ನೊಂದಿಗೆ ಫ್ಯಾನ್ಸ್​ ಹೃದಯ ಕದ್ದ ನಟಿ

ದೀಪಿಕಾ ಸಿನಿಮಾಗಳು.. ದೀಪಿಕಾ ಪಡುಕೋಣೆ ಅವರ ಸಿನಿಮಾ ವಿಚಾರವಾಗಿ ನೋಡುವುದಾದರೆ ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ('Kalki 2898 AD') ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗ್​ ಅಶ್ವಿನ್​​ ನಿರ್ದೇಶನದ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡುತ್ತಿದೆ. 600 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​, ಕಮಲ್​ ಹಾಸನ್​​, ದೀಪಿಕಾ ಪಡುಕೋಣೆ, ಬಿಗ್​ ಬಿ ಅಮಿತಾಭ್​ ಬಚ್ಚನ್​​, ದಿಶಾ ಪಟಾನಿ ನಟಿಸಿದ್ದಾರೆ. ಜನವರಿ 12, 2024ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಇದಲ್ಲದೇ ಮುಂಬರುವ ಆಕ್ಷನ್-ಡ್ರಾಮಾ ಫೈಟರ್‌ನಲ್ಲಿ ಬಾಲಿವುಡ್​ ನಟ ಹೃತಿಕ್ ರೋಷನ್ ಜೊತೆಗೆ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಕೂಡ ನಟಿಸಿದ್ದಾರೆ. ಫೈಟರ್ ಜನವರಿ 25, 2024 ರಂದು ಥಿಯೇಟರ್​ಗೆ ಬರಲು ಸಿದ್ಧವಾಗಿದೆ.

ಇದನ್ನೂ ಓದಿ: ರಾಕಿ ರಾಣಿ ಲವ್​ ಸ್ಟೋರಿ: ಆಲಿಯಾಗೆ ಸಪೋರ್ಟ್ ಮಾಡಲು ಬಂದ ರಣ್​ಬೀರ್​-ರಣ್​ವೀರ್ ಜೊತೆ ದೀಪಿಕಾ ಇರಬೇಕಿತ್ತೆಂದ ಫ್ಯಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.