ETV Bharat / entertainment

'ಉಪಾಧ್ಯಕ್ಷ' ಚಿಕ್ಕಣ್ಣನಿಗೆ ಶಿವಣ್ಣನ ಸಾಥ್​; ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌ - ಚಿಕ್ಕಣ್ಣ ಸಿನಿಮಾ

ಹಾಸ್ಯನಟ ಚಿಕ್ಕಣ್ಣ ಇದೇ ಮೊದಲ ಬಾರಿ ನಾಯಕನಾಗಿ ಅಭಿನಯಿಸಿರುವ 'ಉಪಾಧ್ಯಕ್ಷ' ಚಿತ್ರದ ಟ್ರೇಲರ್ ಅ​ನ್ನು ನಟ ಶಿವ ರಾಜ್​ಕುಮಾರ್​ ಬಿಡುಗಡೆ ಮಾಡಿದ್ದಾರೆ. ಸಿನಿಮಾ ತಿಂಗಳಾಂತ್ಯದಲ್ಲಿ ಬಿಡುಗಡೆಯಾಗಲಿದೆ.

'ಉಪಾಧ್ಯಕ್ಷ'
ನಟ ಶಿವರಾಜ್​ ಜೊತೆ 'ಉಪಾಧ್ಯಕ್ಷ' ನಾಯಕಿ ಮಲೈಕಾ, ನಾಯಕ ಚಿಕ್ಕಣ್ಣ
author img

By ETV Bharat Karnataka Team

Published : Jan 15, 2024, 12:18 PM IST

ತನ್ನದೇ ಶೈಲಿಯಲ್ಲಿ ಕಾಮಿಡಿ ಶೋಗಳನ್ನು ಮಾಡುತ್ತಾ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಹಾಸ್ಯ ನಟನಾಗಿ ಗಮನ‌ ಸೆಳೆದವರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಇದೀಗ ಹಾಸ್ಯನಟನೆಯ ಜೊತೆಗೆ 'ಉಪಾಧ್ಯಕ್ಷ' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಾಯಕ ನಟನಾಗುತ್ತಿದ್ದಾರೆ.

ಬಹುತೇಕ​ ಚಿತ್ರೀಕರಣ ಮುಗಿಸಿ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಚಿತ್ರತಂಡಕ್ಕೆ ನಟ ಶಿವ ರಾಜ್‌​ಕುಮಾರ್​​ ಸಾಥ್​ ಸಿಕ್ಕಿದೆ. ಅನಿಲ್​​ ಕುಮಾರ್​​ ನಿರ್ದೇಶನದ 'ಉಪಾಧ್ಯಕ್ಷ' ಟ್ರೇಲರ್ ಅ​ನ್ನು ಇತ್ತೀಚಿಗೆ ಶಿವ ರಾಜ್‌ಕುಮಾರ್​​ ಬಿಡುಗಡೆ ಮಾಡಿದರು.

'ಉಪಾಧ್ಯಕ್ಷ'
'ಉಪಾಧ್ಯಕ್ಷ' ಚಿತ್ರ ತಂಡ

ಬಳಿಕ ಮಾತನಾಡಿದ ಶಿವ ರಾಜ್‌ಕುಮಾರ್,​ "ನಾನು ಚಿಕ್ಕಣ್ಣರನ್ನು ಬಹಳ ಇಷ್ಟಪಡುತ್ತೇನೆ. ಅವರು ನನ್ನ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಾಯಕನಾಗುತ್ತಿದ್ದಾರೆ. ಹಾಡುಗಳನ್ನು ನೋಡಿದ್ದೇನೆ. ನಿಜಕ್ಕೂ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ನಾನೂ ಕೂಡ ಈ ಚಿತ್ರವನ್ನು ಮೈಸೂರಿನಲ್ಲಿ ನೋಡುತ್ತೇನೆ" ಎಂದರು.

ಉಪಾಧ್ಯಕ್ಷ, ಅಧ್ಯಕ್ಷ ಚಿತ್ರದ ಮುಂದುವರೆದ ಭಾಗ ಎಂದು ಮಾತು ಆರಂಭಿಸಿದ ನಿರ್ದೇಶಕ ಅನಿಲ್​​ ಕುಮಾರ್​​, "ಅಧ್ಯಕ್ಷ ಚಿತ್ರದ ಕಥೆ ಎಲ್ಲಿಗೆ ನಿಂತಿತ್ತೋ ಉಪಾಧ್ಯಕ್ಷ ಚಿತ್ರದ ಕಥೆ ಅಲ್ಲಿಂದ ಆರಂಭವಾಗುತ್ತದೆ. ಇದೊಂದು ಪಕ್ಕಾ ಮನೋರಂಜನಾ ಚಿತ್ರ. ಲಾಕ್‌ಡೌನ್ ಸಮಯದಲ್ಲಿ ಚಂದ್ರ ಮೋಹನ್ ಕಥೆ ಹೇಳಿದರು. ಆ ನಂತರ ಸ್ನೇಹಿತರೆಲ್ಲಾ ಸೇರಿ ಚರ್ಚಿಸಿ, ನಿರ್ಮಾಪಕ ಉಮಾಪತಿ ಅವರಿಗೆ ಕಥೆ ಹೇಳಿದೆವು. ಅವರು ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದರು. ಚಿತ್ರ ಚೆನ್ನಾಗಿ ಮೂಡಿಬರಲು ಸಹಕರಿಸಿದ ಎಲ್ಲಾ ಕಲಾವಿದರು, ಅರ್ಜುನ್ ಜನ್ಯ ಸೇರಿದಂತೆ ಪ್ರತಿಯೊಬ್ಬ ತಂತ್ರಜ್ಞರಿಗೂ ನನ್ನ ಧನ್ಯವಾದ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶಿವಣ್ಣ ಅವರಿಗೆ ವಿಶೇಷ ಧನ್ಯವಾದ" ಎಂದರು.

'ಉಪಾಧ್ಯಕ್ಷ'
'ಉಪಾಧ್ಯಕ್ಷ' ಚಿತ್ರ ತಂಡ

ನಟ‌ ಚಿಕ್ಕಣ್ಣ ಮಾತನಾಡಿ, "ಈವರೆಗೂ ಸುಮಾರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ಉಪಾಧ್ಯಕ್ಷ ಕುಟುಂಬಸಮೇತ ನೋಡಬಹುದಾದ ಚಿತ್ರ. ಇದಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದೇನೆ. ಈಗಾಗಲೇ ಟೀಸರ್ ಹಾಗೂ ಹಾಡುಗಳು ಜನರ ಮನ ಗೆದ್ದಿವೆ" ಎಂದರು.

ಕಿರುತೆರೆ ನಟಿ ಮಲೈಕಾ ವಸುಪಾಲ್​ ನಾಯಕಿಯಾಗಿದ್ದಾರೆ. ರವಿಶಂಕರ್, ‌ಸಾಧು ಕೋಕಿಲ ಹಾಗೂ ವಿಶೇಷ ಪಾತ್ರದಲ್ಲಿ ಶರಣ್​ ಸೇರಿದಂತೆ ದೊಡ್ಡ ಕಲಾವಿದರಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗು ಶೇಖರ್ ಚಂದ್ರ ಕ್ಯಾಮರಾ ಕೆಲಸವಿದೆ. ಡಿ.ಎನ್.ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಹಾಗು ಉಮಾಪತಿ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಜನವರಿ 26ಕ್ಕೆ ಬಿಡುಗಡೆಯಾಗಲಿದೆ.

'ಉಪಾಧ್ಯಕ್ಷ'
ನಟ ಚಿಕ್ಕಣ್ಣ, ನಟಿ ಮಲೈಕಾ ವಸುಪಾಲ್​

ಇದನ್ನೂ ಓದಿ: 'ಉಪಾಧ್ಯಕ್ಷ' ಟೀಸರ್​ ರಿಲೀಸ್​: ನಾನು 'ಹೀರೋ' ಎಂದಾಗ ಜನ ಚುಚ್ಚುಮಾತಿನಿಂದ ನೋಯಿಸಿದ್ದಾರೆ - ಚಿಕ್ಕಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.