ETV Bharat / entertainment

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ನಟ ಚೇತನ್​ ಚಂದ್ರ ಸ್ಪರ್ಧೆ? - ಈಟಿವಿ ಭಾರತ ಕನ್ನಡ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಟಾರ್ ನಟ ಚೇತನ್ ಚಂದ್ರ ಸ್ಪರ್ಧಿಸಲು ರೆಡಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

chethan
ನಟ ಚೇತನ್​ ಚಂದ್ರ
author img

By

Published : Mar 21, 2023, 3:11 PM IST

2023ರ ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಈ ಹಿನ್ನೆಲೆ ಸಿನಿಮಾ ತಾರೆಯರು ರಾಜಕೀಯಕ್ಕೆ ಪ್ರವೇಶಿಸಲು ಉತ್ಸಾಹ ತೋರುತ್ತಿದ್ದಾರೆ. ಅದರಂತೆ ಇದೀಗ ಮತ್ತೊಬ್ಬ ನಟ ಕೂಡ ಪಾಲಿಟಿಕ್ಸ್​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅದರಲ್ಲೊಂದು ಅಚ್ಚರಿಯ ಸಂಗತಿಯಂದ್ರೆ, ಈ ನಟ ಹಾಲಿ ಶಾಸಕ ಮುನಿರತ್ನ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರಂತೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಈ ಸಿನಿಮಾ ನಟ ಸ್ಪರ್ಧೆ ಮಾಡಲು ರೆಡಿಯಾಗಿದ್ದಾರೆ ಎನ್ನಲಾಗ್ತಿದೆ.

ಹಾಗಿದ್ದರೆ ಈ ಸ್ಟಾರ್​ ಎಂಟ್ರಿಯಿಂದ ರಾಜರಾಜೇಶ್ವರಿ ನಗರದಲ್ಲಿ ಓಟ್​ ಡಿವೈಡ್​​ ಆಗ್ಬಹುದಾ?, ನಟನ ರಾಜಕೀಯ ಎಂಟ್ರಿಯಿಂದ ಯಾವ ಪಕ್ಷಕ್ಕೆ ಲಾಭ, ಯಾವುದಕ್ಕೆ ನಷ್ಟ? ಈ ಸ್ಟಾರ್ ಹಿಂದೆ ರಾಜಕೀಯ ದಿಗ್ಗಜರ ದಂಡೇ ಇದೆ ಎಂಬ ಚರ್ಚೆಗಳು ಸ್ಯಾಂಡಲ್​ವುಡ್​ನಲ್ಲಿ ನಡೆಯುತ್ತಿವೆ. ಹೌದು, ಈ ಸ್ಟಾರ್ ನಟ ಬೇರೆ ಯಾರೂ ಅಲ್ಲ, ಚೇತನ್ ಚಂದ್ರ. ಬರೋಬ್ಬರಿ 15 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿರುವ ಚೇತನ್​, ಪಿಯುಸಿ, ಪ್ರೇಮಿಸಂ, ರಾಜಧಾನಿ, ಕುಂಬರಾಶಿ, ಜಾತ್ರೆ, ಹುಚ್ಚುಡುಗ್ರು, ಸಂಯುಕ್ತ 2, ಪ್ಲಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತನ್ನದೇಯಾದ ಐಡೆಂಟಿಟಿ ಹೊಂದಿದ್ದಾರೆ. ಸದ್ಯ ಚೇತನ್ ಚಂದ್ರ ಅಭಿನಯದ ಇತ್ತೀಚಿನ ಚಿತ್ರ‌ 'ಪ್ರಭುತ್ವ' ಇದೀಗ ಬಿಡುಗಡೆಗೂ ಸಜ್ಜಾಗಿದೆ.

ಇಂದಿನ ರಾಜಕೀಯ ಸ್ಥಿತಿ, ಸರ್ಕಾರದ ವ್ಯವಸ್ಥೆ ಬಗ್ಗೆ ಮಾತನಾಡೋ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೇ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಚೇತನ್ ಚಂದ್ರ ಕ್ರಾಂತಿಕಾರಿ ಯುವಕನಾಗಿ ಕಾಣಿಸಿಕೊಂಡಿದ್ದು, ವ್ಯವಸ್ಥೆ ಮತ್ತು ಮತದಾನದ ಬಗ್ಗೆ ಹೇಳಿರುವ ಡೈಲಾಗ್ಸ್​ಗಳು ಹೈಲೈಟ್​ ಆಗಿವೆ. ಅಲ್ಲದೇ ಈ ಸಿನಿಮಾದಿಂದಾಗಿ ಪ್ರೇರಣೆಗೊಂಡು ಚೇತನ್ ಚಂದ್ರ‌ ರಾಜಕೀಯಕ್ಕೆ ಧುಮುಕುತ್ತಿದ್ದಾರೆ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.

ಇದನ್ನೂ ಓದಿ: "ದಸರಾ" ಚಿತ್ರತಂಡಕ್ಕೆ ಚಿನ್ನದ ನಾಣ್ಯ ಗಿಫ್ಟ್​ ನೀಡಿದ ನಟಿ ಕೀರ್ತಿ ಸುರೇಶ್! ಯಾಕೆ ಗೊತ್ತಾ?

ಸ್ಥಿತಿವಂತ ಹಿನ್ನೆಲೆ ಇರೋ ಚೇತನ್ ಚಂದ್ರಗೆ ಈ ಹಿಂದೆಯೇ ಕಾರ್ಪೊರೇಟರ್ ಎಲೆಕ್ಷನ್​ಗೆ ಆಫರ್ ಬಂದಿತ್ತು. ಆದರೆ ಮುಂದಾಲೋಚನೆ ಮಾಡಿಟ್ಟುಕೊಂಡಿದ್ದ ಚೇತನ್ ಈ ಬಾರಿ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡೋ ಯೋಜನೆಯನ್ನು ಐದು ವರ್ಷದ ಹಿಂದೆಯೇ ರೂಪಿಸಿದ್ರಂತೆ. ಅದಕ್ಕೆ ತಕ್ಕಂತೆ ಇದೀಗ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ. ಅದಕ್ಕೆ ಕಾಕತಾಳೀಯ ಎಂಬಂತೆ ಈಗ ಪ್ರಭುತ್ವ ಸಿನಿಮಾ ಬಂದು ನಿಂತಿದೆ. ಎಲೆಕ್ಷನ್​ಗೂ ಮೊದ್ಲೇ ಪ್ರಭುತ್ವ ರಿಲೀಸ್ ಆಗೋದು ಕನ್ಫರ್ಮ್ ಆಗಿದೆ.

ಇದನ್ನೂ ಓದಿ: ಆಕಾಶದ ನಕ್ಷತ್ರಕ್ಕೆ 'ಅಪ್ಪು' ಹೆಸರು.. ಬಿಗ್ ಲಿಟ್ಲ್ ಕಂಪನಿ ಜೊತೆ ವಿಕ್ರಮ್ ಸಾಥ್​

ಈ ಸಿನಿಮಾ ಬಂದ ಮೇಲೆ ಚೇತನ್ ಚಂದ್ರ ಸಿನಿಮಾ ನಸೀಬು ಏನಾಗುತ್ತೋ ಗೊತ್ತಿಲ್ಲ. ಆದರೆ ರಾಜಕೀಯವಾಗಿ ಹಣೆಬರಹ ಬದಲಾಗೋ ಎಲ್ಲಾ ಸೂಚನೆಯೋ ಸಿಕ್ತಿದೆ. ಇದಿಷ್ಟು ತೆರೆಮರೆಯಲ್ಲಿ‌ ಸಿಕ್ಕಿರೋ ಮಾಹಿತಿ ಅಧಿಕೃತವಾಗಿ ಸದ್ಯದಲ್ಲೇ ಚೇತನ್ ಚಂದ್ರ ಈ ವಿಚಾರವನ್ನು ಬಹಿರಂಗಪಡಿಸಲಿದ್ದಾರೆ.

ಇದನ್ನೂ ಓದಿ: RRR ನಾಟು ನಾಟು ಕ್ರೇಜ್​​: ಮಸ್ಕ್ ಮೆಚ್ಚುಗೆ, ನೂರಾರು ಟೆಸ್ಲಾ ಕಾರುಗಳಲ್ಲಿ ಲೈಟ್​ ಶೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.