ETV Bharat / entertainment

ಟ್ರೋಲ್ಸ್​ಗೆ ಡೋಂಟ್​ ಕೇರ್: ಟ್ರೋಲರ್​ಗಳನ್ನೇ ಟ್ರೋಲ್ ಮಾಡಿದ ದೀಪಿಕಾ ಪಡುಕೋಣೆ! - Ranveer Singh

Deepika Padukone reacts on Trolls: ಟ್ರೋಲರ್​ಗಳಿಗೆ ನಟಿ ದೀಪಿಕಾ ಪಡುಕೋಣೆ ತಮ್ಮದೇ ಶೈಲಿಯಲ್ಲಿ ಗೂಸಾ ಕೊಟ್ಟಿದ್ದಾರೆ.

Deepika Padukone reacts on Trolls
ಟ್ರೋಲರ್​ಗಳನ್ನೇ ಟ್ರೋಲ್ ಮಾಡಿದ ದೀಪಿಕಾ ಪಡುಕೋಣೆ
author img

By ETV Bharat Karnataka Team

Published : Oct 29, 2023, 1:51 PM IST

ಬಾಲಿವುಡ್‌ನ ಪವರ್​ಫುಲ್​, ಪಾಪ್ಯುಲರ್ ಕಪಲ್ ರಣ್​​ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ 'ಕಾಫಿ ವಿತ್ ಕರಣ್'ನ ಮೊದಲ ಸಂಚಿಕೆಯಲ್ಲಿ ಅತಿಥಿಗಳಾಗಿ ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿರುವ 'ದೀಪ್​ವೀರ್'​ ಜೋಡಿ ಜನಪ್ರಿಯ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅಭಿಮಾನಿಗಳ ಖುಷಿಗೆ ಕಾರಣವಾಯ್ತು. ಆದ್ರೆ ಟ್ರೋಲರ್​ಗಳು ಆಟ ಶುರು ಮಾಡಿದ್ದ ಬೆನ್ನಲ್ಲೇ, ದೀಪಿಕಾ ಪಡುಕೋಣೆ ತಮ್ಮದೇ ಶೈಲಿಯಲ್ಲಿ ಟ್ರೋಲರ್​ಗಳಿಗೆ ಗೂಸಾ ಕೊಟ್ಟರು.

ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್​ ಜೋಹರ್​ ನಿರೂಪಣೆಯಲ್ಲಿ ಮೂಡಿಬರುವ 'ಕಾಫಿ ವಿತ್​ ಕರಣ್​' ಸೀಸನ್​ 8 ಅಕ್ಟೋಬರ್​​ 26ರಂದು ಆರಂಭಗೊಂಡಿದೆ. 20 ವರ್ಷಗಳಿಂದ ಪ್ರಸಾರವಾಗುತ್ತಿರುವ ಚಾಟ್​ ಶೋಗೆ ದೊಡ್ಡ ಸಂಖ್ಯೆಯ ಪ್ರೇಕ್ಷಕರಿದ್ದಾರೆ. ತಮ್ಮ ಮೆಚ್ಚಿನ ನಟ, ನಟಿಯರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿರುತ್ತಾರೆ. ಅದರಂತೆ ಸೀಸನ್​ 8ರ ಮೊದಲ ಅತಿಥಿಗಳಾಗಿ 'ದೀಪ್​ವೀರ್'​ ಜೋಡಿ ಆಗಮಿಸಿದ್ದರು.

ಅಭಿಮಾನಿಗಳು ಕಾರ್ಯಕ್ರಮ ಇಷ್ಟಪಟ್ಟರೆ, ಕೆಲ ನೆಟ್ಟಿಗರು ಈ ಜೋಡಿಯನ್ನು ಅದರಲ್ಲೂ ದೀಪಿಕಾ ಪಡುಕೋಣೆ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ. ನಟಿಯ ಕೆಲ ಕಾಮೆಂಟ್‌ಗಳೇ ಇದಕ್ಕೆ ಕಾರಣ. ಇದಕ್ಕೆ ಪ್ರತಿಕ್ರಿಯೆಯಾಗಿ ದೀಪಿಕಾ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ ಟ್ರೆಂಡ್​ ಫಾಲೋ ಮಾಡಿದ ಪಠಾಣ್​ ಬ್ಯೂಟಿ, ಸೋ ಬ್ಯೂಟಿಫುಲ್, ಸೋ ಎಲಿಗೆಂಟ್​​, ಜಸ್ಟ್ ಲುಕಿಂಗ್​ ಲೈಕ್ ಅ ವಾವ್ಹ್, ಜಸ್ಟ್ ಲುಕಿಂಗ್​ ಲೈಕ್ ಅ ವಾವ್ಹ್ ಎಂದು ಹೇಳಿದ್ದಾರೆ.

ಮಿನುಗುವ ಉಡುಗೆ, ಕಿವಿಯೋಲೆ ಧರಿಸಿ ಸುಂದರವಾಗಿ ಕಾಣಿಸಿಕೊಂಡಿರುವ ನಟಿ ತಮ್ಮದೇ ಶೈಲಿಯಲ್ಲಿ ಟ್ರೋಲರ್​ಗಳನ್ನೇ ಟ್ರೋಲ್​ ಮಾಡಿದ್ದಾರೆ. ಈ ವಿಡಿಯೋ ಟ್ರೋಲರ್​ಗಳಿಗೆ ನಟಿ ಕೊಟ್ಟ ಗೂಸಾ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ನಟಿಯ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: '12th ಫೇಲ್' ಕಲೆಕ್ಷನ್​​ ಎಷ್ಟು? ಕಂಗನಾ ಮೊಗದಲ್ಲಿ ಕಾಣದ 'ತೇಜಸ್'; ಥಿಯೇಟರ್‌ಗಳಿಗೆ ಹೋಗಿ ಎಂದ ತಾರೆ!

ದೀಪಿಕಾ ಪಡುಕೋಣೆ ಕೊನೆಯದಾಗಿ ಪಠಾಣ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ವಿವಾದ ಎದುರಿಸಿದ್ದ ಸಿನಿಮಾ ಸಾವಿರ ಕೋಟಿ ರೂ.ನ ಕ್ಲಬ್​ ಸೇರುವಲ್ಲಿ ಯಶಸ್ವಿಯಾಯಿತು. ಶಾರುಖ್​​ ಜೊತೆ ತೆರೆ ಹಂಚಿಕೊಂಡು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದರು. ಇತ್ತೀಚೆಗಷ್ಟೇ ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿರುವ ಜವಾನ್​ ಸಿನಿಮಾ ಸಹ ಸಾವಿರ ಕೋಟಿ ರೂ.ನ ಕ್ಲಬ್ ಸೇರಿದ್ದು, ಇದರಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಫೈಟರ್​, ಸಿಂಘಂ ಎಗೈನ್​, ಕಲ್ಕಿ 2898 ಎಡಿ ನಟಿಯ ಮುಂದಿನ ಸಿನಿಮಾಗಳು.

ಇದನ್ನೂ ಓದಿ: ಕಪ್ಪು ಸೀರೆಯಲ್ಲಿ ಹಾಲ್ಗೆನ್ನೆ ಸುಂದರಿ, ಬೆಳದಿಂಗಳಂಥ ರೂಪರಾಶಿ! ತಮನ್ನಾ ಭಾಟಿಯಾ ಫೋಟೋಗಳನ್ನು ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.