ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇದೀಗ ತಮಿಳು ಅಂಗಳಕ್ಕೆ ಕಾಲಿಟ್ಟಿದ್ದು, ಕೀರ್ತಿ ಸುರೇಶ್ ಜೊತೆ ಸಿನಿಮಾ ಮಾಡುವ ಕುರಿತು ಪೋಸ್ಟರ್ ರಿಲೀಸ್ ಮಾಡಿ ಘೋಷಿಸಿದೆ. ಪೋಸ್ಟರ್ ರಿಲೀಸ್ ಮಾಡಿ ಮಾತನಾಡಿದ ನಿರ್ಮಾಪಕ ವಿಜಯ್ ಕಿರಗಂದೂರು, ಒಬ್ಬ ಗಟ್ಟಿಮುಟ್ಟಾದ, ದೃಢ ನಿಲುವು ಹೊಂದಿರುವ ಮಹಿಳೆಯ ಕಾಮಿಡಿ ಡ್ರಾಮಾ ಈ 'ರಘು ತಥಾ' ಸಿನಿಮಾ ಎಂದು ಹೇಳಿದ್ದಾರೆ.
- " class="align-text-top noRightClick twitterSection" data="
">
ಹಿಂದಿನ ಕಾಲದಿಂದ ಬಂದ ರೂಢಿಗಳನ್ನು ಪ್ರಶ್ನಿಸಿ, ತನ್ನ ತತ್ವಗಳನ್ನು ಎತ್ತಿಹಿಡಿಯುವ ಮತ್ತು ಅವುಗಳಿಗಾಗಿ ಹೋರಾಡುವ ಮೂಲಕ ಎಲ್ಲರಿಗೂ ಮಾದರಿಯಾಗುವ ದಿಟ್ಟ ಮಹಿಳೆಯ ಕಥೆ ಇದು. ತಾನು ಮಾಡುವ ಪ್ರಯೋಗಗಳ ಮೂಲಕವೇ ತಾನೇನೆಂಬುದನ್ನು ನಿರೂಪಿಸಿಕೊಳ್ಳುವ ನಾಯಕಿಯ ಕಥೆಯನ್ನು ಹಾಸ್ಯಮಯವಾಗಿ ಚಿತ್ರಿಸಲಾಗಿದೆ. ಈ ಸಿನಿಮಾ ಖಂಡಿತವಾಗಿಯೂ ಮನೆಮಂದಿಯನ್ನೆಲ್ಲಾ ನಗುವಿನ ಕಡಲಲ್ಲಿ ತೇಲಿಸುತ್ತದೆ. ನಗಿಸುವುದು ಮಾತ್ರವಲ್ಲ, ಎಲ್ಲರನ್ನೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ ಎಂದು ತಿಳಿಸಿದರು.
ತಮ್ಮಲ್ಲಿರುವ ಬಹುಮುಖ ಪ್ರತಿಭೆಯಿಂದಾಗಿ ಚಿತ್ರದ ನಾಯಕಿ ಪಾತ್ರಕ್ಕೆ ಕೀರ್ತಿ ಸುರೇಶ್ ಅವರೇ ಸರಿಯಾದ ಆಯ್ಕೆ. ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅವರು ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿ ಇದೆ ಎಂದಿದ್ದಾರೆ.
ಕಾಂತಾರ ಸಿನಿಮಾ ಹಿಟ್ ಖುಷಿಯಲ್ಲಿರುವ ಹೊಂಬಾಳೆ ಫಿಲ್ಮ್ಸ್ ನಿನ್ನೆಯಷ್ಟೇ ಕೀರ್ತಿ ಸುರೇಶ್ ಅವರ ಜೊತೆ ಸಿನಿಮಾ ಘೋಷಿಸಿದ್ದು, ಇದೀಗ ಕಾಲಿವುಡ್ಗೆ ಕಾಲಿಟ್ಟಿದೆ. ಇದು ಮಹಿಳಾ ಕೇಂದ್ರಿತ ಕಥೆಯಾಗಿದ್ದು, ಸಹಾನುಭೂತಿಯಾಗಿರುವ ಮಹಿಳೆ ಅಗತ್ಯವಿದ್ದಾಗ ಬಲಶಾಲಿ, ದೃಢ ನಿರ್ಧಾರ ಕೈಗೊಳ್ಳಬಲ್ಲ ಮಹಿಳೆಯ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ.
ತನ್ನ ಜನರು ಹಾಗೂ ಭೂಮಿಯ ಗುರುತನ್ನು ಉಳಿಸಿಕೊಳ್ಳಲು ಹಲವು ಸವಾಲುಗಳನ್ನು ಎದುರಿಸುವಾಗ ತನ್ನನ್ನು ತಾನು ಕಂಡುಕೊಳ್ಳುವ ತಮಾಷೆಯ ಕಥಾಹಂದರ ಸಿನಿಮಾದಲ್ಲಿದೆ. ಪ್ರಶಸ್ತಿ ವಿಜೇತ ' ದಿ ಫ್ಯಾಮಿಲಿ ಮ್ಯಾನ್' ವೆಬ್ ಸಿರೀಸ್ ಬರಹಗಾರ ಸುಮನ್ ಕುಮಾರ್ ಅವರು 'ರಘು ತಥಾ' ಕಥೆ ಬರೆದಿದ್ದು, ನಿರ್ದೇಶನವನ್ನೂ ಅವರೇ ಮಾಡಲಿದ್ದಾರೆ. ಬರಹಗಾರರಾಗಿದ್ದ ಸುಮನ್ ಕುಮಾರ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾವಾಗಿದ್ದು, ಈ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಸಿನಿಮಾವನ್ನು 2023 ರ ಬೇಸಿಗೆಗೆ ತೆರೆಗೆ ತರಲು ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ.
ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಹೊಸ ಚಿತ್ರದಲ್ಲಿ ಕೀರ್ತಿ ಸುರೇಶ್