ETV Bharat / entertainment

ದುಬೈನಲ್ಲಿ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಬಳುಕುವ ಬಳ್ಳಿ ನೋರಾ ಫತೇಹಿ - ನೋರಾ ಫತೇಹಿ ಫೋಟೊ

ಸೋಮವಾರದಂದು ಬಾಲಿವುಡ್​ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ತಮ್ಮ ಸ್ನೇಹಿತರೊಂದಿಗೆ ದುಬೈನಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ.

Nora Fatehi
ನೋರಾ ಫತೇಹಿ
author img

By

Published : Feb 7, 2023, 1:12 PM IST

ಬಾಲಿವುಡ್​ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ (Nora Fatehi) ಸೋಮವಾರ ದುಬೈನಲ್ಲಿ ತಮ್ಮ 31ನೇ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ಆಪ್ತರನ್ನೊಳಗೊಂಡ ಗ್ಯಾಂಗ್‌ನೊಂದಿಗೆ ದುಬೈನಲ್ಲಿ ಉತ್ತಮ ಕ್ಷಣಗಳನ್ನು ಕಳೆದಿದ್ದಾರೆ. ತಮ್ಮ ಹುಟ್ಟುಹಬ್ಬ ಆಚರಣೆಯ ಚಿತ್ರಗಳನ್ನು, ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನೋರಾ ಫತೇಹಿ ತಂಡದ ಮೋಜು ಮಸ್ತಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸುತ್ತುವರಿದಿದೆ. ಈ ವಿಡಿಯೋದಲ್ಲಿ, ನೋರಾ ಅವರು ತಮ್ಮ ಸ್ನೇಹಿತರೊಂದಿಗೆ ಹಡಗಿನಲ್ಲಿ ಸಮಯ ಕಳೆದಿರುವುದನ್ನು ನೋಡಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ಡ್ಯಾನ್ಸರ್ ನೋರಾ ಫತೇಹಿ ಹಂಚಿಕೊಂಡ ವಿಡಿಯೋದಲ್ಲಿ, ಎಂದಿನಂತೆ ತಮ್ಮ ಸೊಂಟ ಬಳುಕಿಸಿ ಸಖತ್​ ಸ್ಟೆಪ್​ ಹಾಕಿದ್ದಾರೆ. ಸಿರಿಯನ್ ಗಾಯಕ ಲಮಿಸ್ ಕಾನ್ (Syrian singer Lamis Kan) ಹಾಡಿದ ಅರೇಬಿಕ್ ಹಾಡು ಮೆಸಯ್ತಾರಾ (Mesaytara) ಹಾಡಿಗೆ ನೋರಾ ಡ್ಯಾನ್ಸ್ ಮಾಡಿದ್ದಾರೆ.

ಜುಮೈರಾ ಬೀಚ್‌ನಲ್ಲಿ ವಿಹಾರ ನೌಕೆಯಲ್ಲಿ ಡ್ಯಾನ್ಸ್ ಮಾಡಿದ್ದು, ಸ್ನೇಹಿತರು ಸಪೋರ್ಟ್​ ಮಾಡಿದ್ದಾರೆ. "ನಾನು ಗಮನ ಹರಿಸಲು ಪ್ರಯತ್ನಿಸಿದೆ, ಆದರೆ ಗಮನವು ನನಗೆ ಜನ್ಮದಿನದ ಸಂತಸ ನೀಡಿದೆ" ಎಂದು ನೋರಾ ಫತೇಹಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ತಮ್ಮ ಹುಟ್ಟುಹಬ್ಬದ ಆಚರಣೆಯ ವಿಡಿಯೋದೊಂದಿಗೆ ಬರೆದುಕೊಂಡಿದ್ದಾರೆ.

ಅವರು ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಂಡ ಕೂಡಲೇ, ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಂಪು ಹೃದಯ ಮತ್ತು ಫೈರ್ ಎಮೋಜಿ ಬಳಸಿ ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ನೋರಾ. ನಿಮಗೆ ಸಂಪೂರ್ಣ ಶುಭವಾಗಲಿ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ, ಜನ್ಮದಿನದ ಶುಭಾಶಯಗಳು ನೋರಾ! ಎಂದು ಬರೆದಿದ್ದಾರೆ. ಹ್ಯಾಪಿ ಬರ್ತ್‌ಡೇ ಕ್ಯೂಟೀ ಎಂದು ಅಭಿಮಾನಿ ಒಬ್ಬರು ಬರೆದಿದ್ದಾರೆ.

ಇದನ್ನೂ ಓದಿ: 'ಪಠಾಣ್'ನಲ್ಲಿ ತೆರೆ ಹಂಚಿಕೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶಾರುಖ್​, ಸಲ್ಮಾನ್​

ಕೆಲಸದ ವಿಚಾರ ನೋಡುವುದಾದರೆ, ಆಯುಷ್ಮಾನ್ ಖುರಾನಾ ಅವರ ಆ್ಯಕ್ಷನ್ ಹೀರೋನ ಜೇಧಾ ನಶಾ ಹಾಡಿನಲ್ಲಿ ನೋರಾ ಕಾಣಿಸಿಕೊಂಡಿದ್ದಾರೆ. ಸಾಜಿದ್ ಖಾನ್ ನಿರ್ದೇಶನದ ಮುಂಬರುವ 100 ಪರ್ಸೆಂಟ್ ಚಿತ್ರದಲ್ಲಿ ನಟಿ ನೋರಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜಾನ್ ಅಬ್ರಹಾಂ, ಶೆಹನಾಜ್ ಗಿಲ್ ಮತ್ತು ರಿತೇಶ್ ದೇಶ್​ಮುಖ್​​ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಉದ್ಯೋಗವನ್ನರಸಿ ಕೆನಡಾದಿಂದ ಭಾರತಕ್ಕೆ ಬಂದ ನೋರಾ ಫತೇಹಿ ಅವರು ತಮ್ಮ ಅದ್ಬುತ ನೃತ್ಯಗಳ ಮೂಲಕ ಅನೇಕ ಜನರ ಮನ ಗೆದ್ದಿದ್ದಾರೆ. ಕೈಯಲ್ಲಿ ಪುಡಿಗಾಸು (ವರದಿಗಳ ಪ್ರಕಾರ 5,000 ರೂ.) ಹಿಡಿದು ಭಾರತ ದೆಶಕ್ಕೆ ಬಂದ ನೋರಾ ಫತೇಹಿ ತಮ್ಮ ಅದ್ಭುತ ನೃತ್ಯದ ಮೂಲಕವೇ ದೊಡ್ಡ ಹೆಸರು ಮಾಡಿದ್ದಾರೆ.

ಇದನ್ನೂ ಓದಿ: ಬರಿಗೈಯಲ್ಲಿ ಕೆಲಸಕ್ಕಾಗಿ ಭಾರತಕ್ಕೆ ಬಂದ ನೋರಾ​.. ಇಂದು ಬಾಲಿವುಡ್​ ಬಹುಬೇಡಿಕೆ ನಟಿ!

ಮಾಧ್ಯಮ ವರ ಪ್ರಕಾರ, ಒಂದು ದಿನದ ಪ್ರದರ್ಶನಕ್ಕೆ 40 ರಿಂದ 50 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಂಚಿಕೊಳ್ಳಲು 5 ರಿಂದ 7 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ನೋರಾ ಫತೇಹಿ ಅವರ ಪ್ರಸ್ತುತ ಆಸ್ತಿ ಮೌಲ್ಯ 30 ಕೋಟಿ ರೂ. ಇದೆ. ಒಂದು ಕಾಲದಲ್ಲಿ 3,000 ರೂಪಾಯಿಯಲ್ಲಿ ಜೀವನ ನಡೆಸುತ್ತಿದ್ದ ನೋರಾ ಫತೇಹಿ ಈಗ ಬಹುಕೋಟಿ ಆಸ್ತಿಯ ಒಡತಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.