ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಿನಿಮಾ ಎಂಬ ಬಣ್ಣದ ಜಗತ್ತಿನಲ್ಲಿ ಬಹು ಬೇಡಿಕೆಯ ತಾರೆಯಾಗಿ ಗುರುತಿಸಿಕೊಂಡಿದ್ದಾರೆ. ಪತಿ, ನಟ ರಣ್ವೀರ್ ಸಿಂಗ್ ಕೂಡ ಕಡಿಮೆಯೇನಿಲ್ಲ. ಬಾಲಿವುಡ್ನ ಪವರ್ಫುಲ್, ಪಾಪ್ಯುಲರ್ ಕಪಲ್. ಸದ್ಯ ದೀಪಿಕಾ ಪಡುಕೋಣೆ ಭಾರತೀಯ ಚಿತ್ರರಂಗದ ನಂಬರ್ ಒನ್ ನಟಿ ಎಂದು ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಖತ್ ಬ್ಯುಸಿ ಶೆಡ್ಯೂಲ್ ನಡುವೆ ಒಟ್ಟಿಗೆ ಕಳೆಯ ಸಮಯ ಕಳೆಯುವುದು ಈ ಜೋಡಿಗೆ ಒಂದು ಚಾಲೆಂಜಿಂಗ್ ಟಾಸ್ಕ್. ಇತ್ತೀಚೆಗೆ ಸಂದರ್ಶನದಲ್ಲಿ ಭಾಗಿಯಾದ ಅಭಿನೇತ್ರಿ ದೀಪಿಕಾ ಪಡುಕೋಣೆ, ಪ್ರೀತಿಸುವವರಿಗಾಗಿ ಸಮಯ ಮಾಡಿಕೊಳ್ಳಬೇಕು. ತಮ್ಮ ಸಮಯವನ್ನು ಹೊಂದಿಸಿಕೊಳ್ಳಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೀಪಿಕಾ ಮತ್ತು ರಣ್ವೀರ್ ಪರಸ್ಪರ ಸಮಯ ಕಳೆಯಲು ಹೇಗೆ ಪ್ಲಾನ್ ಮಾಡುತ್ತಾರೆಂಬುದರ ಕುರಿತು ನಟಿ ಸಂದರ್ಶನದಲ್ಲಿ ಹಂಚಿಕೊಂಡರು. ಪತಿಯೊಂದಿಗೆ ಉತ್ತಮ ಸಮಯ ಕಳೆಯುವುದು ನನಗೆ ಬಹಳ ಮುಖ್ಯ. ಇದಕ್ಕಾಗಿ ಇಬ್ಬರೂ ಪ್ರಯತ್ನ ಮಾಡಬೇಕಾಗುತ್ತದೆ. ಒನ್ ಸೈಡೆಡ್ ಎಫರ್ಟ್ನಿಂದ ಇದು ಸಾಧ್ಯವಿಲ್ಲ ಎಂದು ದೀಪಿಕಾ ತಿಳಿಸಿದರು.
ತಮ್ಮ ಕೆಲಸ ವಿಚಾರವಾಗಿ ಶೂಟಿಂಗ್ ಶೆಡ್ಯೂಲ್ ಸಹ ಮಹತ್ವದ ವಿಚಾರ. ಕೆಲವೊಮ್ಮೆ ಒಂದೇ ಸಿಟಿಯಲ್ಲಿದ್ದರೂ ಸಹ, ಒಟ್ಟಿಗೆ ಸಮಯ ಕಳೆಯಲು ಹರಸಾಹಸಪಡಬೇಕಾಗುತ್ತದೆ. ಎಷ್ಟು ಹೊತ್ತು ಕಳೆಯುತ್ತೇವೆಂಬುದಕ್ಕೂ ಹೆಚ್ಚಾಗಿ, ದಂಪತಿಗಳಾಗಿ ಕಳೆಯುವ ಕ್ಷಣ (ಗುಣಮಟ್ಟದ ಸಮಯ) ಬಹಳ ಮಹತ್ವದ್ದು. ಆದಷ್ಟು ಗುಣಮಟ್ಟದ ಸಮಯ ಹೊಂದಲು ನಾವು ಇಷ್ಟಪಡುತ್ತೇವೆ. ನಮ್ಮ ಕುಟುಂಬಗಳೊಂದಿಗೂ ಉತ್ತಮ ಸಮಯ ಕಳೆಯಲು ಇಷ್ಟಪಡುತ್ತೇವೆ ಎಂದು ನಟಿ ತಿಳಿಸಿದರು.
ರಣ್ವೀರ್ ಜೊತೆ ಸಮಯ ಕಳೆಯಲು ದೀಪಿಕಾ ಅದೆಷ್ಟು ಇಷ್ಟಪಡುತ್ತಾರೆಂಬುದನ್ನು ಸಹ ಒತ್ತಿ ಹೇಳಿದರು. ವೀಕೆಂಡ್ನಲ್ಲಿ ಲಿವಿಂಗ್ ರೂಮ್ ಅನ್ನು ಡ್ಯಾನ್ಸ್ ಫ್ಲೋರ್ ಆಗಿ ಪರಿವರ್ತಿಸುತ್ತೇವೆ. ಮೆಚ್ಚಿನ ಟ್ಯೂನ್ಗಳಿಗೆ ಇಬ್ಬರೂ ಒಟ್ಟಿಗೆ ಹೆಜ್ಜೆ ಹಾಕುತ್ತೇವೆ. ಮುಂಜಾನೆವರೆಗೂ ಈ ಡ್ಯಾನ್ಸ್ ಸೆಷನ್ ನಡೆಯುತ್ತದೆ ಎಂಬುದನ್ನು ದೀಪಿಕಾ ಬಹಿರಂಗಪಡಿಸಿದರು.
ಇದನ್ನೂ ಓದಿ: 'ಗೇಮ್ ಸ್ಟಾರ್ಟ್': ಬಿಗ್ ಬಾಸ್ ಮನೆಯಲ್ಲಿ ಉಳಿಯಲು ವರ್ತೂರು ಸಂತೋಷ್ ನಿರ್ಧಾರ
ಸಿನಿಮಾ ವಿಚಾರ ಗಮನಿಸುವುದಾದರೆ, ದೀಪಿಕಾ ಪಡುಕೋಣೆ ಈ ವರ್ಷ ಪಠಾಣ್ ಮತ್ತು ಜವಾನ್ ಮೂಲಕ ಸಖತ್ ಸದ್ದು ಮಾಡಿದ್ದಾರೆ. ಎರಡೂ ಚಿತ್ರಗಳು 2023ರ ಬ್ಲಾಕ್ಬಸ್ಟರ್ ಸಿನಿಮಾಗಳಾಗಿ ಹೊರಹೊಮ್ಮಿವೆ. ಎರಡೂ ಚಿತ್ರಗಳಲ್ಲಿ ಶಾರುಖ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಮುಂದಿನ ಸಿನಿಮಾ ಹೃತಿಕ್ ರೋಷನ್ ಜೊತೆಗಿನ 'ಫೈಟರ್'. ಬಿಗ್ ಬಜೆಟ್ ಸಿನಿಮಾ 'ಕಲ್ಕಿ 2898 ಎಡಿ'ನಲ್ಲಿ ಪ್ರಭಾಸ್ ಸೇರಿದಂತೆ ಬಿಗ್ ಸ್ಟಾರ್ಸ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇನ್ನೂ ರಣ್ವೀರ್ ಸಿಂಗ್ ಅವರು ಪ್ರೀತಿಯ ಪತ್ನಿ ದೀಪಿಕಾ ಪಡುಕೋಣೆ ಸೇರಿದಂತೆ ಅಜಯ್ ದೇವಗನ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ನಟಿಸುತ್ತಿರುವ ಸಿಂಗಮ್ ಎಗೈನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ: ಹೊಸ ಚಿತ್ತಾರಗಳಲ್ಲಿ ಚೆಲುವೆ ಮಿಂಚಿಂಗ್