ಹೈದರಾಬಾದ್: ಹಿಜಾಬ್ ಧಾರಣೆ ಸಂಪೂರ್ಣವಾಗಿ ಮಹಿಳೆಯರ ಆಯ್ಕೆಯಾಗಿದ್ದು, ಅದರ ಪರವಾಗಿ ನಾನು ನಿಲ್ಲುತ್ತೇನೆ ಎಂದು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಜೈರಾ ವಾಸಿಂ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿನ ಒಂದು ಫೋಸ್ಟ್ಗೆ ಅವರು ಈ ಕುರಿತು ಪ್ರತಿಕ್ರಿಯೆ ಮಾಡಿದ್ದಾರೆ. ಮೂರು ಚಿತ್ರಗಳಲ್ಲಿ ನಟಿಸಿದ್ದ ನಟಿ, ತಮ್ಮ ನಂಬಿಕೆಗೆ ಉದ್ಯಮ ವಿರುದ್ಧವಾಗಿರುವ ಹಿನ್ನಲೆ ತಾವು ಚಿತ್ರರಂಗ ತೊರೆಯುತ್ತಿರುವುದಾಗಿ 2019ರಲ್ಲಿ ನಟಿ ತಿಳಿಸಿದ್ದರು.
-
Just attended a wedding. Ate exactly like this. Purely my choice. Even when everyone around me kept nagging me that I take the niqab off. I didn’t.
— Zaira Wasim (@ZairaWasimmm) May 28, 2023 " class="align-text-top noRightClick twitterSection" data="
We don’t do it for you. Deal with it. https://t.co/Gu9AXQka8v
">Just attended a wedding. Ate exactly like this. Purely my choice. Even when everyone around me kept nagging me that I take the niqab off. I didn’t.
— Zaira Wasim (@ZairaWasimmm) May 28, 2023
We don’t do it for you. Deal with it. https://t.co/Gu9AXQka8vJust attended a wedding. Ate exactly like this. Purely my choice. Even when everyone around me kept nagging me that I take the niqab off. I didn’t.
— Zaira Wasim (@ZairaWasimmm) May 28, 2023
We don’t do it for you. Deal with it. https://t.co/Gu9AXQka8v
ಹಿಜಾಬ್ ಧರಿಸಿದ ಮಹಿಳೆಯೊಬ್ಬಳು ಅದನ್ನು ತೆಗೆಯದೇ ಊಟ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿತ್ತು. "ಇದು ಮನುಷ್ಯನ ಆಯ್ಕೆಯೇ?" ಎಂಬ ಅಡಿ ಬರಹದೊಂದಿಗೆ ಈ ಫೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜೈರಾ, "ನಾನು ಈಗಷ್ಟೇ ಮದುವೆ ಮುಗಿಸಿ ಮರಳಿದ್ದೇನೆ. ಇಲ್ಲಿ ತೋರಿಸಿದಂತೆ ನಾನು ಕೂಡ ಊಟ ಮಾಡಿದ್ದೇನೆ. ಇದು ಸಂಪೂರ್ಣವಾಗಿ ನನ್ನ ನಿರ್ಧಾರ. ನನ್ನ ಸುತ್ತಮುತ್ತ ಇದ್ದ ಪ್ರತಿಯೊಬ್ಬರು ನನ್ನ ನಿಕಬ್ ತೆಗೆಯುವಂತೆ ಸೂಚಿಸಿದರು. ಆದರೆ, ನಾನು ತಿನ್ನಲಿಲ್ಲ. ಇದನ್ನು ನಾವು ನಿಮಗಾಗಿ ಮಾಡುತ್ತಿಲ್ಲ" ಎಂದಿದ್ದಾರೆ.
ಆಕೆಯ ಟ್ವೀಟ್ ಹೆಚ್ಚು ರಿಟ್ವೀಟ್ ಆಗಿದ್ದು, ಇದು ಮತ್ತೊಮ್ಮೆ ಹಿಜಾಬ್ ವಿವಾದಕ್ಕೆ ತಿರುವು ನೀಡಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆಯನ್ನು ಬೆಂಬಲಿಸಿದ್ದಾರೆ. ಈ ಮಧ್ಯ ಕೆಲವು ಜನರು ಆಕೆ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಆಕೆಯನ್ನು ಬೆಂಬಲಿಸಿರುವ ಕೆಲವರು, ನಮ್ಮ ಧರ್ಮವನ್ನು ಅನುಸರಿಸುತ್ತಿರುವ ನಿಮಗೆ ಅಲ್ಲಾಹು ಮತ್ತಷ್ಟು ಶಕ್ತಿ ಮತ್ತು ಘನೆತಉನ್ನು ನೀಡಲಿ. ಅಮೀನ್ ಎಂದಿದ್ದಾರೆ. ಇದಕ್ಕೆ ಮತ್ತೊಬ್ಬ ಪ್ರತಿಕ್ರಿಯಿಸಿರುವ ಬಳಕೆದಾರರು, ನಿಕಬ್ ಎಂದರೆ ಏನು? ಹಿಜಾಬ್, ಬುರ್ಖಾ ಮತ್ತು ಇದೀಗ ನಿಕಬ್; ಹೊಸ ವೆರಿಯಂಟ್?? ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು, ನಿಮ್ಮ ಬಗ್ಗೆ ಗೌರವ. ಪರದೆಯಡಿ ತಿನ್ನುವ ಸಹೋದರಿಯ ಬಗ್ಗೆ ಗೌರವ ಎಂದಿದ್ದಾರೆ. ಮತ್ತೆ ಒಬ್ಬನನ್ನು ಗುಲಾಮರನ್ನಾಗಿ ಮಾಡುವ ಸಂಕೋಲೆಗಳು. ಹಕ್ಕಿ ಕೂಡ ಪಂಜರವನ್ನು ಇಷ್ಟಪಡಲು ಪ್ರಾರಂಭಿಸುತ್ತದೆ ಎಂದಿದ್ದಾರೆ. ಹಿಜಾಬ್ ನಿಷೇಧ ಕುರಿತು ಈ ಹಿಂದೆ ಜೈರಾ ಇದು ಅನ್ಯಾಯ ಎಂದಿದ್ದು, ಧಾರ್ಮಿಕ ಬದ್ಧತೆಗಾಗಿ ಮಹಿಳೆಯರಿಗೆ ಸಂಪೂರ್ಣ ಕಿರುಕುಳ ನೀಡುವ ವ್ಯವಸ್ಥೆಯಾಗಿದೆ ಎಂದಿದ್ದರು. ಇದೀಗ ದಂಗಲ್ ಚಿತ್ರದ ನಟಿ ನಿಕಬ್ ಮಹಿಳೆಯರ ಹಕ್ಕು ಎಂದು ಅವರ ಪರ ವಾದ ಮಾಡಿದ್ದಾರೆ.
ದಂಗಲ್ ಸಿನಿಮಾದಲ್ಲಿ ಗೀತಾ ಪೊಕೆಟ್ ಬಾಲ್ಯದ ಪಾತ್ರ ನಿರ್ವಹಣೆ ಮಾಡಿದ್ದ ಜೈರಾ, ಕೆಲಸದಲ್ಲಿ ಧರ್ಮ ಮತ್ತು ನಂಬಿಕೆ ನಡುವೆ ತಿಕ್ಕಾಟದಿಂದ ನೊಂದು ಈ ಉದ್ಯಮ ತೊರೆಯುತ್ತಿರುವುದಾಗಿ 2019ರ ಜೂನ್ 30ರಂದು ತಿಳಿಸಿದ್ದರು. ಕಾಶ್ಮೀರಿ ಮೂಲದ ಮಾಜಿ ನಟಿ, ನಾನು ಇಲ್ಲಿಗೆ ಹೊಂದಿಕೊಳ್ಳದಿರಬಹುದು. ನಾನು ಇಲ್ಲಿಗೆ ಸೇರಿದವರಲ್ಲ ಎಂದು ಜೈರಾ ತಿಳಿಸಿದ್ದರು. ದಿ ಸ್ಕೈ ಇಸ್ ಪಿಂಕ್ ಚಿತ್ರದಲ್ಲಿ ಕೂಡ ಜೈರಾ ಬಣ್ಣ ಹಚ್ಚಿದ್ದರು. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಜೋನ್ಸ್ ಮತ್ತು ಫಾರನ್ ಅಖ್ತರ್ ಕೂಡ ನಟಿಸಿದ್ದರು.
ಇದನ್ನೂ ಓದಿ: ನೂತನ ಸಂಸತ್ ಭವನ ಹೊಗಳಿದ ಶಾರುಖ್, ಅಕ್ಷಯ್: ಪ್ರಧಾನಿ ಮೋದಿ ಮೆಚ್ಚುಗೆ