ಲಾಸ್ ಏಂಜಲೀಸ್ (ಅಮೆರಿಕ): ಎಚ್‌ಬಿಒ ಟಿವಿಯಲ್ಲಿ ಪ್ರಸಾರವಾಗಲಿರುವ 'ದಿ ಐಡಲ್' ಸರಣಿನಲ್ಲಿ ದಕ್ಷಿಣ ಕೊರಿಯಾದ ಗಾಯಕಿ ಜೆನ್ನಿ ಕಿಮ್ ಕಾಣಿಸಿಕೊಳ್ಳಲಿದ್ದಾರೆ, ಕೆ-ಪಾಪ್ ಗರ್ಲ್ ಗ್ರೂಪ್ ಬ್ಲ್ಯಾಕ್‌ಪಿಂಕ್ ಸದಸ್ಯೆಯಾದ ಜೆನ್ನಿ ಈಗ 'ವೀಕೆಂಡ್' ಮತ್ತು 'ಲಿಲಿ-ರೋಸ್ ಡೆಪ್' ನೇತೃತ್ವದಲ್ಲಿ ಮೂಡಿ ಬರಲಿರುವ ಸೀರಿಸ್ಗೆ ಎಂಟ್ರಿ ಕೊಟ್ಟಿದ್ದಾರೆ.
ವೀಕೆಂಡ್ (ನಿಜವಾದ ಹೆಸರು ಅಬೆಲ್ ಟೆಸ್ಫೇಯ್), ಯುಫೋರಿಯಾ ಖ್ಯಾತಿಯ ಸ್ಯಾಮ್ ಲೆವಿನ್ಸನ್ ಮತ್ತು ರೆಜಾ ಫಾಹಿಮ್ ನಿರ್ಮಿಸಿರುವ 'ದಿ ಐಡಲ್' ಸರಣಿ ಕಾರ್ಯಕ್ರಮದ ಬಿಡುಗಡೆಯ ದಿನಾಂಕ ಪ್ರಕಟಿಸಲಾಗಿಲ್ಲ. ಆದರೆ, ಎಚ್‌ಬಿಒ ಟಿವಿ ತನ್ನ ಟ್ವಿಟರ್ ಖಾತೆಯಲ್ಲಿ ಜೆನ್ನಿ ಭಾಗವಹಿಸುವಿಕೆ ಖಚಿತಪಡಿಸಿದೆ. ಇನ್ನು, ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ನಲ್ಲೂ ಜೆನ್ನಿ ಕಾಣಿಸಿಕೊಂಡಿದ್ದರು. ಈಗ ಇದು ನಿಜವಾಗಿದೆ.
ಅಲ್ಲದೇ, ಈ ಬಗ್ಗೆ ಕೊರಿಯಾದ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಜೆನ್ನಿ, 'ದಿ ಐಡಲ್' ಸರಣಿ ಬಗ್ಗೆ ನಾನು ತುಂಬಾ ಉತ್ಸುಕಳಾಗಿದ್ದೇನೆ. ಸ್ಕ್ರಿಪ್ಟ್ ತುಂಬಾ ಆಸಕ್ತಿದಾಯಕವಾಗಿದೆ. ಆದ್ದರಿಂದ ನಾನು ಸರಣಿಯ ಭಾಗವಾಗಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಗ್ - ಬಿ ಅವರೊಂದಿಗೆ ರಶ್ಮಿಕಾ ನಟಿಸಿದ ಮೊದಲ ಬಾಲಿವುಡ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ