ಈ ಹೆಸರೇ ಹೇಳುವ ಹಾಗೆ ಚಾಂದನಿ ಬಾರ್‌ನಲ್ಲಿ ನಡೆಯುವ ಕಥೆ ಇದು. ನಾಲ್ಕು ಹುಡುಗರು ಒಂದು ಬಾರ್ ನಲ್ಲಿ ಕೆಲಸ ಮಾಡ್ತಾ, ಹೇಗೆ ತಮ್ಮ ಜೀವನದಲ್ಲಿ ದೊಡ್ಡ ಸಾಧನೆ ಮಾಡ್ತಾರೆ ಅನ್ನೋದು ಚಿತ್ರದ ಸಾರ. ಸರ್ವೇಜನಾಃ ಸುಖಿನೋ ಭವಂತು ಎಂದು ಅಡಿಬರಹ ನೀಡಲಾಗಿದೆ. ರಾಘವೇಂದ್ರ ಕುಮಾರ್ ನಿರ್ದೇಶನದೊಂದಿಗೆ ನಾಯಕನಾಗಿ ಅಭಿನಯಿಸಿದ್ದಾರೆ.
ಈ ಸಿನಿಮಾ ಮಾಡಲು ಗಾಂಧಿನಗರದಲ್ಲಿ ಸಾಕಷ್ಟು ನಿರ್ಮಾಪಕರ ಬಳಿ ಕಥೆ ಹೇಳಿದ್ರಂತೆ. ಕೊನೆಗೆ ಯಾರೂ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಾರದಿದ್ದಾಗ ನಿರ್ದೇಶಕ ರಾಘವೇಂದ್ರ ಹಾಗು ಸಿದ್ದು ಬದನವಾಳು, ಭರತ್ ಕುಮಾರ್, ಸಂಗೀತ ನಿರ್ದೇಶಕರಾದ ವಿಶಾಕ್ ಹಾಗು ಕಾರ್ತಿಕ್ ನಾಗಲಾಪುರ ಹಾಗು ಕೆಲ ಸಿನಿಮಾ ಆಸಕ್ತರ ಸಹಾಯದಿಂದ ಸಿನಿಮಾ ನಿರ್ಮಿಸಿದ್ದಾರೆ. ಸುಮಾರು 60 ಲಕ್ಷ ರೂ ಖರ್ಚಾಗಿದೆ ಎಂದು ಕಾರ್ಯಕಾರಿ ನಿರ್ಮಾಪಕ ಭರತ್ ಕುಮಾರ್ ಹೇಳಿದ್ದಾರೆ.
ರಾಘವೇಂದ್ರ ಕುಮಾರ್‌ಗೆ ಜೋಡಿಯಾಗಿ, ರಂಗಭೂಮಿ ಹಿನ್ನಲೆಯ ಸುಕೃಷಿ ಪ್ರಭಾಕರ್ ವಿದ್ಯಾರ್ಥಿನಿ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ರಶ್ಮಿ ಮಂಜು ಆರ್ಯ, ವಿಜಯ್ ಕಾರ್ತಿಕ್, ಸಂಪತ್ ಮೈತ್ರೇಯಾ, ಸೂರ್ಯ ಶೇಖರ್, ಭರತ್ ಕುಮಾರ್ ಬಿ ಹೀಗೆ ಸಾಕಷ್ಟು ಕಲಾವಿದರಿದ್ದಾರೆ. ಚೇತನ್ ಶರ್ಮಾ ಛಾಯಾಗ್ರಾಹಣವಿದ್ದು, ವಿಶಾಕ್ ನಾಗಲಾಪುರ ಮತ್ತು ಕಾರ್ತಿಕ್ ನಾಗಲಾಪುರ ಎಂಬ ಸಹೋದರರು ಸಂಗೀತ ನಿರ್ದೇಶನ ಮಾಡಿದ್ದಾರೆ. ಬಿ.ಎಸ್.ಕೆಂಪರಾಜ್ ಸಂಕಲನ, ರಿತ್ವಿಕ್ ಮುರುಳೀಧರ್ ಹಿನ್ನೆಲೆ ಸಂಗೀತವಿದೆ. ಹಾಡುಗಳನ್ನು ಈಗಾಗಲೇ ರಿಲೀಸ್ ಮಾಡಲಾಗಿದ್ದು ಸಿನಿಮಾ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ.
ಇದನ್ನೂ ಓದಿ: ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯತಿಥಿ; ರಂಗ ಗೀತೆಗಳ ಮೂಲಕ ನಮನ