ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕ್ಯಾಶುವಲ್ ಉಡುಗೆಯಲ್ಲಿ ಚೆಕ್ ಇನ್ ಆಗುವಾಗ ವಿಮಾನ ನಿಲ್ದಾಣದ ಹೊರಗೆ ನಿಂತಿದ್ದ ಪಾಪರಾಜಿಗಳು ಅವರ ಫೋಟೋವನ್ನು ಕ್ಲಿಕ್ಕಿಸಿದರು. ಆದರೆ ಅವರ ಡ್ರೆಸ್ಸಿಂಗ್ ಸೆನ್ಸ್ ಟ್ರೋಲಿಗರಿಗೆ ಆಹಾರವಾಯಿತು. ಡಿಸೈನರ್ ಡ್ರೆಸ್ಗಳನ್ನು ಬಿಟ್ಟು ಕ್ಯಾಶುವಲ್ ವೇರ್ನಲ್ಲಿ ಕಾಣಿಸಿದ್ದಕ್ಕೆ ದೀಪಿಕಾ ಅವರನ್ನು ಟ್ರೋಲ್ ಮಾಡಲಾಗಿದೆ.
ನಟಿಯ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ ತಕ್ಷಣ, ನೆಟ್ಟಿಗರು ಅವರ ಡ್ರೆಸ್ಸಿಂಗ್ ಬಗ್ಗೆ ಕಮೆಂಟ್ಗಳನ್ನು ಮಾಡಿದ್ದಾರೆ. ನಟಿ ದೀಪಿಕಾ ಫ್ಯಾಷನ್ಗೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ. ಹೀಗಾಗಿ ಅವರು ಏರ್ಪೋರ್ಟ್ಗೆ ಬರುವಾಗ ಧರಿಸಿದ್ದ ಡ್ರೆಸ್ ನೆಟಿಜನ್ಗಳಿಗೆ ಅಷ್ಟೊಂದು ಇಷ್ಟವಾಗಿಲ್ಲ. ಈ ಹಿಂದೆ ಓಂ ಶಾಂತಿ ಓಂ ನಟಿ ಸ್ಟೈಲಿಶ್ ಡ್ರೆಸ್ಗಳನ್ನೇ ಧರಿಸುತ್ತಿದ್ದರು.
ಹೀಗಾಗಿ ಅಭಿಮಾನಿಗಳು ಪ್ರತಿ ಬಾರಿಯೂ ಅವರಿಂದ ಉತ್ತಮವಾದದನ್ನೇ ನಿರೀಕ್ಷಿಸುತ್ತಾರೆ. ಆದರೆ ಈ ಬಾರಿ ನಟಿ ಸಕಾರಾತ್ಮಕ ಪ್ರಶಂಸೆ ಪಡೆಯುವಲ್ಲಿ ವಿಫಲವಾದರು. ಅವರ ಹಳದಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಯಿತು. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ಅವರ ಉಡುಗೆಯನ್ನು ಶಾಲಾ ಸಮವಸ್ತ್ರವೆಂದೇ ಹೇಳಿದರು. ಇನ್ನೂ ಕೆಲವರು ಸ್ಫೋರ್ಟ್ಸ್ ಯುನಿಫಾರ್ಮ್ ಎಂದು ಕರೆದರು.
- " class="align-text-top noRightClick twitterSection" data="
">
ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್: ಸಾಧಕರ ಸೀಟ್ನಲ್ಲಿ ಸಿಹಿಕಹಿ, ಶಿಕ್ಷಣ ತಜ್ಞ ಗುರುರಾಜ ಕರಜಗಿ
ಅವರ ಡ್ರೆಸ್ಸಿಂಗ್ ಮತ್ತು ಕಂದು ಬಣ್ಣದ ಬ್ಯಾಗ್ ಹಲವು ಟ್ರೋಲ್ಗಳಿಗೆ ದಾರಿ ಮಾಡಿಕೊಟ್ಟಿತು. ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ಬಳಕೆದಾರರು, "ಇದು ಶನಿವಾರದ ನನ್ನ ಶಾಲಾ ಸಮವಸ್ತ್ರವಾಗಿತ್ತು" ಎಂದು ಹೇಳಿದ್ದಾರೆ. ಇನ್ನೊಬ್ಬರು, "ಇದು ಯಾರ ಶಾಲಾ ಯುನಿಫಾರ್ಮ್ ಹಾಕಿಕೊಂಡು ಬಂದ್ರಿ ದೀಪಿಕಾ?" ಎಂದು ಕೇಳಿದ್ದಾರೆ.
ಇದೇ ರೀತಿಯಾಗಿ ನೆಟ್ಟಿಗರು ದೀಪಿಕಾಗೆ ಕಮೆಂಟ್ ಮಾಡಿದ್ದು, ಅವರನ್ನು ಮುಜುಗರಕ್ಕೀಡು ಮಾಡಿದ್ದಾರೆ. ದುಬೈನಲ್ಲಿ ನಡೆಯಲಿರುವ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭಕ್ಕೆ ತೆರಳಲು ದೀಪಿಕಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈಗಾಗಲೇ ನಟಿ ತಮ್ಮ ಫ್ಯಾಷನ್ ಸೆನ್ಸ್ಗೆ ಹೆಸರುವಾಸಿಯಾಗಿದ್ದಾರೆ. ಅದಾಗ್ಯೂ ಅವರು ಈ ಸಮಯದಲ್ಲಿ ಕ್ಯಾಶುವಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಮೆಚ್ಚಿಸಲು ವಿಫಲವಾಗಿದೆ.
ದೀಪಿಕಾ ಪಡುಕೋಣೆ ಮುಂದಿನ ಚಿತ್ರಗಳು: ಇನ್ನು ಬಾಲಿವುಡ್ ಮಸ್ತಾನಿಯ ಮುಂದಿನ ಸಿನಿಮಾ ವಿಚಾರ ಗಮನಿಸುವುದಾದರೆ ದೀಪಿಕಾ ಪಡುಕೋಣೆ 'ಫೈಟರ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರನ್ನು ಆ್ಯಕ್ಷನ್ ಅವತಾರದಲ್ಲಿ ಕಾಣಬಹುದು. ಇದರಲ್ಲಿ ಹೃತಿಕ್ ರೋಷನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರವು 2024ರ ಜನವರಿಯಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಉಳಿದಂತೆ 'ಪ್ರಾಜೆಕ್ಟ್ ಕೆ' ಮತ್ತು 'ದಿ ಇಂಟರ್ನ್' ರಿಮೇಕ್ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ವಿವಾದಗಳ ನಡುವೆಯೇ ಇತ್ತೀಚೆಗೆ ತೆರೆಕಂಡ ಪಠಾಣ್ ಚಿತ್ರ ಅಭೂತಪೂರ್ವ ಯಶಸ್ಸು ಕಂಡಿದೆ.
ಇದನ್ನೂ ಓದಿ: ಹಾಲಿವುಡ್ನಲ್ಲಿ ಅವಕಾಶ ಕೊಡಿಸುತ್ತೇವೆಂದು ಹೇಳಿ ನಟಿಗೆ ವಂಚನೆ ಆರೋಪ: ಇಬ್ಬರು ಅರೆಸ್ಟ್!