ETV Bharat / entertainment

'ಶಿವಾಜಿ ಸುರತ್ಕಲ್ 2'ಗೆ ಐಪಿಎಸ್ ಅಧಿಕಾರಿಗಳಿಂದ ಬಹುಪರಾಕ್ - ಈಟಿವಿ ಭಾರತ ಕನ್ನಡ

ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ 2 ಸಿನಿಮಾ ವೀಕ್ಷಿಸಿದ ರಾಜ್ಯದ ಗಣ್ಯ ವ್ಯಕ್ತಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Shivaji Suratkal 2
'ಶಿವಾಜಿ ಸುರತ್ಕಲ್ 2'
author img

By

Published : Apr 27, 2023, 1:30 PM IST

ನಟ ರಮೇಶ್ ಅರವಿಂದ್ ಡಿಟೆಕ್ಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಶಿವಾಜಿ ಸುರತ್ಕಲ್ 2 ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ' ಚಲನಚಿತ್ರವು ಎರಡು ವಾರಗಳ ಯಶಸ್ವಿ ಓಟದ ನಂತರ ಭರದಿಂದ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಸಂಭ್ರಮದ ವಿಚಾರ ಏನೆಂದರೆ ಹಲವು ಉನ್ನತ ಮಟ್ಟದ ಸಾಧಕರು ಚಿತ್ರವನ್ನು ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ನೆಟ್​ಫ್ಲಿಕ್ಸ್​​ನ ಇಂಡಿಯನ್ ಡಿಟೆಕ್ಟಿವ್ ಎನ್ನುವ ಸಾಕ್ಷ್ಯ ಚಿತ್ರದಲ್ಲಿ ಕಾಣಿಸಿಕೊಂಡ ಹಾಗೂ ಸೂಪರ್ ಕಾಪ್ ಎಂದೇ ಪ್ರಸಿದ್ಧರಾದ ರೈಲ್ವೆ ಡಿಐಜಿ ಶಶಿಕುಮಾರ್​ ಅವರು ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮುಖ್ಯವಾಗಿ ಚಿತ್ರದಲ್ಲಿ ಬರುವ ಪೊಲೀಸ್ ತನಿಖೆಯ ವಿಧಾನಗಳನ್ನು, ವಿಶೇಷವಾಗಿ ರಮೇಶ್ ಅರವಿಂದ್ ಅವರ ಪಾತ್ರವನ್ನು ಬಹಳ ಮೆಚ್ಚಿಕೊಂಡಿದ್ದಾರೆ.

ಇನ್ನು ಡಿಜಿಪಿ ಹಾಗೂ ಐಪಿಎಸ್ ಆಫೀಸರ್ ಆದ ರೂಪಾ ಮುದ್ಗಲ್ ಅವರು ಕೂಡಾ ಚಿತ್ರವನ್ನು ವೀಕ್ಷಿಸಿ ತಂಡದ ಪ್ರಯತ್ನದ ಬಗ್ಗೆ, ಆಕಾಶ್ ಶ್ರೀವತ್ಸ ಅವರ ನಿರ್ದೇಶನದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ವಿಶೇಷವಾಗಿ ಚಿತ್ರದಲ್ಲಿ ಮೇಘನಾ ಗಾಂವ್ಕರ್ ಅವರ ಪಾತ್ರವನ್ನು ಹೊಗಳಿದ್ದಾರೆ. ತಾನೂ ಕೂಡಾ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಆಗಿರುವುದರಿಂದ, ಮೇಘನಾ ಅವರ ಪಾತ್ರ ಇನ್ನಷ್ಟು ಹತ್ತಿರವಾಯಿತು ಎಂದಿದ್ದಾರೆ.

Shivaji Suratkal 2
'ಶಿವಾಜಿ ಸುರತ್ಕಲ್ 2' ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯದ ಗಣ್ಯ ವ್ಯಕ್ತಿಗಳು

ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮಂಜುನಾಥ್ ಅವರು ಕೂಡ ಚಿತ್ರವನ್ನು ನೋಡಿದ್ದಾರೆ. ಚಿತ್ರವು ಅವರಿಗೆ ಬಹುವಾಗಿ ಮೆಚ್ಚುಗೆಯಾಗಿದ್ದು, ಹೀಗೆಯೇ ಭವಿಷ್ಯದಲ್ಲಿ ತಂಡವು ಮತ್ತಷ್ಟು ಶಿವಾಜಿ ಸುರತ್ಕಲ್ ಚಿತ್ರಗಳನ್ನು ತಯಾರಿಸಲಿ ಎಂದು ಶುಭಹಾರೈಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಿನ್ಸಿಪಲ್ ಸೆಕ್ರೆಟರಿ ಮಂಜುನಾಥ್ ಪ್ರಸಾದ್ ಅವರು ಕೂಡ ಚಿತ್ರವನ್ನು ನೋಡಿ ಮೆಚ್ಚಿ, ಚಿತ್ರವು ರೋಚಕವಾಗಿಯೂ, ಭಾವನಾತ್ಮಕವಾಗಿಯೂ ಇದೆ ಎಂದು ಹೇಳಿದರು.

ಇದನ್ನೂ ಓದಿ: ಹೆಬ್ಬುಲಿಯ​ ಅಬ್ಬರದ ಪ್ರಚಾರ: ಅಭಿಮಾನಿಗಳ ಘೋಷಣೆಗಳ ನಡುವೆ ಬಿಜೆಪಿ ಅಭ್ಯರ್ಥಿ ಬೆಂಬಲಿಸುವಂತೆ ಮನವಿ

ಚಿತ್ರದ ಸಕ್ಸಸ್ ಮೀಟ್ ಅನ್ನು ರಾಮನಗರದ ಶ್ರವಣ್ ಸಿನಿಮಾಸ್​ನಲ್ಲಿ ಹಾಗೂ ಮೈಸೂರಿನ ಡಿಆರ್​ಸಿ ಸಿನಿಮಾಸ್​ನಲ್ಲಿ ನಡೆಸಲಾಯಿತು. ಮೈಸೂರಿನ ಪ್ರದರ್ಶನದಲ್ಲಿ ಸಾಕಷ್ಟು ಜನ ಪೋಲಿಸ್ ಅಧಿಕಾರಿಗಳು, ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ, ನಿರ್ಮಾಪಕರಾದ ಅನೂಪ್ ಗೌಡ, ನಟಿಯರಾದ ರಾಧಿಕಾ ನಾರಾಯಣ್, ಸಂಗೀತಾ ಶೃಂಗೇರಿ ಅವರ ಜೊತೆ ಸಿನಿಮಾ ವೀಕ್ಷಿಸಿದರು.

ಶಿವಾಜಿ ಸುರತ್ಕಲ್ 2 ಚಿತ್ರವು ಮೊದಲನೇ ಚಿತ್ರದ ಕಲೆಕ್ಷನ್​ಗಳನ್ನು ಮುರಿಯುವ ಭರವಸೆ ಹುಟ್ಟಿಸಿ ಯಶಸ್ವಿ ಮೂರನೇ ವಾರಕ್ಕೆ ಕಾಲಿಡುತ್ತಿದೆ. ಚಿತ್ರವು ಒಂದು ಎಮೋಶನಲ್ ಥ್ರಿಲ್ಲರ್ ಎಂದು ಸಾಕಷ್ಟು ಸದ್ದು ಮಾಡಿ, ಶಿವಾಜಿ ಸುರತ್ಕಲ್ 3 ನೇ ಭಾಗವನ್ನೂ ಮಾಡುವ ಭರವಸೆಯನ್ನು ಮೂಡಿಸಿದೆ. ಚಿತ್ರದ ನಿರ್ದೇಶಕರಾದ ಆಕಾಶ್ ಶ್ರೀವತ್ಸ, ನಿರ್ಮಾಪಕರಾದ ಅನೂಪ್ ಗೌಡ, ರೇಖಾ ಕೆ ಎನ್ ಚಿತ್ರದ ಯಶಸ್ಸಿನ ಬಗ್ಗೆ ಅಪಾರವಾದ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನಸುಗಾರ ರವಿಚಂದ್ರನ್ ಸುಪುತ್ರನ ಸಿನಿಮಾ ಶೀರ್ಷಿಕೆ ಅನಾವರಣ: ಕ್ಯಾಚಿ ಟೈಟಲ್​ನೊಂದಿಗೆ ಬಂದ ವಿಕ್ರಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.