ETV Bharat / entertainment

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ಮೋಸ: ₹40 ಲಕ್ಷ ವಂಚನೆ ಆರೋಪ ದಾಖಲು - ₹2 ಕೋಟಿಗೂ ಹೆಚ್ಚು ವಹಿವಾಟು!

author img

By

Published : Jul 25, 2023, 10:47 AM IST

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.

Cheating case in the name of Master Anand daughter Vamshika
ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ವಂಚನೆ ಪ್ರಕರಣ
ವಂಚನೆ ಆರೋಪ ಪ್ರಕರಣ ಕುರಿತು ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ

ಬೆಂಗಳೂರು: ಕನ್ನಡ ಚಿತ್ರರಂಗದ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರು ಬಳಸಿ ವಂಚನೆ ಮಾಡಿರುವ ಆರೋಪ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಈವರೆಗೂ 40 ಲಕ್ಷ ರೂ.ಯಷ್ಟು ಮೋಸ ನಡೆದಿದೆ ಎಂದು ದೂರು ದಾಖಲಾಗಿವೆ. ಆದರೆ ಆರೋಪಿ ನಿಶಾ ನರಸಪ್ಪ 2 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸಿರುವುದು ಪತ್ತೆಯಾಗಿದೆ. ಆದಾಗ್ಯೂ ಆರೋಪಿಯ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಕೇವಲ 8 ಸಾವಿರ ರೂ. ಕಂಡುಬಂದಿದ್ದು ಅಚ್ಚರಿ ಮೂಡಿಸಿದೆ.

ಐಷಾರಾಮಿ ಜೀವನದ ಶೋಕಿಗೆ ಬಿದ್ದಿದ್ದ ನಿಶಾ ನರಸಪ್ಪ ಮಕ್ಕಳಿಗೆ ರಿಯಾಲಿಟಿ ಶೋಗಳಲ್ಲಿ‌ ಅವಕಾಶ ಕೊಡಿಸುವುದಾಗಿ ಹೇಳಿ ಪೋಷಕರಿಂದ ಹಣ ಪಡೆಯುತ್ತಿದ್ದರು. ಅದೇ ಹಣದಲ್ಲಿ ಬಾರ್, ಪಬ್, ಹೋಟೆಲ್​ಗಳಲ್ಲಿ ಪಾರ್ಟಿ ಮಾಡುತ್ತಿದ್ದರು. ಅಲ್ಲದೇ ಶೇ.20ರಷ್ಟು ಬಡ್ಡಿ ನೀಡುವುದಾಗಿ ಹಣ ಪಡೆದು ಸಾಕಷ್ಟು ಜನರಿಗೆ ವಂಚಿಸಿದ್ದರು ಎಂಬ ಸಾಕಷ್ಟು ಆರೋಪಗಳಿವೆ. ಆದರೆ ಈ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿರಲಿಲ್ಲ.

ಪೊಲೀಸ್‌ ಅಧಿಕಾರಿ ಪ್ರತಿಕ್ರಿಯೆ: "ಇತ್ತೀಚೆಗಷ್ಟೇ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಹಲವು ಆರೋಪಗಳು ಕೇಳಿ ಬಂದಿವೆ. ಈವರೆಗೆ ಸುಮಾರು 60 ದೂರುಗಳು ದಾಖಲಾಗಿವೆ. ವಂಚನೆಗೊಳಗಾದ ಪೋಷಕರ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದೆ. ಸುಮಾರು 40 ಲಕ್ಷ ರೂ. ವಂಚಿರುವುದು ತನಿಖೆಯಲ್ಲಿ ಬಯಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ವಿಚಾರಣೆಯ ಬಳಿಕ ಸಂಪೂರ್ಣ ಮಾಹಿತಿ‌ ನೀಡಲಾಗುವುದು" ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: Dhoni wife Sakshi: 'ನಾನು ಅಲ್ಲು ಅರ್ಜುನ್ ಫ್ಯಾನ್​, ಪ್ರಭಾಸ್ ಜೊತೆ ಸಿನಿಮಾ ಮಾಡುವ ಯೋಚನೆಯಿದೆ': ಧೋನಿ ಪತ್ನಿ ಸಾಕ್ಷಿ

ಬಹುಸಮಯದಿಂದ ಸ್ಯಾಂಡಲ್​ವುಡ್​ನಲ್ಲಿ ನಟ, ನಿರೂಪಕನಾಗಿ ಗುರುತಿಸಿಕೊಂಡಿರುವ ಮಾಸ್ಟರ್ ಆನಂದ್ ಮತ್ತು ಯಶಸ್ವಿನಿ ದಂಪತಿ ಪುತ್ರಿ ವಂಶಿಕಾ ಕಿರುತೆರೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಂಶಿಕಾ ಹೆಸರು ಬಳಸಿಕೊಂಡು ಬಹಳ ಮಂದಿಗೆ ಮೋಸ ಮಾಡಲಾಗಿದೆ. ಮಕ್ಕಳ ಟ್ಯಾಲೆಂಟ್ ಶೋ, ಆ್ಯಡ್ ಶೂಟ್ ಹೀಗೆ ಶೋಗಳಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ನಿಶಾ ನರಸಪ್ಪ ನೂರಾರು ಪೋಷಕರಿಗೆ ವಂಚನೆ ಮಾಡಿರುವ ಗಂಭೀರ ಆರೋಪ‌ಗಳಿವೆ. ಪೋಷಕರಿಂದ ಲಕ್ಷಾಂತರ ರೂ. ಹಣ ಪಡೆದು ನಿಶಾ ನರಸಪ್ಪ ವಂಚಿಸಿದ್ದಾರೆಂದು ವಂಶಿಕಾ ತಾಯಿ ಯಶಸ್ವಿನಿ ಆರೋಪಿಸಿದ್ದಾರೆ. ಇದೇ ಜುಲೈ ಎರಡನೇ ವಾರದಲ್ಲಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ನಿಶಾ ನರಸಪ್ಪ ವಿರುದ್ದ 30ಕ್ಕೂ ಹೆಚ್ಚು ಜನರಿಂದ ದೂರು: ಪುನೀತ್, ಶಿವರಾಜ್‌ಕುಮಾರ್‌ ಹೆಸರಲ್ಲೂ ವಂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.