ETV Bharat / entertainment

'ಚಕ್​ ದೇ ಇಂಡಿಯಾ' ಖ್ಯಾತಿಯ ಬಾಲಿವುಡ್​ ನಟ ರಿಯೊ ಕಪಾಡಿಯಾ ನಿಧನ - ಈಟಿವಿ ಭಾರತ ಕನ್ನಡ

India fame actor Rio Kapadia dies: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಬಾಲಿವುಡ್​ ನಟ ರಿಯೊ ಕಪಾಡಿಯಾ ಇಂದು ನಿಧನರಾದರು.

Chak De! India fame actor Rio Kapadia dies
'ಚಕ್​ ದೇ ಇಂಡಿಯಾ' ಖ್ಯಾತಿಯ ಬಾಲಿವುಡ್​ ಹಿರಿಯ ನಟ ರಿಯೊ ಕಪಾಡಿಯಾ ನಿಧನ
author img

By ETV Bharat Karnataka Team

Published : Sep 14, 2023, 8:15 PM IST

'ಚಕ್​ ದೇ ಇಂಡಿಯಾ', 'ಹ್ಯಾಪಿ ನ್ಯೂ ಇಯರ್​', 'ಮರ್ದಾನಿ' ಚಿತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್​ ನಟ ರಿಯೊ ಕಪಾಡಿಯಾ ಇಂದು ನಿಧನರಾದರು. ಕ್ಯಾನ್ಸರ್​ನೊಂದಿಗಿನ ಸುದೀರ್ಘ ಹೋರಾಟದ ನಂತರ ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ನಟನ ಅಂತ್ಯಕ್ರಿಯೆಯು ಶುಕ್ರವಾರ ಮುಂಬೈನ ಗೋರೆಗಾಂವ್​​ನಲ್ಲಿ ನಡೆಯಲಿದೆ. ರಿಯೊ ಕಪಾಡಿಯಾ ಕೊನೆಯದಾಗಿ 'ಮೇಡ್​ ಇನ್​ ಹೆವೆನ್​ ಸೀಸನ್​ 2' ವೆಬ್ ​ಸಿರೀಸ್​ನಲ್ಲಿ ನಟಿ ಮೃಣಾಲ್​ ಠಾಕೂರ್​ ಅವರ ತಂದೆಯಾಗಿ ಕಾಣಿಸಿಕೊಂಡಿದ್ದರು.

ರಿಯೊ ಕಪಾಡಿಯಾ ನಿಧನದ ಸುದ್ದಿಯನ್ನು ಅವರ ಸ್ನೇಹಿತ ಫೈಸಲ್​ ಮಲಿಕ್​ ಖಚಿತಪಡಿಸಿದ್ದಾರೆ. ನಟ ಪತ್ನಿ ಮರಿಯಾ ಫರಾಹ್​ ಮತ್ತು ಇಬ್ಬರು ಮಕ್ಕಳಾದ ಅಮನ್​ ಮತ್ತು ವೀರ್​ ಅವರನ್ನು ಅಗಲಿದ್ದಾರೆ. ರಿಯೊ ಕಪಾಡಿಯಾ ಅವರಿಗೆ ಕಳೆದ ವರ್ಷ ಕ್ಯಾನ್ಸರ್​ ಇರುವುದು ಪತ್ತೆಯಾಯಿತು.

ರಿಯೊ ಕಪಾಡಿಯಾ ಬಗ್ಗೆ.. ರಿಯೊ ಕಪಾಡಿಯಾ ಅವರು ಖುದಾ ಹಾಫಿಜ್​, ದಿ ಬಿಗ್​ ಬುಲ್​, ಏಜೆಂಟ್​ ವಿನೋದ್​ ಮತ್ತು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಬಿಡುಗಡೆಯಾದ ವೆಬ್​ ಸಿರೀಸ್​ 'ಮೇಡ್​ ಇನ್​ ಹೆವೆನ್​ ಸೀಸನ್​ 2'ನಲ್ಲಿಯೂ ನಟಿಸಿದ್ದರು. ಹಿಂದಿ ಸಿನಿಮಾಗಳ ಹೊರತಾಗಿ ಕಿರುತೆರೆಯಲ್ಲೂ ಮಿಂಚಿದ್ದಾರೆ. ಸಪ್ಮೆ ಸುಹಾನೆ ಲಡಕ್ಪಾನ್​ ಕೆ ಮತ್ತು ಸಿದ್ಧಾರ್ಥ್​ ತಿವಾರಿಯ ಮಹಾಭಾರತದಲ್ಲೂ ಬಣ್ಣ ಹಚ್ಚಿದ್ದರು. ಗಾಂಧಾರಿಯ ತಂದೆ, ಗಾಂಧಾರದ ರಾಜ ಸುಲಬನ ಪಾತ್ರವನ್ನು ನಿರ್ವಹಿಸಿದ್ದರು.

ಇದನ್ನೂ ಓದಿ: ಜೈಲರ್ ಚಿತ್ರದಲ್ಲಿ ಅಭಿನಯಿಸಿದ್ದ ಖ್ಯಾತ ತಮಿಳು ನಟ, ನಿರ್ದೇಶಕ ಜಿ.ಮಾರಿಮುತ್ತು ಹೃದಯಾಘಾತದಿಂದ ನಿಧನ

ರಿಯೊ ಕಪಾಡಿಯಾ ಕೇವಲ ಒಬ್ಬ ನಟ ಮಾತ್ರವಲ್ಲ, ಚಿತ್ರ​ ಕಲಾವಿದ ಕೂಡ ಆಗಿದ್ದರು. ಅವರು ತಮ್ಮ ಕೆಲಸದ ಸ್ನೀಕ್​ ಪೀಕ್​ಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದರು. ದಿವಂಗತ ನಟ ದಿಲೀಪ್​ ಕುಮಾರ್​, ಅಮುತಾಭ್​ ಬಚ್ಚನ್​, ಜಯಾ ಬಚ್ಚನ್​, ರಿಷಿ ಕಪೂರ್​, ಶ್ರೀದೇವಿ, ಐಶ್ವರ್ಯಾ ರೈ ಮತ್ತು ಮಾಧುರಿ ದೀಕ್ಷಿತ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಫೋಟೋಗಳನ್ನು ಚಿತ್ರಿಸಿದ್ದಾರೆ. ಎಲ್ಲವೂ ಪರ್ಪೆಕ್ಟ್​ ಆಗಿದೆ. ಇವರ ಕೊನೆಯ ಪೋಸ್ಟ್​ ಜೂನ್​ 5ರಂದು ಇದೆ. ಯುರೋಪ್​ಗೆ ಪ್ರವಾಸಕ್ಕೆ ತೆರಳಿದ್ದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು.

ಅಭಿಮಾನಿಗಳಿಂದ ಸಂತಾಪ: ರಿಯೊ ಕಪಾಡಿಯಾ ಅವರ ನಿಧನವು ಕುಟುಂಬಸ್ಥರಿಗೆ ಆಘಾತ ನೀಡಿದೆ. ಅವರ ಅಭಿಮಾನಿಗಳು ನಟನಿಗೆ ಸಂತಾಪ ಸೂಚಿಸಲು ಸೋಷಿಯಲ್​ ಮೀಡಿಯಾವನ್ನು ವೇದಿಕೆಯಾಗಿ ಬಳಸಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಒಬ್ಬ ಅದ್ಭುತ ನಟನನ್ನು ಕಳೆದುಕೊಂಡಿರುವುದು ಹಿಂದಿ ಚಿತ್ರರಂಗಕ್ಕೆ ತುಂಬಲಾರದ ನಷ್ಟ.

ಇದನ್ನೂ ಓದಿ: 'ಬೀರ್​ಬಲ್​' ಖ್ಯಾತಿಯ ಹಿರಿಯ ಹಾಸ್ಯನಟ ಸತೀಂದರ್ ಕುಮಾರ್ ಖೋಸ್ಲಾ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.