'RRR'...ವಿಶೇಷ ಪರಿಚಯ ಬೇಕಿಲ್ಲ. ಭಾರತ ಮಾತ್ರವಲ್ಲದೇ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ ಸಿನಿಮಾ. ವಿಶ್ವದಾದ್ಯಂತ ಅನೇಕ ಗಣ್ಯರು ಈ ಸಿನಿಮಾ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿನಿ ಗಣ್ಯರು ಮಾತ್ರವಲ್ಲದೇ ಕ್ರೀಡಾಪಟುಗಳು, ರಾಜಕಾರಣಿಗಳೂ ಸೇರಿದಂತೆ ವಿಭಿನ್ನ ಕ್ಷೇತ್ರಗಳ ಗಣ್ಯರು ಆರ್ಆರ್ಆರ್ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
ಇದೀಗ ಬ್ರೇಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೋ ಲುಲಾ ಡಾ ಸಿಲ್ವಾ (Luiz Inácio Lula da Silva) ಸಿನಿಮಾ ಕುರಿತು ಮಾತನಾಡಿದ್ದಾರೆ. ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಂಭೆಯಲ್ಲಿ ಭಾಗಿಯಾಗಿರುವ ಬ್ರೆಜಿಲ್ ಅಧ್ಯಕ್ಷರು ಆರ್ಆರ್ಆರ್ ವಿಷಯ ಪ್ರಸ್ತಾಪಿಸಿದ್ದಾರೆ. ಇದು ನನ್ನ ಮೆಚ್ಚಿನ ಭಾರತೀಯ ಸಿನಿಮಾ. ಚಿತ್ರ ಅದ್ಭುತವಾಗಿದೆ ಎಂದು ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.
-
Thank you President of Brezil, @LulaOfficial for your kind words on #RRRMovie.
— RRR Movie (@RRRMovie) September 10, 2023 " class="align-text-top noRightClick twitterSection" data="
Our entire team is elated with your applause ❤️. pic.twitter.com/dDpMRtZf23
">Thank you President of Brezil, @LulaOfficial for your kind words on #RRRMovie.
— RRR Movie (@RRRMovie) September 10, 2023
Our entire team is elated with your applause ❤️. pic.twitter.com/dDpMRtZf23Thank you President of Brezil, @LulaOfficial for your kind words on #RRRMovie.
— RRR Movie (@RRRMovie) September 10, 2023
Our entire team is elated with your applause ❤️. pic.twitter.com/dDpMRtZf23
''ನನಗೆ ಆರ್ಆರ್ಆರ್ ಸಿನಿಮಾ ಬಹಳ ಇಷ್ಟವಾಯಿತು. ಇದು 3 ಗಂಟೆಯ ವಿಶಿಷ್ಟ ಸಿನಿಮಾ. ಸಿನಿಮಾದಲ್ಲಿ ಮನರಂಜನೆ, ಸಾಹಸ ಸನ್ನಿವೇಶಗಳು, ಡ್ಯಾನ್ಸ್ ಎಲ್ಲವೂ ಬಹಳ ಚೆನ್ನಾಗಿದೆ. ಭಾರತದ ಮೇಲಿನ ಬ್ರಿಟಿಷರ ಪ್ರಾಬಲ್ಯವನ್ನು ಅರ್ಥಪೂರ್ಣವಾಗಿ ತೋರಿಸಲಾಗಿದೆ. ಸಿನಿಮಾ ವೀಕ್ಷಿಸಿದ ಬಳಿಕ ನಾನು ಯಾರೊಂದಿಗಾದರು ಮಾತನಾಡುವ ವೇಳೆ, ನಾನು ಮೊದಲು ಕೇಳುವ ಪ್ರಶ್ನೆ 'ನೀವು ಆರ್ಆರ್ಆರ್ ಸಿನಿಮಾ ವೀಕ್ಷಿಸಿದ್ದೀರಾ?'. ಈ ಸಿನಿಮಾವನ್ನು ನಿಜವಾಗಿಯೂ ಎಂಜಾಯ್ ಮಾಡಿದ್ದೇನೆ. ಚಿತ್ರತಂಡಕ್ಕೆ ಧನ್ಯವಾದಗಳು'' ಎಂದು ತಿಳಿಸಿದರು.
ಬ್ರೆಜಿಲ್ ಅಧ್ಯಕ್ಷ ವಿಡಿಯೋವನ್ನು ಆರ್ಆರ್ಆರ್ ನಿರ್ದೇಶಕ ರಾಜಮೌಳಿ ಅವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ X (ಹಿಂದಿನ ಟ್ವಿಟರ್) ನಲ್ಲಿ ಶೇರ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. ''ಬಹಳ ಧನ್ಯವಾದಗಳು. ನೀವು ಭಾರತೀಯ ಸಿನಿಮಾವನ್ನು ಉಲ್ಲೇಖಿಸಿದ್ದೀರಿ, ಆರ್ಆರ್ಆರ್ ಅನ್ನು ಆನಂದಿಸಿದ್ದೀರಿ ಎಂಬುದನ್ನು ತಿಳಿದು ಬಹಳ ಖುಷಿಯಾಯಿತು. ನಮ್ಮ ಚಿತ್ರತಂಡ ಭಾವಪರವಶವಾಗಿದೆ. ನಮ್ಮ ದೇಶದಲ್ಲಿ ನೀವು ಉತ್ತಮ ಸಮಯ ಹೊಂದಿದ್ದೀರೆಂದು ಭಾವಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ. ಆರ್ಆರ್ಆರ್ ಅಧಿಕೃತ ಟ್ವಿಟರ್ ಖಾತೆ ಕೂಡ ಈ ಟ್ವೀಟ್ ಹಂಚಿಕೊಂಡು, ಧನ್ಯವಾದ ತಿಳಿಸಿದೆ. ನಿಮ್ಮ ಮಾತುಗಳಿಂದ ನಮ್ಮ ಇಡೀ ತಂಡ ಸಂತಸಗೊಂಡಿದೆ ಎಂದು ಹೇಳಿದೆ.
-
Sir… @LulaOficial 🙏🏻🙏🏻🙏🏻
— rajamouli ss (@ssrajamouli) September 10, 2023 " class="align-text-top noRightClick twitterSection" data="
Thank you so much for your kind words. It’s heartwarming to learn that you mentioned Indian Cinema and enjoyed RRR!! Our team is ecstatic. Hope you are having a great time in our country. https://t.co/ihvMjiMpXo
">Sir… @LulaOficial 🙏🏻🙏🏻🙏🏻
— rajamouli ss (@ssrajamouli) September 10, 2023
Thank you so much for your kind words. It’s heartwarming to learn that you mentioned Indian Cinema and enjoyed RRR!! Our team is ecstatic. Hope you are having a great time in our country. https://t.co/ihvMjiMpXoSir… @LulaOficial 🙏🏻🙏🏻🙏🏻
— rajamouli ss (@ssrajamouli) September 10, 2023
Thank you so much for your kind words. It’s heartwarming to learn that you mentioned Indian Cinema and enjoyed RRR!! Our team is ecstatic. Hope you are having a great time in our country. https://t.co/ihvMjiMpXo
ಆರ್ಆರ್ಆರ್: ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಕಾಲ್ಪನಿಕ ಕಥೆಯನ್ನು ಅದ್ಧೂರಿಯಾಗಿ ತೆರೆ ಮೇಲೆ ತಂದಿದ್ದಾರೆ. ಕೋಮುರಂ ಭೀಮನ ಪಾತ್ರದಲ್ಲಿ ಜೂನಿಯರ್ ಎನ್ಟಿಆರ್, ಅಲ್ಲೂರಿ ಸೀತಾರಾಮ ರಾಜುನಾಗಿ ರಾಮ್ ಚರಣ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಆಲಿಯಾ ಭಟ್, ಅಜಯ್ ದೇವ್ಗನ್ ನಟಿಸಿದ್ದಾರೆ.
ಇದನ್ನೂ ಓದಿ: Morocco earthquake: ನಿರಾಶ್ರಿತರ ನೋವಿಗೆ ಮಿಡಿದ ಪ್ರಧಾನಿ ಮೋದಿ.. ಪಿಎಂ ಟ್ವೀಟ್ಗೆ ನೋರಾ ಫತೇಹಿ ಧನ್ಯವಾದ
ಬಹುನಿರೀಕ್ಷೆಯೊಂದಿಗೆ 2022ರ ಮಾರ್ಚ್ 24ರಂದು ತೆರೆಕಂಡಿದ್ದ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು. ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಸಖತ್ ಸದ್ದು ಮಾಡಿತು. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1,000 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವ್ಯಾಪಾರ ಮೂಲಗಳು ತಿಳಿಸಿವೆ. ಸೂಪರ್ ಹಿಟ್ ನಾಟು ನಾಟು ಹಾಡು ವಿಶ್ವ ಪ್ರತಿಷ್ಠಿತ ಆಸ್ಕರ್ ಅನ್ನು ಮುಡುಗೇರಿಸಿಕೊಂಡಿದೆ. ಅಲ್ಲದೇ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿ ಗೌರವಕ್ಕೆ ಸಿನಿಮಾ ಪಾತ್ರವಾಗಿದೆ.
ಇದನ್ನೂ ಓದಿ: 59ನೇ ವಯಸ್ಸಿನಲ್ಲೂ ಫಿಟ್ & ಫೈನ್, ಯುವಕರನ್ನು ನಾಚಿಸುವ ಚಾರ್ಮ್! ಬರ್ತ್‌ಡೇ ದಿನ ಹೊಸ ಸಿನಿಮಾ ಘೋಷಿಸಿದ ರಮೇಶ್ ಅರವಿಂದ್