ETV Bharat / entertainment

'ನಮೋ ಭೂತಾತ್ಮ 2'ಸಕ್ಸಸ್​ ಬಳಿಕ ಹೊಸ ಚಿತ್ರಗಳ ನಿರ್ದೇಶನದತ್ತ ಮುರಳಿ ಮಾಸ್ಟರ್ ​

author img

By ETV Bharat Karnataka Team

Published : Aug 29, 2023, 9:50 AM IST

Updated : Aug 29, 2023, 10:04 AM IST

Murali Master upcoming movies: 'ನಮೋ ಭೂತಾತ್ಮ 2' ಚಿತ್ರದ ಸಕ್ಸಸ್​ ಬಳಿಕ ನಿರ್ದೇಶಕ ಮುರಳಿ ಮಾಸ್ಟರ್​ ಮೂರು ಹೊಸ ಕಥೆಗಳಿಗೆ ಆ್ಯಕ್ಷನ್​ ಕಟ್​ ಹೇಳಲು ತಯಾರಿ ಮಾಡಿಕೊಂಡಿದ್ದಾರೆ.

murali master
ಮುರಳಿ ಮಾಸ್ಟರ್ ​

ನಟ ಕೋಮಲ್​ ಅಭಿನಯದ 'ನಮೋ ಭೂತಾತ್ಮ 2' ಚಿತ್ರವು ಯಶಸ್ವಿಯಾಗಿ 25ನೇ ದಿನದತ್ತ ಮುನ್ನುಗ್ಗುತ್ತಿದೆ. ಆಗಸ್ಟ್​ 4ರಂದು ತೆರೆಕಂಡು ಪ್ರೇಕ್ಷಕರನ್ನು ಮೆಚ್ಚಿಸುವುದರ ಜೊತೆಗೆ ಪರಭಾಷಾ ಚಿತ್ರಗಳ ಪೈಪೋಟಿಯ ನಡೆಯುವೂ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿರುವ ಸಂತಸ ಚಿತ್ರತಂಡಕ್ಕಿದೆ.

Dance choreographer and director murali master upcoming movies
ಪುನೀತ್​ ರಾಜ್​ಕುಮಾರ್​ ಜೊತೆ ಮುರಳಿ ಮಾಸ್ಟರ್​

ಇದು ಕನ್ನಡ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್​ ಆ್ಯಕ್ಷನ್​ ಕಟ್​ ಹೇಳಿರುವ ಎರಡನೆಯ ಚಿತ್ರ. ಇದಕ್ಕೂ ಮೊದಲು ಅವರು ಕೆಲವು ವರ್ಷಗಳ ಹಿಂದೆ ಕೋಮಲ್​ ನಟನೆಯ 'ನಮೋ ಭೂತಾತ್ಮ' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದೊಂದು ರಿಮೇಕ್​ ಸಿನಿಮಾವಾಗಿತ್ತು. ಇದೀಗ 'ನಮೋ ಭೂತಾತ್ಮ 2' ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಧ್ರುವ ಸರ್ಜಾ​ ಜೊತೆ ಮುರಳಿ ಮಾಸ್ಟರ್​

ಚಿತ್ರದ ಕುರಿತು ಮಾತನಾಡಿರುವ ಮುರಳಿ ಮಾಸ್ಟರ್​, "'ನಮೋ ಭೂತಾತ್ಮ 2' ಚಿತ್ರವು ಯಶಸ್ವಿಯಾಗಿ 25ನೇ ದಿನದತ್ತ ಮುನ್ನುಗ್ಗುತ್ತಿದೆ. ಕೋವಿಡ್​ ಸಂದರ್ಭದಲ್ಲಿ ಈ ಕಥೆ ರೆಡಿಮಾಡಿಟ್ಟುಕೊಂಡಿದ್ದೆ. ಕಳೆದ ವರ್ಷ ಇದೇ ಸಮಯಕ್ಕೆ ಚಿತ್ರದ ತಯಾರಿ ಶುರುವಾಯಿತು. ಈ ವರ್ಷ ಆಗಸ್ಟ್​ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಸಿನಿಮಾ ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ನಗಿಸುತ್ತಾ, ಹೆದರಿಸುತ್ತಾ ಒಂದು ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದು, ಜನರಿಗೆ ಮೆಚ್ಚುಗೆಯಾಗಿದೆ. ಅದರಲ್ಲೂ ಚಿತ್ರದ ದ್ವಿತಿಯಾರ್ಧ ಮತ್ತು ಕ್ಲೈಮ್ಯಾಕ್ಸ್​ ಭಾಗವನ್ನು ಎಲ್ಲರೂ ಬಹಳವಾಗಿ ಮೆಚ್ಚಿಕೊಂಡಿದ್ದಾರೆ" ಎಂದು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ: Actor Komal: ಭಯದ ಜೊತೆ ನಗಿಸಲು ಮತ್ತೆ ಬಂದ್ರು 'ನಮೋ ಭೂತಾತ್ಮ 2' ಗ್ಯಾಂಗ್​; ಹಾರರ್ ಟೀಸರ್​ ನೋಡಿ..

"ಬಹುಶಃ ಪರಭಾಷೆಗಳ ದೊಡ್ಡ ಚಿತ್ರಗಳ ಪೈಪೋಟಿ ಇಲ್ಲದೇ ಇರುತ್ತಿದ್ದರೆ ಚಿತ್ರ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಆಗಸ್ಟ್​ 4ರಂದು ಯಾವುದೇ ಚಿತ್ರವೂ ಬಿಡುಗಡೆ ಇರಲಿಲ್ಲ ಎಂಬ ಕಾರಣಕ್ಕೆ ಆ ವಾರ ಚಿತ್ರ ಬಿಡುಗಡೆಗೆ ಪ್ಲಾನ್​ ಮಾಡಿದೆವು. ಆದರೆ, ಅದರ ಮರುವಾರವೇ ಜೈಲರ್​ ಸೇರಿದಂತೆ ನಾಲ್ಕು ದೊಡ್ಡ ಪರಭಾಷಾ ಚಿತ್ರಗಳು ಬಿಡುಗಡೆಯಾದವು. ಇದರಿಂದ ನಮಗೆ ಚಿತ್ರಮಂದಿರಗಳ ಸಮಸ್ಯೆ ಎದುರಾಯಿತು. ನಮಗೆ ಚಿತ್ರ ನಿರ್ಮಾಣ ಹೊಸದು. ಯಾವುದಕ್ಕೂ ರಾಜಿ ಆಗದೇ ಚಿತ್ರಕ್ಕೆ ಏನು ಬೇಕೋ ಅದನ್ನೆಲ್ಲ ಪೂರೈಸಿ ಒಂದು ಹೊಸ ತಂಡ ಕಟ್ಟಿಕೊಂಡು ಈ ಚಿತ್ರ ಮಾಡಿದ್ದೇವೆ. ಚಿತ್ರ ನೋಡಿದವರೆಲ್ಲಾ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಒಂದು ಸ್ವಂತ ಪ್ರಯತ್ನಕ್ಕೆ ಸಿಕ್ಕ ಪ್ರೋತ್ಸಾಹದಿಂದ ಇನ್ನಷ್ಟು ಏನಾದರೂ ಮಾಡುವ ಹುಮ್ಮಸ್ಸು ಬರುತ್ತದೆ" ಎಂದು ಹೇಳಿದರು.

ಮುರಳಿ ಮಾಸ್ಟರ್​

ಸದ್ಯ ಮಾಸ್ಟರ್​ ಮುರಳಿ ಅವರ ಜೊತೆ ಇನ್ನೂ ಮೂರು ಕಥೆಗಳಿವೆಯಂತೆ. "ನಮೋ ಭೂತಾತ್ಮ 2 ಚಿತ್ರದ ಕೊನೆಯಲ್ಲಿ ಎಂಡಿಂಗ್​ ಅನ್ನೋದು ಇರಲಿಲ್ಲ. ಮುಂದುವರೆದ ಭಾಗವನ್ನು ಮತ್ತೊಂದು ಸಿನಿಮಾ ಹೇಳಲಿದೆ ಎಂಬ ವಿಚಾರ ಗೊತ್ತಾಗುತ್ತದೆ. ಹೀಗಾಗಿ 'ನಮೋ ಭೂತಾತ್ಮ 3' ಮಾಡುವ ಯೋಚನೆ ಇದೆ. ಆದರೆ ಸದ್ಯಕ್ಕಿಲ್ಲ. ಒಂದು ವರ್ಷದ ನಂತರ ಈ ಬಗ್ಗೆ ಆಲೋಚಿಸುತ್ತೇನೆ. ಅದಕ್ಕೂ ಮೊದಲು ಇನ್ನೂ ಮೂರು ಕಥೆಗಳಿವೆ. ಎಲ್ಲಾ ವಿಭಿನ್ನ ಸ್ಟೋರಿಗಳು. ಈ ಪೈಕಿ ಒಂದು ಚಿತ್ರದ ಕೆಲಸಗಳು ಮುಂದಿನ ತಿಂಗಳಿನಿಂದ ಶುರುವಾಗುವ ಸಾಧ್ಯತೆ ಇದೆ" ಎಂದು ತಿಳಿಸಿದರು.

ನೃತ್ಯಪಟುವಾಗಿ ಗುರುತಿಸಿಕೊಂಡಿದ್ದ ಮುರಳಿ ಮಾಸ್ಟರ್​ ಯಶವಂತ್​ ಚಿತ್ರದ ಮೂಲಕ ನೃತ್ಯ ನಿರ್ದೇಶಕರಾದರು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 600ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಪುನೀತ್​ ರಾಜ್​ಕುಮಾರ್​, ಗಣೇಶ್​, ಯಶ್​, ಸುದೀಪ್​, ದರ್ಶನ್​, ಶರಣ್​, ಧ್ರುವ ಸರ್ಜಾ ಸೇರಿದಂತೆ ಕನ್ನಡ ಚಿತ್ರರಂಗದ ಸ್ಟಾರ್​ ನಟರ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡುವ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ: 'ನಮೋ ಭೂತಾತ್ಮ 2' ಟೀಸರ್ ಬಿಡುಗಡೆಗೊಳಿಸಿ, ನಾನು ಕೋಮಲ್ ಸಾರ್ ಅಭಿಮಾನಿ ಎಂದ ಧ್ರುವ ಸರ್ಜಾ

Last Updated : Aug 29, 2023, 10:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.