'ಟೈಗರ್ ಟಾಕೀಸ್' ಎಂಬ ಹೆಸರಿನಡಿ ವಿನೋದ್ ಪ್ರಭಾಕರ್ 'ಲಂಕಾಸುರ' ಚಿತ್ರ ನಿರ್ಮಿಸುತ್ತಿದ್ದಾರೆ. ತಂದೆ ಟೈಗರ್ ಪ್ರಭಾಕರ್ ಅವರನ್ನು ಸ್ಮರಿಸಿಕೊಂಡು ಹೊಸ ಹೆಜ್ಜೆ ಇಡುವ ಮೂಲಕ ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ಲಂಕಾಸುರ ಸಿನಿಮಾ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯೂ ಆಗುತ್ತಿದ್ದಾರೆ.
ವಿನೋದ್ ಪ್ರಭಾಕರ್ ತಮ್ಮ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ರೇಕ್ಷಕರ ಹೃದಯ ಕದಿಯುವ ಸೂಚನೆ ನೀಡುತ್ತಿದೆ. ಸದ್ಯ ಸಿನಿಮಾದ ಅಫೀಶಿಯಲ್ ಟೀಸರ್ ಅನ್ನು ಕನ್ನಡ ಚಿತ್ರರಂಗದ ಶೋ ಮ್ಯಾನ್ ಅನಾವರಣ ಮಾಡಿದರು.
![Crazy star Ravichandran reveal Actor Vinod Prabhakar efforts, Crazy star Ravichandran news, Actor Vinod Prabhakar news, Lankasura movie trailer release, Lankasura movie producer name, Lankasura movie release date, ನಟ ವಿನೋದ್ ಪ್ರಭಾಕರ್ ಪ್ರಯತ್ನಗಳು ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತು, ಕ್ರೇಜಿ ಸ್ಟಾರ್ ರವಿಚಂದ್ರನ್ ಸುದ್ದಿ, ನಟ ವಿನೋದ್ ಪ್ರಭಾಕರ್ ಸುದ್ದಿ, ಲಂಕಾಸುರ ಚಿತ್ರದ ಟ್ರೈಲರ್ ಬಿಡುಗಡೆ, ಲಂಕಾಸುರ ಚಿತ್ರದ ನಿರ್ಮಾಪಕ ಹೆಸರು, ಲಂಕಾಸುರ ಚಿತ್ರದ ಬಿಡುಗಡೆ ದಿನಾಂಕ,](https://etvbharatimages.akamaized.net/etvbharat/prod-images/kn-bng-05-tigerprabhakar-bhagge-ravichansran-helidenu-7204735_07072022003050_0707f_1657134050_693.jpg)
ಕನ್ನಡ ಚಿತ್ರರಂಗದ ಶೋ ಮ್ಯಾನ್ ಅಂದಾಕ್ಷಣ ನಮ್ಮ ಕಣ್ಮುಂದೆ ಬರೋದು ಕನಸುಗಾರ ವಿ.ರವಿಚಂದ್ರನ್. ವಿನೋದ್ ಪ್ರಭಾಕರ್ ಮೊದಲ ಸಿನಿಮಾ ದಿಲ್ ಚಿತ್ರಕ್ಕೆ ಕ್ಲಾಪ್ ಮಾಡಿದ ಕ್ರೇಜಿಸ್ಟಾರ್, ಅವರು ಹುಟ್ಟು ಹಾಕಿರುವ ಟೈಗರ್ ಟಾಕೀಸ್ ಜೊತೆಗೆ ಲಂಕಾಸುರ ಸಿನಿಮಾದ ಟೀಸರ್ ಲಾಂಚ್ ಮಾಡಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ,
![Crazy star Ravichandran reveal Actor Vinod Prabhakar efforts, Crazy star Ravichandran news, Actor Vinod Prabhakar news, Lankasura movie trailer release, Lankasura movie producer name, Lankasura movie release date, ನಟ ವಿನೋದ್ ಪ್ರಭಾಕರ್ ಪ್ರಯತ್ನಗಳು ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತು, ಕ್ರೇಜಿ ಸ್ಟಾರ್ ರವಿಚಂದ್ರನ್ ಸುದ್ದಿ, ನಟ ವಿನೋದ್ ಪ್ರಭಾಕರ್ ಸುದ್ದಿ, ಲಂಕಾಸುರ ಚಿತ್ರದ ಟ್ರೈಲರ್ ಬಿಡುಗಡೆ, ಲಂಕಾಸುರ ಚಿತ್ರದ ನಿರ್ಮಾಪಕ ಹೆಸರು, ಲಂಕಾಸುರ ಚಿತ್ರದ ಬಿಡುಗಡೆ ದಿನಾಂಕ,](https://etvbharatimages.akamaized.net/etvbharat/prod-images/kn-bng-05-tigerprabhakar-bhagge-ravichansran-helidenu-7204735_07072022003050_0707f_1657134050_94.jpg)
"ನಾನು 15 ವರ್ಷಗಳ ಹಿಂದೆ ವಿನೋದ್ ಮೊದಲ ಚಿತ್ರ ದಿಲ್ ಸಿನಿಮಾಗೆ ಕ್ಲಾಪ್ ಮಾಡಿದ್ದೆ. ಈಗ ದಿಲ್ ಸ್ಟಾರ್ಟ್ ಮಾಡೋಕೆ ನಾನೇ ಬಂದಿದ್ದೇನೆ. ನಾನು ಏಕಾಂಗಿ ಸಿನಿಮಾ ಟೈಂನಲ್ಲಿ ವಿನೋದ್ ಅವರನ್ನು ನೋಡಿದೆ. 15 ವರ್ಷಗಳ ಬಳಿಕ ಮೊನ್ನೆ ನಮ್ಮ ಮನೆಗೆ ಬಂದಾಗ ವಿನೋದ್ ನೋಡಿ ಅಚ್ಚರಿಯಾಯಿತು. ಅವನು ಬಂದು ಹೀಗೆ ಟೈಗರ್ ಟಾಕೀಸ್ ಹೆಸರಲ್ಲಿ ಸಿನಿಮಾ ಪ್ರೊಡಕ್ಷನ್ ಸಂಸ್ಥೆ ಓಪನ್ ಮಾಡ್ತಿದ್ದೀವಿ ಎಂದಾಗ ಉತ್ಸಾಹದಿಂದ ಒಪ್ಪಿಕೊಂಡೆ" ಎಂದರು.
![Crazy star Ravichandran reveal Actor Vinod Prabhakar efforts, Crazy star Ravichandran news, Actor Vinod Prabhakar news, Lankasura movie trailer release, Lankasura movie producer name, Lankasura movie release date, ನಟ ವಿನೋದ್ ಪ್ರಭಾಕರ್ ಪ್ರಯತ್ನಗಳು ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತು, ಕ್ರೇಜಿ ಸ್ಟಾರ್ ರವಿಚಂದ್ರನ್ ಸುದ್ದಿ, ನಟ ವಿನೋದ್ ಪ್ರಭಾಕರ್ ಸುದ್ದಿ, ಲಂಕಾಸುರ ಚಿತ್ರದ ಟ್ರೈಲರ್ ಬಿಡುಗಡೆ, ಲಂಕಾಸುರ ಚಿತ್ರದ ನಿರ್ಮಾಪಕ ಹೆಸರು, ಲಂಕಾಸುರ ಚಿತ್ರದ ಬಿಡುಗಡೆ ದಿನಾಂಕ,](https://etvbharatimages.akamaized.net/etvbharat/prod-images/kn-bng-05-tigerprabhakar-bhagge-ravichansran-helidenu-7204735_07072022003050_0707f_1657134050_760.jpg)
ಕಾರ್ಯಕ್ರಮಕ್ಕೆ ಅಂಬರೀಶ್ ಪುತ್ರ ಅಭಿಷೇಕ್ ಕೂಡ ಅತಿಥಿಯಾಗಿ ಬಂದಿದ್ದರು. ರವಿಚಂದ್ರನ್ ಮುಂದುವರೆದು ಮಾತನಾಡಿ, ನನಗೆ ಸಿನಿಮಾದಲ್ಲಿ ಫೈಟ್ ಹೇಗೆ ಮಾಡೋದನ್ನು ಹೇಳಿ ಕೊಟ್ಟಿದ್ದು ಅಂಬರೀ ಶ್ಎಂದರು. ಹಾಗೆಯೇ ನಾನು ಟೈಗರ್ ಪ್ರಭಾಕರ್ ತೊಡೆ ಮೇಲೆ ಕುಳಿತು, ಬೆಳೆದವ. ನಮ್ಮ ಅಪ್ಪ ವೀರಸ್ವಾಮಿಗೆ ಪ್ರಭಾಕರ್ ಅಂದ್ರೆ ಇಷ್ಟ. ಪ್ರಭಾಕರ್ ಬಿಡುವಿನ ಸಮಯದಲ್ಲಿ ನಮ್ಮ ಆಫೀಸ್ಗೆ ಬರ್ತಿದ್ದರು ಎಂದು ರವಿಚಂದ್ರನ್ ಒಡನಾಟ ನೆನಪಿಸಿದರು.
![Crazy star Ravichandran reveal Actor Vinod Prabhakar efforts, Crazy star Ravichandran news, Actor Vinod Prabhakar news, Lankasura movie trailer release, Lankasura movie producer name, Lankasura movie release date, ನಟ ವಿನೋದ್ ಪ್ರಭಾಕರ್ ಪ್ರಯತ್ನಗಳು ಕ್ರೇಜಿ ಸ್ಟಾರ್ ರವಿಚಂದ್ರನ್ ಮಾತು, ಕ್ರೇಜಿ ಸ್ಟಾರ್ ರವಿಚಂದ್ರನ್ ಸುದ್ದಿ, ನಟ ವಿನೋದ್ ಪ್ರಭಾಕರ್ ಸುದ್ದಿ, ಲಂಕಾಸುರ ಚಿತ್ರದ ಟ್ರೈಲರ್ ಬಿಡುಗಡೆ, ಲಂಕಾಸುರ ಚಿತ್ರದ ನಿರ್ಮಾಪಕ ಹೆಸರು, ಲಂಕಾಸುರ ಚಿತ್ರದ ಬಿಡುಗಡೆ ದಿನಾಂಕ,](https://etvbharatimages.akamaized.net/etvbharat/prod-images/kn-bng-05-tigerprabhakar-bhagge-ravichansran-helidenu-7204735_07072022003050_0707f_1657134050_266.jpg)
ಇದರ ಜೊತೆಗೆ, ಇವತ್ತು ಎಲ್ಲಾ ವಿಲನ್‌ನ ಮಕ್ಕಳೂ ಹೀರೋಗಳಾಗಿದ್ದಾರೆ. ಆದರೆ ಆ ಕಾಲದಲ್ಲಿ ಪ್ರಭಾಕರ್, ದೇವರಾಜ್ ವಿಲನ್‌ಗಳು ಆಗಿದ್ದಕ್ಕೆ ನಾವು ಹೀರೋ ಆಗಿ ಮಿಂಚೋಕೆ ಸಾಧ್ಯವಾಯಿತು. ಟೈಗರ್ ಟಾಕೀಸ್, ಟೀಸರ್ ಚೆನ್ನಾಗಿದೆ. ಸಿನಿಮಾ ಬಂದ ಮೇಲೆ ಪ್ರೇಕ್ಷಕರು ನಿರ್ಧಾರ ಮಾಡ್ತಾರೆ. ನಿರ್ಮಾಪಕರು ಸರಿಯಾದ ಟೈಮ್ ನೋಡಿ ಸಿನಿಮಾ ಬಿಡುಗಡೆ ಮಾಡಬೇಕು ಎಂದು ನಿರ್ಮಾಪಕರಿಗೆ ಇದೇ ವೇಳೆ ಕಿವಿಮಾತು ಹೇಳಿದರು.
- " class="align-text-top noRightClick twitterSection" data="">