ETV Bharat / entertainment

ಹೊಸ ಪ್ರತಿಭೆಗಳ 'ಬುದ್ಧ' ಫಸ್ಟ್ ಲುಕ್ ರಿಲೀಸ್​ - Buddha movie

ಹೊಸಬರ 'ಬುದ್ಧ' ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ.

Buddha first look release
'ಬುದ್ಧ' ಫಸ್ಟ್ ಲುಕ್ ರಿಲೀಸ್​
author img

By

Published : Feb 15, 2023, 4:16 PM IST

ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಚಿತ್ರದ ಕಥೆ, ಮೇಕಿಂಗ್​, ತಾರಾಗಣ ಎಲ್ಲರ ಗಮನ ಸೆಳೆಯುತ್ತಿದೆ. ಕೆಜಿಎಫ್​, ಕಾಂತಾರ ಯಶಸ್ಸಿನ ಬಳಿಕ ಸ್ಯಾಂಡಲ್​ವುಡ್​ ವರ್ಚಸ್ಸು ​ಉತ್ತುಂಗಕ್ಕೇರಿದೆ. ಈ ಹಿನ್ನೆಲೆ ಇಡೀ ಭಾರತೀಯ ಚಿತ್ರರಂಗದ ಕಣ್ಣು ಕನ್ನಡ ಚಿತ್ರರಂದ ಮೇಲಿದೆ. ಈ ಮಧ್ಯೆ ಸ್ಯಾಂಡಲ್​ವುಡ್​ಗೆ ಪ್ರತಿಭಾನ್ವಿತ ನಿರ್ದೇಶಕರಿಂದ ಹಿಡಿದು ಯುವ ನಟ, ‌ನಟಿಯರ ಎಂಟ್ರಿ ಆಗುತ್ತಿದೆ. ಯಶಸ್ಸು ಕಾಣಬೇಕು ಎಂಬ ಗುರಿಯನ್ನಿಟ್ಟುಕೊಂಡು ಚಿತ್ರರಂಗಕ್ಕೆ ಅನೇಕರು ಎಂಟ್ರಿ ಕೊಡುತ್ತಾರೆ. ಕೆಲವರಿಗೆ ಈ ರಂಗ ಕೈ ಹಿಡಿಯುತ್ತದೆ.

Buddha first look release
'ಬುದ್ಧ' ಫಸ್ಟ್ ಲುಕ್ ರಿಲೀಸ್​

ಬುದ್ಧ ಚಿತ್ರದ ಫಸ್ಟ್ ಲುಕ್: ಇದೀಗ ಬುದ್ಧ ಅನ್ನೋ ಶೀರ್ಷಿಕೆಯೊಂದಿಗೆ ಹೊಸ ಚಿತ್ರ ತಂಡವೊಂದು ಚಂದನವನಕ್ಕೆ ಎಂಟ್ರಿ ಕೊಟ್ಟಿದೆ. ಮಹೇಶ್ ಬಾಬು ಎಂಬ ಯುವ ನಟ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ರಾಮ್ ಪೆರಿಯಸಾಮಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬುದ್ಧ ಚಿತ್ರದ ಫಸ್ಟ್ ಲುಕ್ ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಬಿಡುಗಡೆ ಆಗಿದೆ. ಚಿತ್ರದ ಫಸ್ಟ್ ಲುಕ್ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ.

Buddha first look release
'ಬುದ್ಧ' ಫಸ್ಟ್ ಲುಕ್ ರಿಲೀಸ್​

ಮೊದಲ ಹಂತದ ಚಿತ್ರೀಕರಣ ಮುಕ್ತಾಯ: ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಅಭಿನಯದ ಬಗ್ಗೆ ತರಬೇತಿ ಪಡೆದಿರುವ ಮಹೇಶ್ ಬಾಬು ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಮಹೇಶ್ ಜೋಡಿಯಾಗಿ ವಿದ್ಯಾರಾಜ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಾಶಿಯಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುವ ಯೋಜನೆ ಈ ಚಿತ್ರತಂಡಕ್ಕಿದೆ.

ಇದನ್ನೂ ಓದಿ: ಬಹುನಿರೀಕ್ಷಿತ ಜೂಲಿಯೆಟ್‌ 2 ಟ್ರೇಲರ್​ ರಿಲೀಸ್​: ಆ್ಯಕ್ಷನ್​ ಅವತಾರದಲ್ಲಿ ಬೃಂದಾ ಆಚಾರ್ಯ

ವಿಭಿನ್ನ ಕಥಾಹಂದರದ 'ಬುದ್ಧ': "ಬುದ್ಧ" ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ. ಚಿತ್ರದಲ್ಲಿ ಕಳೆದು ಹೋದವರನ್ನು ನಾಯಕ ಹುಡುಕಿ ಕೊಡುತ್ತಾನೆ. ಈ ಚಿತ್ರದ ಕಥೆಯಲ್ಲಿ ನಾಯಕನೇ ಕಳೆದು ಹೋಗುತ್ತಾನೆ, ಮುಂದೇನು? ಎಂಬುದೇ ಕುತೂಹಲ ಎಂದು ಚಿತ್ರ ಕಥೆಯ ತಿರುಳನ್ನು ನಾಯಕ ಮಹೇಶ್ ಬಾಬು ವಿವರಿಸಿದರು. ಇದೊಂದು ಕೌಟುಂಬಿಕ ಚಿತ್ರ ಎಂದು ಸಹ ತಿಳಿಸಿದರು.

ಇದನ್ನೂ ಓದಿ: ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ!

ಬುದ್ಧ ಚಿತ್ರತಂಡ: ಚಿತದಲ್ಲಿ ಐದು ಹಾಡುಗಳಿವೆ. ಒಂದು ಹಾಡನ್ನು ಡಾ.ವಿ ನಾಗೇಂದ್ರ ಪ್ರಸಾದ್, ನಾಲ್ಕು ಹಾಡುಗಳನ್ನು ಚೇತನ್ ಕುಮಾರ್ ಬರೆಯತ್ತಿದ್ದಾರೆ. ರಾಘವೇಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ನಾಗ ಶೆಟ್ಟಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಹೇಶ್ ಬಾಬು, ವಿದ್ಯಾರಾಜ್ ಜೊತೆಗೆ ರಾಮಕೃಷ್ಣ (ತಮಿಳು), ತಬಲನಾಣಿ, ಸಿದ್ಲಿಂಗು ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರು ಈ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟಿ ಪವಿತ್ರ ಲೋಕೇಶ್ ಅವರು ಸಹ ಎರಡನೇ ಹಂತದ ಚಿತ್ರೀಕರಣದಲ್ಲಿ ನಟಿಸುವ ಸಾಧ್ಯತೆ ಇದೆ. ವರ್ತನ್​​ ಪಿಕ್ಚರ್ಸ್ ಲಾಂಛನದಲ್ಲಿ ಸುರೇಶ್ ಭಾರದ್ವಾಜ್ ಕನಕಪುರ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮರುಮದುವೆ ಸಂತಸದಲ್ಲಿ ಹಾರ್ದಿಕ್ ಪಾಂಡ್ಯ ದಂಪತಿ: ಪುತ್ರನಿಗೆ ಪೋಷಕರ ವಿವಾಹ ನೋಡುವ ಭಾಗ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.