ETV Bharat / entertainment

Deepika Padukone: ಗಂಡನ ಸಿನಿಮಾ ವೀಕ್ಷಿಸಿದ ದೀಪಿಕಾ ಪಡುಕೋಣೆ; ಜಾಕೆಟ್​​ನಲ್ಲಿ ರಣ್​​​ವೀರ್​ ಭಾವಚಿತ್ರ - ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ

Rocky Aur Rani Kii Prem Kahaani: ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ತಮ್ಮ ಜಾಕೆಟ್​​ನಲ್ಲಿ ಪತಿ ರಣ್​​​ವೀರ್ ಸಿಂಗ್​​ ಭಾವಚಿತ್ರ ಹಾಕಿಸಿಕೊಂಡು ಅಭಿಮಾನಿಗಳ ಗಮನ ಸೆಳೆದರು.

deepika padukone ranveer singh
ದೀಪಿಕಾ ಪಡುಕೋಣೆ ​ರಣ್​ವೀರ್ ಸಿಂಗ್
author img

By

Published : Jul 30, 2023, 12:38 PM IST

ಬಾಲಿವುಡ್ ಪವರ್​ಫುಲ್​ ಸ್ಟಾರ್ ಕಪಲ್​ ರಣ್​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ. ನಟ ರಣ್​ವೀರ್​ ಅವರು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ವೀಕ್ಷಿಸಲು ಹೆಂಡತಿಯನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋದಂತೆ ತೋರುತ್ತಿವೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಫೋಟೋಗಳು ಇದನ್ನೇ ಹೇಳುತ್ತಿವೆ. ಚಿತ್ರದ ಸ್ಪೆಷಲ್ ಸೆಲೆಬ್ರಿಟಿ​ ಶೋ ಅನ್ನು ಮಿಸ್​ ಮಾಡಿಕೊಂಡಿದ್ದ ದೀಪಿಕಾ ಅಂತಿಮವಾಗಿ ರಣ್​​ವೀರ್‌ ಅವರೊಂದಿಗೆ ಸಿನಿಮಾ ನೋಡಿದ್ದಾರೆ. ಮುಂಬೈನಲ್ಲಿ ಪಿವಿಆರ್​ನಿಂದ ಹೊರಬಂದ ದೀಪ್​ವೀರ್​ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದರು.

ಈಗಾಗಲೇ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿರುವ ಈ ಜೋಡಿ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ರಣ್​ವೀರ್ ಸಿಂಗ್ ಭಾವಚಿತ್ರವಿರುವ ದೀಪಿಕಾ ಅವರ ಡ್ರೆಸ್ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ವೈರಲ್ ಫೋಟೋಗಳಲ್ಲಿ ರಣ್​​ವೀರ್ ಬ್ಲ್ಯಾಕ್​​ ಡ್ರೆಸ್, ಮಾಸ್ಕ್​​ನಲ್ಲಿ ಕಾಣಿಸಿಕೊಂಡರೆ, ದೀಪಿಕಾ ಡೆನಿಮ್​​ನಲ್ಲಿ ಕಾಣಿಸಿಕೊಂಡರು. ಸಪೋರ್ಟಿವ್ ವೈಫ್​ ದೀಪಿಕಾ ಅವರ ಜಾಕೆಟ್​ ಮೇಲೆ RS (Ranveer Singh) ಎಂದು ಬರೆಯಲಾಗಿತ್ತು. ಅಲ್ಲದೇ ಗಂಡನ ಭಾವಚಿತ್ರ ನಟಿಯ ಜಾಕೆಟ್​ನಲ್ಲಿತ್ತು.

ಪದ್ಮಾವತ್ ಸಿನಿಮಾ ನಟಿ ತಮ್ಮ ವಿಶಿಷ್ಟ ಫ್ಯಾಶನ್ ಸೆನ್ಸ್‌ನಿಂದ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಎಂದಿಗೂ ಹಿನ್ನೆಡೆ ಕಂಡಿಲ್ಲ. ವಿಭಿನ್ನ ಫ್ಯಾಶನ್ ಸೆನ್ಸ್​ಗೆ ಹೆಸರುವಾಸಿಯಾಗಿರುವ ನಟಿ ಇವರು. ನಟಿಯ ಡ್ರೆಸ್ಸಿಂಗ್​ ಶೈಲಿಯನ್ನು ಹಲವರು ಫಾಲೋ ಮಾಡೋದುಂಟು. ಈ ಬಾರಿ ಪತಿಗೆ ಬೆಂಬಲ ಸೂಚಿಸುವ ಸಲುವಾಗಿ ತಮ್ಮ ಜಾಕೆಟ್​ ಅನ್ನು ವಿಶೇಷವಾಗಿ ಡಿಸೈನ್​ ಮಾಡಿಸಿಕೊಂಡಿದ್ದಾರೆ. ಹೌದು, ನಟಿ ತೊಟ್ಟ ಜಾಕೆಟ್‌ನ ಹಿಂಭಾಗದಲ್ಲಿ ರಣ್​​ವೀರ್‌ ಅವರ ದೊಡ್ಡ ಫೋಟೋ ಇದ್ದು, ಸೋಷಿಯಲ್​ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ.

ಇದನ್ನೂ ಓದಿ: RARKPK: ತೆರೆಕಂಡ ಎರಡೇ ದಿನದಲ್ಲಿ ₹27 ಕೋಟಿ ಬಾಚಿದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ'

ಸಿನಿಮಾ ವೀಕ್ಷಿಸಲು ಹೊರಡುತ್ತಿದ್ದಂತೆ, ರಣ್​​ವೀರ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ದೀಪಿಕಾ ಜೊತೆಗಿನ ಸುಂದರ ಸೆಲ್ಫಿ ಹಂಚಿಕೊಂಡಿದ್ದಾರೆ. ಫೋಟೋದ ಜೊತೆಗೆ, ಅವರು ತಮ್ಮ ಫಾಲೋವರ್ಸ್​ಗೆ ಕೆಲ ಪ್ರಶ್ನೆಯನ್ನೂ ಕೇಳಿದ್ದಾರೆ. ಚಲನಚಿತ್ರವನ್ನು ದೀಪಿಕಾ ಇಷ್ಟಪಡುತ್ತಾರೆಯೇ ಅಥವಾ ಇಲ್ಲವೇ ಎಂದು ಕೇಳುವ ಪ್ರಶ್ನೆಯಲ್ಲಿ ಉತ್ತರಕ್ಕೆ ಆಯ್ಕೆಗಳನ್ನೂ ಕೊಟ್ಟಿದ್ದಾರೆ. "ಅವರು ಸಿನಿಮಾವನ್ನು ಇಷ್ಟಪಡುತ್ತಾರೆ", "ಸಿನಿಮಾವನ್ನು ಬಹಳ ಪ್ರೀತಿ ಮಾಡುತ್ತಾರೆ" ಮತ್ತು "ಶಟ್​ ಅಪ್​, ಚಪ್ಪಲಿ ಏಟು ತಿನ್ನುತ್ತೀಯಾ'' ಎಂಬ ಆಯ್ಕೆಗಳನ್ನು ಕೊಟ್ಟಿದ್ದರು.

ಇದನ್ನೂ ಓದಿ: 'ನನ್ನ ಸಿಂಬಾ, ಎಲ್ಲರ ರಾಕಿ': ರಣ್​​ವೀರ್ ಸಿಂಗ್ ಜೊತೆ ಮತ್ತೆ ಸಾರಾ ಅಲಿ ಖಾನ್​ ಸಿನಿಮಾ

ಸಿನಿಮಾ ಬಿಡುಗಡೆಗೂ ಮುನ್ನ ಸೆಲೆಬ್ರಿಟಿಗಳಿಗಾಗಿ ಹಮ್ಮಿಕೊಂಡಿದ್ದ ಸ್ಪೆಷಲ್ ಶೋನಲ್ಲಿ ದೀಪಿಕಾ ಗೈರಾಗಿದ್ದರು. ಹಾಗಾಗಿ ಈ ಜೋಡಿ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಊಹಾಪೋಹ ಹಬ್ಬಿತ್ತು. ವರದಿಗಳ ಪ್ರಕಾರ ದೀಪಿಕಾ ತಮ್ಮ ಕೆಲಸದ ಸಲುವಾಗಿ ಹೈದರಾಬಾದ್​ನಲ್ಲಿದ್ದರು. ಬಳಿಕ ಸಿನಿಮಾ ತೆರೆಕಂಡ ಮೊದಲ ದಿನ ನಿರ್ದೇಶಕ ಕರಣ್​ ಜೋಹರ್​ ಮನೆಯಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಗೆ ಆಗಮಿಸಿ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಇದೀಗ ಗಂಡನ ಜೊತೆ ಸಿನಿಮಾ ವೀಕ್ಷಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.