ಬಾಲಿವುಡ್ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಶುಕ್ರವಾರ ಮುಂಬೈ ವಿಮಾನ ನಿಲ್ದಾಣದ ಹೊರಗೆ ಕಾಣಿಸಿಕೊಂಡಿದ್ದಾರೆ. ಆಸ್ಕರ್ 2023 ಪ್ರೆಸೆಂಟರ್ ಆಗಿ ಕಾಣಿಸಿಕೊಳ್ಳಲಿರುವ ದೀಪಿಕಾ ಪಡುಕೋಣೆ ಪಾಪರಾಜಿಗಳನ್ನು ಕಂಡು ಸ್ಮೈಲ್ ಮಾಡಿದ್ದಾರೆ. ಆಸ್ಕರ್ ಪ್ರೆಸೆಂಟರ್ಗಳ ಪೈಕಿ ಒಬ್ಬರಾಗಿ ಆಯ್ಕೆಯಾದ ಸುದ್ದಿಯನ್ನು ಹಂಚಿಕೊಂಡ ಬಳಿಕ, ನಟಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಪದ್ಮಾವತ್, ಎಂದಿನಂತೆ ಏರ್ಪೋರ್ಟ್ನಲ್ಲಿ ಕೂಲ್ ಮತ್ತು ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಏರ್ಪೋರ್ಟ್ ಲುಕ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾದರರು ಮೆಚ್ಚುಗೆ ಸೂಚಿಸಿದ್ದಾರೆ.
- " class="align-text-top noRightClick twitterSection" data="
">
ಆಸ್ಕರ್ 2023 ಪ್ರೆಸೆಂಟರ್ ಪಟ್ಟಿ ಬಿಡುಗಡೆ ಆದ ಹಿನ್ನೆಲೆ, ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ನಟಿ ದೀಪಿಕಾ ಪಡುಕೋಣೆ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ನಟಿಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಪಾಪರಾಜಿಗಳಿಗೆ, ನಗುಮೊಗದಿಂದ ಪ್ರತಿಕ್ರಿಯೆ ಕೊಟ್ಟಿದ್ದಾರೆ ದೀಪಿಕಾ ಪಡುಕೋಣೆ. ಎಂದಿನಂತೆ ಸಿಂಪಲ್ಲಾಗಿ ಕಾಣಿಸಿಕೊಂಡಿರುವ ಪಡುಕೋಣೆ, ವೈಟ್ ಟೀ ಶರ್ಟ್, ಬ್ಲೂ ಡೆನಿಮ್ ಮತ್ತು ಜಾಕೆಟ್ ಧರಿಸಿದ್ದರು. ಕೂದಲನ್ನು ಸಡಿಲವಾಗಿ ಬಿಟ್ಟು, ಸ್ಟೈಲಿಶ್ ಹ್ಯಾಂಡ್ ಬ್ಯಾಗ್ ಹಿಡಿದಿದ್ದರು. ಅತಿ ಕಡಿಮೆ ಮೇಕಪ್ನಲ್ಲಿ ಕಾಣಿಸಿಕೊಂಡರು.
ವಿಮಾನ ನಿಲ್ದಾಣದಿಂದ ಹೊರಬರುವ ವೇಳೆ ನಟಿ ಅಭಿಮಾನಿಯೊಂದಿಗೆ ಫೋಟೋ ಸಹ ಕ್ಲಿಕ್ಕಿಸಿಕೊಂಡರು. ಪಾಪರಾಜಿಗಳು ದೀಪಿಕಾ ಪಡುಕೋಣೆ ಏರ್ಪೋರ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆಸ್ಕರ್ 2023 ಪ್ರೆಸೆಂಟರ್ ಆಗಿ ಆಯ್ಕೆ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಟಿಯ ಫೋಟೋಗಳ ಕಾಮೆಂಟ್ ವಿಭಾಗ ಫೈಯರ್, ಹಾರ್ಟ್ ಇಮೋಜಿಗಳಿಂದ ತುಂಬಿವೆ. 'ಅಭಿನಂದನೆಗಳು ದೀಪಿಕಾ ಪಡುಕೋಣೆ', 'ನಿಮಗೆ ಮತ್ತು ನಮ್ಮ ದೇಶಕ್ಕೆ ಹೆಮ್ಮೆಯ ಕ್ಷಣ', 'ದೊಡ್ಡ ಜಾಗತಿಕ ತಾರೆ' ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ನಿನ್ನೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ನಟಿ ದೀಪಿಕಾ ಪಡುಕೋಣೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಪ್ರೆಸೆಂಟರ್ ಪಟ್ಟಿಯನ್ನು ಶೇರ್ ಮಾಡಿದ್ದರು. ಈ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಅವರ ಹೆಸರಿದೆ. ಆಸ್ಕರ್ ಪ್ರಶಸ್ತಿ ಹಸ್ತಾಂತರ ಮಾಡುವವರ ಪೈಕಿ ಒಬ್ಬರಾಗಿ ಬಾಲಿವುಡ್ ನಟಿ ಆಯ್ಕೆಯಾಗಿದ್ದು, ಭಾರತೀಯ ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಗೆ ಹೆಮ್ಮೆ ತರಿಸಿದೆ. ಇದೇ ಮಾರ್ಚ್ 12 ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅಮೆರಿಕದಲ್ಲಿ ನಡೆಯಲಿದೆ. ಅಂದು ಸಾಧಕರಿಗೆ ನಟಿ ದೀಪಿಕಾ ಪಡುಕೋಣೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮಾರ್ಚ್ 12ರಂದು ನಡೆಯಲಿರುವ ಆಸ್ಕರ್ 2023 ಭಾರತಕ್ಕೆ ವಿಶೇಷವಾಗಿದೆ. ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಜೊತೆಗೆ ಎರಡು ಕಿರುಚಿತ್ರಗಳು ಸಹ ನಾಮಿನೇಟ್ ಆಗಿದೆ. ಈ ಹಿನ್ನೆಲೆ ಎಲ್ಲರ ಗಮನ ಆಸ್ಕರ್ ಮೇಲೆ ಕೇಂದ್ರೀಕೃತವಾಗಿದೆ.
ಇದನ್ನೂ ಓದಿ: ಆಸ್ಕರ್ ವೇದಿಕೆ ಏರಲಿರುವ ದೀಪಿಕಾ ಪಡುಕೋಣೆ: ಹೆಮ್ಮೆ ವ್ಯಕ್ತಪಡಿಸಿದ ಪತಿ ರಣ್ವೀರ್
ನಟಿ ದೀಪಿಕಾ ಪಡುಕೋಣೆ ಅವರ ಸಿನಿರಂಗದ ಸಾಧನೆ ಅಪಾರ. ಜಾಗತಿಕ ಮಟ್ಟದಲ್ಲಿ ದೇಶವನ್ನು ಹಲವು ಬಾರಿ ಪ್ರತಿನಿಧಿಸಿದ್ದಾರೆ. ಇತ್ತೀಚೆಗೆ ನಡೆದ ಫಿಫಾ 2022 ಕ್ರೀಡಾಕೂಟದ ಫೈನಲ್ ಪಂದ್ಯಕ್ಕೂ ಮೊದಲು ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ್ದರು. ಇದೀಗ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದ ಗೌರವಕ್ಕೆ ಪಾತ್ರರಾಗಲಿದ್ದಾರೆ ವಿಶ್ವದ 9ನೇ ಸುದಂರಿ ಖ್ಯಾತಿಯ ನಟಿ ದೀಪಿಕಾ ಪಡುಕೋಣೆ.
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ WWE ವರ್ಲ್ಡ್ ಚಾಂಪಿಯನ್ ದಿ ಗ್ರೇಟ್ ಖಲಿ ಎಂಟ್ರಿ