ಶುಕ್ರವಾರ ರಾತ್ರಿ (ನಿನ್ನೆ, 31-3-2023) ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನ ಜಿಯೋ ವರ್ಲ್ಡ್ ಗಾರ್ಡನ್ಸ್‌ನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (ಎನ್ಎಂಎಸಿಸಿ) ಉದ್ಘಾಟನಾ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿದೆ. ಈ ಸಮಾರಂಭಕ್ಕೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದರು. ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕಾಗಿ ಅಮೆರಿಕದಿಂದ ಕುಟುಂಬ ಸಮೇತ ಆಗಮಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಜಿಯೋ ವರ್ಲ್ಡ್ ಗಾರ್ಡನ್ಸ್‌ನಲ್ಲಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ಕಲಾ ಹಾಗೂ ಮನರಂಜನಾ ಪ್ರಪಂಚದ ಗಣ್ಯಾತಿಗಣ್ಯರು ಜಮಾಯಿಸಿದ್ದರು. ಅತ್ಯದ್ಭುತ ವೇಷಭೂಷಣದಲ್ಲಿ ನಟ ನಟಿಯರು ಕಂಗೊಳಿಸಿದ್ದು, ಕಾರ್ಯಕ್ರಮದ ಚಿತ್ತಾರಗಳು ವರ್ಚುವಲ್ ವೇದಿಕೆಯಲ್ಲಿ ಸದ್ದು ಮಾಡುತ್ತಿದೆ.
- " class="align-text-top noRightClick twitterSection" data="
">
ಈ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರು ತಮ್ಮ ಪುತ್ರಿ ಜಾನ್ವಿ ಕಪೂರ್ ಅವರ ವದಂತಿಯ ಗೆಳೆಯ ಶಿಖರ್ ಪಹಾರಿಯಾ ಅವರೊಂದಿಗೆ ಆಗಮಿಸಿದರು. ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಸಹ ಈವೆಂಟ್‌ನಲ್ಲಿ ಭಾಗಿಯಾಗಿದ್ದು, ತಂದೆ ಮತ್ತು ಗೆಳೆಯನೊಂದಿಗೆ ಕಾಣಿಸಿಕೊಂಡಿಲ್ಲ. ಶಿಖರ್ ಪಹಾರಿಯಾ ಮತ್ತು ಬೋನಿ ಕಪೂರ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಬಿಳಿ ಬಣ್ಣದ ಉಡುಪಿನಲ್ಲಿ ಬಾಲಿವುಡ್ ಬ್ಯೂಟಿ ಕಂಗೊಳಿಸಿದ್ದು, ಚಿತ್ರಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಆನ್ಲೈನ್ನಲ್ಲಿ ಸದ್ದು ಮಾಡುತ್ತಿರುವ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭದ ವಿಡಿಯೋಗಳು, ಪೋಟೋಗಳಲ್ಲಿ ಬೋನಿ ಕಪೂರ್ ಮತ್ತು ಶಿಖರ್ ಪಹಾರಿಯಾ ಒಟ್ಟಿಗೆ ಆಗಮಿಸುತ್ತಿರುವುದನ್ನು ಕಾಣಬಹುದು. ಬೋನಿ ಕಪೂರ್ ಬೂದು ಬಣ್ಣದ ಸೂಟ್ ಧರಿಸಿ ಕಾಣಿಸಿಕೊಂಡಿದ್ದು, ಶಿಖರ್ ಅವರು ಹಸಿರು ಬಣ್ಣದ ವೆಲ್ವೆಟ್ ಸೂಟ್ ಅನ್ನು ಆಯ್ಕೆ ಮಾಡಿಕೊಂಡರು. ಅವರು ಬಿಳಿ ಶರ್ಟ್ ಮತ್ತು ಹೈ-ವೇಸ್ಟ್ ಗ್ರೇ ಪ್ಯಾಂಟ್, ಕೋಟ್ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಶಿಖರ್ ಮತ್ತು ಬೋನಿ ಒಟ್ಟಿಗೆ ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದರು.
- " class="align-text-top noRightClick twitterSection" data="
">
ಜಾನ್ವಿ ವದಂತಿ ಗೆಳೆಯ ಶಿಖರ್ ಅವರೊಂದಿಗೆ ಬೋನಿ ಕಪೂರ್ ಬಹಳ ಆರಾಮದಾಯಕವಾಗಿ ಕಾಣಿಸಿಕೊಂಡಿದ್ದಾರೆ. ಶಿಖರ್ ಜೊತೆ ಬೋನಿ ಅವರು ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಕಳೆದ ತಿಂಗಳ ಆರಂಭದಲ್ಲಿ, ಬೋನಿ ಮತ್ತು ಶಿಖರ್ ಅವರು ಜಾನ್ವಿ ಅವರ ಜನ್ಮದಿನವನ್ನು ಆಚರಿಸುವ ಸಲುವಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಮೇಕಪ್ ಇಲ್ಲದೇ ನಟಿಸುವುದರಿಂದ ಪ್ರೇಕ್ಷಕರು ನನ್ನನ್ನು ಇಷ್ಟಪಡುತ್ತಾರೆ : ಸಾಯಿ ಪಲ್ಲವಿ
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಹಿಂದಿ ಚಿತ್ರನಟಿ ಜಾನ್ವಿ ಕಪೂರ್ ಈ ಈವೆಂಟ್ಗೆ ಭಾಗಿಯಾಗಲು ಬಾಲಿವುಡ್ನ ಖ್ಯಾತ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರು ಡಿಸೈನ್ ಮಾಡಿರುವ ಸ್ಟೈಲಿಶ್ ಲೆಹೆಂಗಾವನ್ನು ಆಯ್ದುಕೊಂಡರು. ತಮ್ಮ ಇನ್ಸ್ಟಾ ಪೇಜ್ನಲ್ಲಿ ಅವರ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಲೆಹೆಂಗಾವನ್ನು ಮುತ್ತುಗಳಲ್ಲಿ ಅಲಂಕರಿಸಲಾಗಿದೆ. ಮುತ್ತಿನ ಚೋಕರ್ ಅವರ ಅಂದವನ್ನು ಹೆಚ್ಚಿಸಿತ್ತು. ಸೌಂದರ್ಯ ಪ್ರದರ್ಶನದಲ್ಲಿ ಹೆಸರುವಾಸಿಯಾಗಿರುವ ಇವರು ಎಂದಿನಂತೆ ಅಭಿಮಾನಿಗಳ ಮೆಚ್ಚುಗೆಗಳನ್ನು ಸ್ವೀಕರಿಸಿದ್ದಾರೆ.
ಇದನ್ನೂ ಓದಿ: 'ಕಂಗನಾರನ್ನು ಕರೆಯಿರಿ': ಪ್ರಿಯಾಂಕಾ- ಕರಣ್ ಭೇಟಿ ಬಗ್ಗೆ ನೆಟ್ಟಿಗರ ಆಹ್ವಾನ
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ. ನಟಿ ಜಾನ್ವಿ ಕಪೂರ್ ಮತ್ತು ಶಿಖರ್ ಪ್ರೇಮಿಗಳೆನ್ನುವ ವದಂತಿ ಕೆಲ ಸಮಯದಿಂದಲೂ ಇದೆ. ಪ್ರೇಮಿಗಳೇ ಅಥವಾ ಸ್ನೇಹಿತರೇ ಎಂಬ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ. ಈ ಜೋಡಿ ಮಧ್ಯೆ ಅಂತರವಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ವದಂತಿಯ ಪ್ರೇಮಪಕ್ಷಿಗಳು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.