ಕೆಜಿಎಫ್ 2 ಸಿನಿಮಾದ ಬಹುದೊಡ್ಡ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವ ಬ್ಯಾನರ್ ಹಾಗು ಯಾವ ನಿರ್ದೇಶಕನ ಜೊತೆ ಅನ್ನೋದು ಸದ್ಯ ಗಾಂಧಿನಗರ ಟೂ ಬಾಲಿವುಡ್ ಅಂಗಳದಲ್ಲಿ ಚರ್ಚೆ ಆಗುತ್ತಿರುವ ಹಾಟ್ ಟಾಫಿಕ್. ಆದರೆ ಬಾಲಿವುಡ್, ಕಾಲಿವುಡ್ ನಿರ್ಮಾಪಕರ ಜೊತೆ ಸಿನಿಮಾ ಮಾಡೊದು ಡೌಟ್. ಹಾಗೇ ಕನ್ನಡದ ನಿರ್ಮಾಪಕರ ಜೊತೆಯೂ ಯಶ್ ಮುಂದಿನ ಸಿನಿಮಾ ಮಾಡಲ್ಲ. ಹಾಗಾದ್ರೆ ಯಶ್ ಇನ್ಯಾವ ಪ್ರೊಡಕ್ಷನ್ ಹೌಸ್ನಲ್ಲಿ ತಮ್ಮ 19 ನೇ ಚಿತ್ರ ಮಾಡ್ತಾರೆ ಅನ್ನೋ ಪ್ರಶ್ನೆಗೆ ಇನ್ನು ಯಾರಿಗೂ ಉತ್ತರ ಸಿಕ್ಕಿಲ್ಲ. ಆದ್ರೆ ರಾಕಿ ಮುಂದಿನ ಸಿನಿಮಾ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ಸಿಕ್ಕಿದೆ.
ಯಶ್ 19ನೇ ಚಿತ್ರ ಇಷ್ಟು ತಡವಾಗ್ತಿರೋದು ಯಾಕೆ ಅಂತ ಯಾರನ್ನಾದ್ರು ಕೇಳಿದ್ರು ಅದಕ್ಕೆ ಸಿಗೋ ಉತ್ತರ ಕೆಜಿಎಫ್ ಚಿತ್ರ. ನರಾಚಿ ಲೋಕವನ್ನು ಗೆದ್ದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದರ್ಬಾರ್ ಮಾಡ್ತಿರುವ ಯಶ್ ತಮ್ಮ ಮುಂದಿನ ಚಿತ್ರದ ಮೂಲಕ ವಿಶ್ವವನ್ನು ಗೆಲ್ಲೋ ಅವಕಾಶ ಇದೇ. ಈ ಅವಕಾಶವನ್ನು ರಾಕಿ ಬಾಚಿ ತಬ್ಬಬೇಕಾದ್ರೆ ಕೆಜಿಎಫ್ ಚಿತ್ರವನ್ನು ಮೀರಿಸುವ ಸಿನಿಮಾ ಮಾಡಲೇಬೇಕು. ಹಿಗಾಗಿ ಯಶ್ ತಮ್ಮ ಮುಂದಿನ ಸಿನಿಮಾ ಹಜ್ಜೆ ಇಡೋಕೆ ಅಳೆದು ತೂಗಿ ಪ್ಲಾನ್ ಮಾಡ್ತಿದ್ದಾರೆ.
ಸದ್ಯ ನ್ಯಾಷಿನಲ್ ಸ್ಟಾರ್ ಆಗಿ ಸಕ್ಸಸ್ ಕಂಡಿರುವ ಯಶ್ ತಮ್ಮ ಮುಂದಿನ ಚಿತ್ರದ ಬಗ್ಗೆ ಬಹಳ ಹುಷಾರ್ ಆಗಿ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ಚಿತ್ರಕ್ಕೆ ನಿರ್ದೇಶಕ ಎಷ್ಟೊ ಮುಖ್ಯವೋ ತನಗಾಗಿ ಕನಸು ಕಂಡ ನಿರ್ದೇಶಕನ ಆ ಕನಸನ್ನು ನನಸಾಗಿಸೋ ನಿರ್ಮಾಪಕನೂ ಅಷ್ಟೇ ಮುಖ್ಯ. ಹೀಗಾಗಿ ಯಶ್ ಇದುವರೆಗೂ ತಮ್ಮ ಮುಂದಿನ ಸಿನಿಮಾ ನಿರ್ಮಾಪಕ ಯಾರು ಅನ್ನೋದ ರಿವೀಲ್ ಮಾಡಿಲ್ಲ.
ಸಾಕಷ್ಟು ಗೋಲ್ಡನ್ ಆಫರ್ಗಳ ಕೈ ಬಿಟ್ಟಿರುವ ರಾಕಿ ಮತ್ಯಾವ ನಿರ್ಮಾಪಕನಿಗೆ ತಮ್ಮ ಕಾಲ್ ಶೀಟ್ ಕೊಟ್ಟಿದ್ದಾರೆ ಅನ್ನೋದು ಈಗ ಯಕ್ಷ ಪ್ರಶ್ನೆಯಾಗಿದೆ. ಆದರೆ ಈಗ ಈ ನಿಗೂಢ ರಹಸ್ಯ ಈಟಿವಿ ಭಾರತಕ್ಕೆ ಸಿಕ್ಕಿದೆ. ಹಾಗಾದ್ರೆ ರಾಕಿ ಮುಂದಿನ ಸಿನಿಮಾ ನಿರ್ಮಾಪಕರು ಯಾರು ಅಂದ್ರೆ ಅದಕ್ಕೆ ನಮ್ಮ ಉತ್ತರ ಐರಾ ಯಶ್..
ಹೌದು ರಾಕಿಂಗ್ ಸ್ಟಾರ್ 19ನೇ ಚಿತ್ರಕ್ಕೆ ಅವರ ಮುದ್ದಿನ ಮಗಳೆ ಐರಾ ನಿರ್ಮಾಪಕಿ.. ತಮ್ಮ ಇಮೇಜ್ಗೆ ತಕ್ಕಂತೆ ಹೋಮ್ ಬ್ಯಾನರ್ನಲ್ಲೇ ಮುಂದಿನ ಚಿತ್ರ ನಿರ್ಮಾಣ ಮಾಡಲು ಯಶ್ ನಿರ್ಧರಿಸಿದ್ದಾರಂತೆ. ಅಲ್ಲದೆ ಸಿನಿಮಾ ಮಾಡೊಕೆ ಮೊದಲು ತಮ್ಮ ಹೋಮ್ ಬ್ಯಾನರ್ ರಿಜಿಸ್ಟರ್ ಮಾಡಿಸುವ ಕಾರ್ಯ ಕೈಗೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬಳಿಕ ಆ ನಿರ್ಮಾಣ ಸಂಸ್ಥೆಗೆ ತಮ್ಮ ಪ್ರೀತಿಯ ಮಗಳು ಐರಾ ಹೆಸರನ್ನು ಇಡಲಿದ್ದಾರೆ. ಈ ಮೂಲಕ ಮುಂದಿನ ಚಿತ್ರಕ್ಕೆ ತಮ್ಮ ಮಗಳ ನಿರ್ಮಾಣ ಸಂಸ್ಥೆಯಲ್ಲಿ ರಾಕಿ ಸಿನಿಮಾ ಮಾಡುವ ಬಿಗ್ ಪ್ಲಾನ್ ಮಾಡಿದ್ದಾರೆ ಎಂಬ ಹಾಟ್ ಟಾಫಿಕ್ ಇದೆ..
ಯಾಕೆಂದರೆ ಮಗಳು ಐರಾ ಹುಟ್ಟಿದ ಮೇಲೆ ಯಶ್ ಅದೃಷ್ಟ ಖುಲಾಯಿಸಿತ್ತು ಅನ್ನೋದು ರಾಕಿ ಆಪ್ತರು ಹೇಳುವ ಮಾತು. ಹೀಗಾಗಿ ತಮ್ಮ ಅದೃಷ್ಟ ದೇವತೆಯಾದ ಮಗಳ ಹೆಸರಲ್ಲೇ ಸ್ವಂತ ಬ್ಯಾನರ್ ಕಟ್ಟಿ.. ಆ ಬ್ಯಾನರ್ ಮೂಲಕ ತಮ್ಮ ಮುಂದಿನ ಚಿತ್ರವನ್ನು ಮಾಡುವ ಪ್ಲಾನ್ ಮಾಡಿದ್ದಾರೆ ರಾಕಿ.. ಈ ಚಿತ್ರಕ್ಕೆ ನಿರ್ದೇಶಕ ಯಾರು ಎಂಬುದರ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದ್ರೆ ತಮ್ಮ 19 ನೇ ಚಿತ್ರವನ್ನು ತಮ್ಮದೆ ಬ್ಯಾನರ್ನಲ್ಲಿ ಮಾಡಲು ಯಶ್ ಪ್ಲಾನ್ ಮಾಡ್ತಿದ್ದಾರೆ. ಈ ಕಾರಣದಿಂದಾಗಿ ಹೊಸ ಸಿನಿಮಾ ಅನೌನ್ಸ್ ಮಾಡೋದು ತಡವಾಗಿದೆ ಅನ್ನೊದು ರಾಕಿ ಆಪ್ತರ ಅಂಗಳದ ಮಾತಾಗಿದೆ. ಅದ್ರೆ ಇದಕ್ಕೆಲ್ಲ ಉತ್ತರ ಮುಂದಿನ ವರ್ಷ ಜನವರಿ 8, ಅಂದ್ರೆ ಯಶ್ ಹುಟ್ಟುಹಬ್ಬದ ದಿನದಂದು ಎಲ್ಲ ಮಾಹಿತಿ ಗೊತ್ತಾಗಲಿದೆ.
ಓದಿ: ಕೆಜಿಎಫ್ ತಾತ ಕೃಷ್ಣ ಜಿ ರಾವ್ ಆಸ್ಪತ್ರೆಗೆ ದಾಖಲು: ಐಸಿಯುವಿನಲ್ಲಿ ಚಿಕಿತ್ಸೆ