ETV Bharat / entertainment

'ದೀಪಿಕಾ ಅಮರ್​​, ಜಾನ್​ ಅಬ್ರಾಹಂ ಅಕ್ಬರ್​, ನಾನು ಅಂಥೋನಿ': ಪಠಾಣ್‌ ಬಗ್ಗೆ ಶಾರುಖ್​ ಒಗ್ಗಟ್ಟಿನ ವ್ಯಾಖ್ಯಾನ - etv bharat kannada

ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ನಟಿಸಿರುವ 'ಪಠಾಣ್​' ಸಿನಿಮಾ ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತಿದೆ. ಎಲ್ಲಾ ವಿವಾದಗಳನ್ನು ಮೆಟ್ಟಿ ನಿಂತು ಯಶಸ್ಸಿನತ್ತ ಸಾಗುತ್ತಿದೆ. ಈ ಖುಷಿಯನ್ನು ಶಾರುಖ್ ಖಾನ್ ವಿಭಿನ್ನವಾಗಿ​ ವ್ಯಕ್ತಪಡಿಸಿದರು.

SRK
ಪಠಾಣ್ ಸಿನಿಮಾ
author img

By

Published : Jan 31, 2023, 11:47 AM IST

ಬಾಲಿವುಡ್​ನಲ್ಲಿ 'ಪಠಾಣ್'​ ಸಿನಿಮಾ ಹೊಸ ಇತಿಹಾಸ ರಚಿಸುವತ್ತ ಮುನ್ನುಗ್ಗುತ್ತಿದೆ. ನಾಲ್ಕು ವರ್ಷ ವಿರಾಮ ತೆಗೆದುಕೊಂಡ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ಮತ್ತೆ ತೆರೆಯ ಮೇಲೆ ಧೂಳೆಬ್ಬಿಸಿದ್ದಾರೆ. ಚಿತ್ರದ ವಿರುದ್ಧ ಭಾರಿ ವಿವಾದವೇ ಸೃಷ್ಟಿಯಾಗಿದ್ದರೂ ಸಹ 6 ದಿನದಲ್ಲಿ 542 ಕೋಟಿ ರೂ ಗಳಿಕೆ ಮಾಡಿದೆ. ಈ ಮೂಲಕ ಹಿಂದಿ ಸಿನಿಮಾ ಲೋಕಕ್ಕೆ ಪಠಾಣ್​ ಹೊಸ ಮುನ್ನುಡಿ ಬರೆದಿದೆ.

ಈ ಬಗ್ಗೆ ಯಶ್​ ರಾಜ್‌ ಪಿಲ್ಮ್ಸ್​ ಆಯೋಜಿಸಿದ ಸಮಾರಂಭದಲ್ಲಿ ಹರ್ಷ ವ್ಯಕ್ತಪಡಿಸಿರುವ ಶಾರುಖ್​, "1977 ರಲ್ಲಿ ತೆರೆಕಂಡ ಮನಮೋಹನ್​ ದೇಸಾಯಿಯವರ 'ಅಮರ್​ ಅಕ್ಬರ್​ ಅಂಥೋನಿ' ಸಿನಿಮಾದಲ್ಲಿನ ಮೂರು ಪಾತ್ರಗಳು ನಾನು, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಇದ್ದ ಹಾಗೆ. ಪ್ರೀತಿ ಮತ್ತು ಸಹೋದರತ್ವವನ್ನು ಮೂಡಿಸುವುದೇ ನಮ್ಮ ಗುರಿ" ಎಂದು ಒಗ್ಗಟ್ಟಿನ ಸಂದೇಶ ರವಾನಿಸಿದರು.

"ಸಿನಿಮಾ ಯಾವುದೇ ಭಾವನೆಗಳಿಗೆ ಧಕ್ಕೆಯಾಗದಂತೆ ಮನರಂಜನೆ ಮತ್ತು ದೇಶವನ್ನು ಒಗ್ಗೂಡಿಸುವ ಮಾಧ್ಯಮವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕಾದರೆ, ನಾವು ಚಿತ್ರೀಕರಣವನ್ನು ಎಲ್ಲೇ ಮಾಡಿದರೂ, ನಮ್ಮ ಗುರಿ ಯಾವಾಗಲೂ ಸಂತೋಷ, ಸಹೋದರತ್ವ, ಪ್ರೀತಿ, ದಯೆಯನ್ನು ಹರಡುವುದಾಗಿದೆ. ನಾನು 'ಡರ್'​ ಸಿನಿಮಾದಲ್ಲಿ ವಿಲನ್​ ಪಾತ್ರ ಅಥವಾ ಈ ಚಿತ್ರದಲ್ಲಿ ಜಾನ್ ನೆಗೆಟಿವ್​ ಪಾತ್ರವನ್ನು ನಿರ್ವಹಿಸಿದ್ದೇವೆ.​ ಇದರಲ್ಲಿ ಯಾರದ್ದೇ ಭಾವನೆಗೆ ಧಕ್ಕೆ ತರುವ ಉದ್ದೇಶ ನಮಗಿಲ್ಲ. ಇದು ಕೇವಲ ಮನರಂಜನೆಗೆ ಮಾತ್ರ. ನಾವು ಪ್ರೇಕ್ಷಕರ ಪ್ರೀತಿಗಾಗಿ ಹಸಿದಿದ್ದೇವೆ. ಕೋಟ್ಯಂತರ ಹಣಕ್ಕಾಗಿ ಅಲ್ಲ. ನಾವು ನಿಮ್ಮಿಂದ ಪಡೆಯುವ ಪ್ರೀತಿ, ಅದಕ್ಕಿಂತ ದೊಡ್ಡದು ಮತ್ಯಾವುದೂ ಇಲ್ಲ" ಎಂದು ನುಡಿದರು.

"ಸ್ಪೈ ಆಕ್ಷನ್​ ಥ್ರಿಲ್ಲರ್​ ಸಿನಿಮಾ ಪಠಾಣ್​ ಜನವರಿ 25 ರಂದು ಬಿಡುಗಡೆಯಾಗಿದೆ. ನೀವು ಈ ಚಿತ್ರಕ್ಕಾಗಿ ನೀಡುತ್ತಿರುವ ಅಗಾಧ ಪ್ರೀತಿಯು ನಾನು ಸಿನಿಮಾ ಸೆಟ್​ನಿಂದ ದೂರವಿದ್ದ ಸಮಯವನ್ನು ಸರಿದೂಗಿಸಿದೆ. ನಾನು ಮೊದಲನೆಯದಾಗಿ ಆದಿತ್ಯ ಚೋಪ್ರಾ ಮತ್ತು ಸಿದ್ಧಾರ್ಥ್​ ಅವರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ಅವರು ನನಗೆ ಈ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ನೀಡಿದರು. ಇದು ಅತೀ ಹೆಚ್ಚು ಸಮಯವನ್ನು ತೆಗೆದುಕೊಂಡು ನಿರ್ಮಿಸಿದ ಚಿತ್ರವಾಗಿದ್ದು, ಇದರಲ್ಲಿ ನನಗೆ ಭಾಗವಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಕಳೆದುಕೊಂಡಿದ್ದನ್ನು 4 ದಿನಗಳಲ್ಲಿ ಮರಳಿ ಪಡೆದಿದ್ದೇನೆ. ಅದಕ್ಕಾಗಿ ನನಗೆ ತೃಪ್ತಿಯಿದೆ" ಎಂದರು.

ಇದನ್ನೂ ಓದಿ: ಪಠಾಣ್​ ಯಶಸ್ಸು: ಅಭಿಮಾನಿಗಳ ಪ್ರತಿಕ್ರಿಯೆ ನೋಡಲು ಥಿಯೇಟರ್​​ಗೆ ಬಂದ ದೀಪಿಕಾ ಪಡುಕೋಣೆ

'ಬೇಸರವಾದಾಗ ನಿಮ್ಮ ಬಳಿ ಬರುತ್ತೇನೆ...': "ನನ್ನ ಹಿರಿಯರು ಒಂದು ಮಾತು ಹೇಳಿದ್ದರು. ನೀವು ದುಃಖಿತರಾಗಿದ್ದರೆ ನಿಮ್ಮನ್ನು ಪ್ರೀತಿಸುವ ಜನರ ಬಳಿಗೆ ಹೋಗಿ ಎಂದು. ನಾವೆಲ್ಲರೂ ಮನುಷ್ಯರು. ಹಾಗಿರುವಾಗ ಕೆಲವೊಮ್ಮೆ ತಪ್ಪುಗಳು ಆಗುವುದು ಸಹಜ. ಅಥವಾ ನಾವು ತೆಗೆದುಕೊಳ್ಳುವ ನಿರ್ಧಾರವೇ ಕೆಲವೊಮ್ಮೆ ತಪ್ಪಾಗಬಹುದು. ಜೀವನವೇ ಹಾಗಲ್ಲವೇ?, ಎಲ್ಲರಿಗೂ ಅವರದ್ದೇ ಆದ ಕೆಟ್ಟ ದಿನಗಳಿವೆ. ಒಳ್ಳೆಯ ದಿನಗಳಿಗಾಗಿ ಕಾಯುತ್ತಿರುತ್ತಾರೆ. ನಾನಂತೂ ಬಹಳ ಅದೃಷ್ಟಶಾಲಿಯಾಗಿದ್ದೇನೆ ಮತ್ತು ದೇವರು ನನಗೆ ಒಳ್ಳೆಯದನ್ನೇ ಆಶೀರ್ವದಿಸಿದ್ದಾರೆ. ನನಗಾಗಿ ನನ್ನನ್ನು ಪ್ರೀತಿಸುವ ಕೋಟ್ಯಂತರ ಜನರನ್ನು ಕೊಟ್ಟಿದ್ದಾರೆ. ನನಗೆ ದುಃಖವಾದರೂ, ಖುಷಿಯಾದರೂ ನಾನು ಹೋಗುವುದು ಅವರ ಬಳಿಗೆ. ಶಾಶ್ವತವಾಗಿ ದೇವರು ನನಗೆ ನೀಡಿರುವ ಅಮೂಲ್ಯ ರತ್ನಗಳು ಇವರು" ಎಂದು ತಮ್ಮ ಅಭಿಮಾನಿಗಳನ್ನು ಕೊಂಡಾಡಿದರು.

"ನಾವು ಸಿನಿಮಾದ ಪ್ರಚಾರಕ್ಕಾಗಿ ಯಾವುದೇ ಮಾಧ್ಯಮವನ್ನು ಭೇಟಿಯಾಗದಿರುವ ಹಿಂದೆ ನಿರ್ದಿಷ್ಟ ಕಾರಣವಿಲ್ಲ. ಚಿತ್ರವನ್ನು ಕೋವಿಡ್​ ಸಮಯದಲ್ಲಿ ಚಿತ್ರೀಕರಿಸಲಾಗಿದೆ. ಕೆಲವು ಕಾರಣಾಂತರಗಳಿಂದ ಮಾಧ್ಯಮಗಳನ್ನು ನಮಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಎಲ್ಲಾ ಮಾಧ್ಯಮಗಳು ನಮಗೆ ನಿರೀಕ್ಷೆಗಿಂತ ಹೆಚ್ಚು ಪ್ರೀತಿ ತೋರಿಸಿದೆ. ಚಿತ್ರದ ಬಿಡುಗಡೆಯನ್ನು ಮೊಟಕುಗೊಳಿಸಬಹುದಾದ ಸಂಗತಿಗಳ ಹೊರತಾಗಿಯೂ ಚಿತ್ರವನ್ನು ಬೆಂಬಲಿಸಿದ್ದಕ್ಕಾಗಿ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ನಾವೆಲ್ಲರೂ ತುಂಬಾ ಕೃತಜ್ಞರಾಗಿರುತ್ತೇವೆ" ಎಂದು ತಿಳಿಸಿದರು.

ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿರುವ ಜಾನ್ ಅಬ್ರಹಾಂ, "ನಿರ್ಮಾಪಕ ಆದಿತ್ಯ ಚೋಪ್ರಾ ಅವರು ಪಾತ್ರವನ್ನು ಯಾವಾಗಲೂ ವಿಭಿನ್ನವಾಗಿ ಪ್ರಸ್ತುತಪಡಿಸುತ್ತಾರೆ. ಮೊದಲು 'ಧೂಮ್', ನಂತರ 'ನ್ಯೂಯಾರ್ಕ್' ಮತ್ತು ಈಗ 'ಪಠಾಣ್'. ಅವರು ಚಿತ್ರವನ್ನು ನಿರ್ಮಿಸುವ ರೀತಿಗೆ ಮೆಚ್ಚುಗೆ ಸೂಚಿಸಲೇಬೇಕು. ಅಲ್ಲದೇ 'ಪಠಾಣ್' ನನ್ನ ದೊಡ್ಡ ಚಿತ್ರವಾಗಲಿದೆ. ಇದಕ್ಕೆ ಕಾರಣರಾದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಶಾರುಖ್​ ಮತ್ತು ದೀಪಿಕಾ ಅವರೊಂದಿಗೆ ಈ ಮೊದಲು ಕೆಲಸ ಮಾಡಿದ್ದೇನೆ. ಆದರೆ ಈ ಚಿತ್ರ ಮತ್ತಷ್ಟು ಖುಷಿ ಕೊಟ್ಟಿದೆ" ಎಂದರು. "ನಮಗೆ ನೀವು ಕೊಡುತ್ತಿರುವ ಪ್ರೀತಿ ಕಂಡು ನಿಜಕ್ಕೂ ಅದ್ಭುತವೆನಿಸಿತು. ಈ ರೀತಿಯ ಚಿತ್ರಗಳು ತುಂಬಾ ಸಂತೋಷವನ್ನು ನೀಡುತ್ತದೆ ಮತ್ತು ಹಬ್ಬದಂತೆ ಭಾಸವಾಗುತ್ತದೆ ಎಂದು ನಟಿ ದೀಪಿಕಾ ಪಡುಕೋಣೆ ಇದೇ ವೇಳೆ ತಮ್ಮ ಸಂತೋಷ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗಲ್ಲಾಪೆಟ್ಟಿಗೆಯಲ್ಲಿ "ಪಠಾಣ್"​ ಕಮಾಲ್​: 6 ದಿನದಲ್ಲಿ ₹542 ಕೋಟಿ ಸಂಪಾದಿಸಿ ದಾಖಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.