ETV Bharat / entertainment

ಹೊಸ ಸಿನಿಮಾದಲ್ಲಿ ಮೋಡಿ ಮಾಡಲಿದೆ ನಿರೂಪ್ ಭಂಡಾರಿ-ಬೃಂದಾ ಜೋಡಿ - Brinda Acharya movies

Brinda Acharya upcoming movies: 'ಕೌಸಲ್ಯಾ ಸುಪ್ರಜಾ ರಾಮ' ಖ್ಯಾತಿಯ ನಟಿ ಬೃಂದಾ ಆಚಾರ್ಯ ಅವರ ಮುಂದಿನ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

Brinda Acharya upcoming movies
ಬೃಂದಾ ಆಚಾರ್ಯ ಮುಂದಿನ ಸಿನಿಮಾಗಳು
author img

By ETV Bharat Karnataka Team

Published : Dec 28, 2023, 3:41 PM IST

ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಯಾರಿಗೆ? ಯಾವಾಗ? ಅದೃಷ್ಟ ದೇವತೆ ಒಲಿಯುತ್ತಾಳೆ ಎಂಬುದನ್ನು ಊಹಿಸಿ ಹೇಳಲು ಸಾಧ್ಯವಿಲ್ಲ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಬಳಿಕ ಕೆಲವರು ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಕೆಲವರು ಒಂದೆರಡು ಸಿನಿಮಾಗಳಲ್ಲೇ ಸೂಪರ್ ಹಿಟ್​ ಆಗಿ ಬಿಡುತ್ತಾರೆ. ಈ ಮಾತು 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾದಲ್ಲಿ ಶಿವಾನಿ ಪ್ರಾತ್ರದಲ್ಲಿ ಅಭಿನಯಿಸಿದ್ದ ಚೆಲುವೆ ಬೃಂದಾ ಆಚಾರ್ಯ ಜೀವನದಲ್ಲಿ ನಿಜವಾಗುತ್ತಿದೆ. ಶಿವಾನಿಯಾಗಿ ಪ್ರೇಕ್ಷಕರ ಗಮನ ಸೆಳೆದ ಬೃಂದಾ ಮುಂದೀಗ ಸಾಕಷ್ಟು ಅವಕಾಶಗಳಿವೆ. ಇತ್ತೀಚೆಗೆ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.

ನಿರೂಪ್ ಭಂಡಾರಿಗೆ ಜೋಡಿಯಾಗಿ ಇವರು ನಟಿಸಲಿದ್ದಾರೆ. ಶೀರ್ಷಿಕೆ ಫೈನಲ್​ ಆಗದ ಈ ಚಿತ್ರವನ್ನು ಸಚಿನ್ ವಾಲಿ ನಿರ್ದೇಶನ ಮಾಡುವರು. ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಸಚಿನ್ ಪಾಲಿಗಿದು ಸ್ವತಂತ್ರ್ಯ ನಿರ್ದೇಶಕರಾಗಿ ಕೆಲಸ ಮಾಡಲು ಸಿಕ್ಕ ಚೊಚ್ಚಲ ಅವಕಾಶ. ಬೃಂದಾ ಅವರಿಗೂ ವಿಭಿನ್ನ ಪಾತ್ರ ಸಿಕ್ಕಿದೆ. ಕಿರುತೆರೆಯಲ್ಲಿ ಖ್ಯಾತಿ ಗಳಿಸಿಕೊಂಡಿರುವ ಅಂಕಿತಾ ಅಮರ್ ಚಿತ್ರದಲ್ಲಿ ವರದಿಗಾರ್ತಿಯಾಗಿ ನಟಿಸಲಿದ್ದಾರೆ.

Brinda Acharya
ಬೃಂದಾ ಆಚಾರ್ಯ

ಕೌಸಲ್ಯಾ ಸುಪ್ರಜಾ ರಾಮ ಚಿತ್ರದಲ್ಲಿನ ಶಿವಾನಿ ಪಾತ್ರದ ಅಭಿನಯಕ್ಕೆ ಬೃಂದಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ತದನಂತರ ಒಂದರ ಹಿಂದೊಂದರಂತೆ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ, ರಾಮ ರಾಮಾ ರೇ ಖ್ಯಾತಿಯ ಸತ್ಯ ಪ್ರಕಾಶ್ ಜೊತೆಗಿನ 'ಎಕ್ಸ್ ಆ್ಯಂಡ್ ವೈ', ಎಸ್.ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಚಿತ್ರಗಳು ನಟಿ ಬೃಂದಾ ಅವರ ಕೈಯಲ್ಲಿವೆ. ಕಥೆ, ಪಾತ್ರವನ್ನು ಇಷ್ಟಪಟ್ಟು ಬೃಂದಾ ಅಭಿನಯಿಸುತ್ತಿದ್ದಾರೆ. ಹೊಸ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆಗಳನ್ನು ಇವರು ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: 'ಶ್ರಾವಣಿ ಸುಬ್ರಮಣ್ಯ'ಕ್ಕೆ 10 ವರ್ಷ: 'ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ' ಅನೌನ್ಸ್

ಒಂದು ಯಶಸ್ವಿ ಸಿನಿಮಾದಲ್ಲಿ ನಟಿಸಿದ ನಂತರ ಇಡುವ ಪ್ರತಿ ಹೆಜ್ಜೆ, ತೆಗೆದುಕೊಳ್ಳುವ ನಿರ್ಧಾರಗಳು ಕಲಾವಿದರ ವೃತ್ತಿ ಬದುಕನ್ನು ರೂಪಿಸುತ್ತವೆ. ಈ ನಿಟ್ಟಿನಲ್ಲಿ ನೋಡೋದಾದರೆ ಬೃಂದಾರದ್ದು ಪ್ರೌಢ ನಡೆ ಎನ್ನಬಹುದು. ಏಕೆಂದರೆ, ಇವರು ನಟಿಸುವ ಪ್ರತಿ ಪಾತ್ರವೂ ಹೊಸತನದೊಂದಿಗೆ ಕೂಡಿದ್ದು ಪ್ರೇಕ್ಷಕರನ್ನು ಬೇಗ ತಲುಪುತ್ತಿವೆ. ಅದೇ ಮನಃಸ್ಥಿತಿಯಲ್ಲಿ ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದ ನಟಿ ನಾಲ್ಕನೇ ಚಿತ್ರಕ್ಕೂ ಸಹಿ ಮಾಡಿದ್ದಾರೆ. ಈ ಚಿತ್ರದಲ್ಲಿ ಸೋಶಿಯಲ್ ಮೀಡಿಯಾ ಇನ್​ಫ್ಲೂಯೆನ್ಸರ್ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಇದನ್ನೂ ಓದಿ: ದಿಗಂತ್​ಗೆ ಸುದೀಪ್​ ಸಪೋರ್ಟ್: 'ಎಡಗೈಯೇ ಅಪಘಾತಕ್ಕೆ ಕಾರಣ' ಟೀಸರ್ ರಿಲೀಸ್

ಹೆಸರಿಡದ ಈ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಜೀವ ತುಂಬಲು ಎಲ್ಲಾ ರೀತಿಯ ತಯಾರಿಗಳನ್ನೂ ಈಗಾಗಲೇ ಮಾಡಿಕೊಂಡಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಇರಲಿದೆ. ನಟಿಯ ನಾಲ್ಕನೇ ಸಿನಿಮಾದ ಮತ್ತಷ್ಟು ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.