ETV Bharat / entertainment

ವಿಭಿನ್ನ ಕಥಾಹಂದರದ ಬಿಸಿಬಿಸಿ Ice Cream ಟ್ರೈಲರ್ ಬಿಡುಗಡೆ - Bisi Bisi Ice Cream Movie

ಅರವಿಂದ್ ಐಯ್ಯರ್, ಸಿರಿ ರವಿಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಬಿಸಿ - ಬಿಸಿ Ice-Cream' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿ ರಸಿಕರ ಗಮನ ಸೆಳೆಯುತ್ತಿದೆ.

ಬಿಸಿಬಿಸಿ Ice Cream
ಬಿಸಿಬಿಸಿ Ice Cream
author img

By ETV Bharat Karnataka Team

Published : Jan 12, 2024, 7:19 PM IST

'ಕಹಿ' (2016) ಮತ್ತು 'ಅಳಿದು ಉಳಿದವರು' (2019) ನಿರ್ದೇಶನಕ್ಕೆ ಹೆಸರುವಾಸಿಯಾದ ಅರವಿಂದ್ ಶಾಸ್ತ್ರಿ, ಆರು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್​ವುಡ್​ ಆಗಮಿಸಿದ್ದಾರೆ. ವಿಭಿನ್ನ ಕಥಾ ಹಂದರವುಳ್ಳ 'ಬಿಸಿ-ಬಿಸಿ Ice-Cream' ಚಿತ್ರದ ಮೂಲಕ ಅವರು ಮತ್ತೆ ಕಮ್​ ಬ್ಯಾಕ್​ ಮಾಡಿದ್ದು, ಗಾಂಧಿ ನಗರ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದೆ. ಈ ವಿಭಿನ್ನ ಟೈಟಲ್​ನ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರತಂಡ ತಮ್ಮ ಪಾತ್ರದ ಬಗ್ಗೆ ಹಂಚಿಕೊಂಡರು. ನಟ ಅರವಿಂದ್ ಐಯ್ಯರ್ ಕ್ಯಾಬ್ ಡ್ರೈವರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಸಿರಿ ರವಿಕುಮಾರ್ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರ ತಂಡ
ಚಿತ್ರ ತಂಡ

ನಿರ್ದೇಶಕ ಅರವಿಂದ್ ಶಾಸ್ತ್ರೀ ಮಾತನಾಡಿ, ಕ್ಯಾಬ್ ಡ್ರೈವರ್ ವೃತ್ತಿ ಬಗ್ಗೆ ನಾವು ಹೇಳಲು ಹೊರಟಿಲ್ಲ. ಆ ವ್ಯಕ್ತಿಯ ಕಥೆಯನ್ನು ನಾವು ಸಿನಿಮಾದಲ್ಲಿ ಹೇಳಲು ಹೊರಟಿದ್ದೇವೆ. ಶೂಟಿಂಗ್ ಕಳೆದ ವರ್ಷ ಮುಗಿಸಿದ್ದೇವೆ. ಒಬ್ಬ ಒಂಟಿ ಕ್ಯಾಬ್ ಡ್ರೈವರ್ ಲೈಫ್​​ನಲ್ಲಿ ಮಿಸ್ಟಿರಿಯಸ್ ಹುಡುಗಿ ಬಂದಾಗ ಅಡ್ವೆಂಚರ್ಸ್, ಮಿಸ್ ಅಡ್ವೆಂಚರ್ಸ್ ಆಗುತ್ತದೆ ಅನ್ನೋದು ಈ ಸಿನಿಮಾ ಕಥೆ. ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದೆ. ಮಾರ್ಚ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತೇವೆ ಎಂದರು.

ನಟ ಅರವಿಂದ್ ಐಯ್ಯರ್ ಮಾತನಾಡಿ, ನನ್ನದು ವಿಭಿನ್ನ ಪಾತ್ರ. ಈ ಪಾತ್ರಕ್ಕಾಗಿ ವರ್ಕೌಟ್ ಬಿಟ್ಟಿದ್ದೇನೆ. ಪರ್ಫಾಮ್ ಮಾಡಲು ಒಳ್ಳೆಯ ಸ್ಪೇಸ್ ಸಿಕ್ಕಿದೆ. ಆ್ಯಕ್ಟಿಂಗ್ ಮಾಡಬೇಕು. ಪರ್ಫಾಮ್ ಮಾಡಬೇಕು ಎಂದು ಮಾಡಿದ್ದಲ್ಲ. ಪ್ರಿಪರೇಷನ್ ಚೆನ್ನಾಗಿತ್ತು. ಬಹಳ ಮಜಾ ಮಾಡಿಕೊಂಡು ಕೆಲಸ ಮಾಡಿದ್ದೇನೆ ಎಂದರು.

ನಾಯಕಿ ಸಿರಿ ರವಿಕುಮಾರ್ ಮಾತನಾಡಿ, ನಾನು ಅರವಿಂದ್ ಶಾಸ್ತ್ರೀ ಅವರ 'ಕಹಿ' ಸಿನಿಮಾ ಸಮಯದ ಬಗ್ಗೆ ಮಾತನಾಡಿದ್ದೆ. ನಾನು ಆಗ ರೆಡಿಯೋ ಮಿರ್ಚಿಯಲ್ಲಿದ್ದೆ. ಕೆಲಸದಲ್ಲಿ ಬ್ಯುಸಿ ಇದ್ದೇ. ಬಹಳ ವರ್ಷಗಳ ನಂತರ ಕಾಲ್ ಮಾಡಿದಾಗ ಖುಷಿಪಟ್ಟೆ. ಇವರ 'ಕಹಿ' ಮತ್ತು 'ಅಳಿದುಳಿದವರು ಸಿನಿಮಾ' ನನಗೆ ಇಷ್ಟ. ಕಾಮಿಡಿ, ಥ್ರಿಲ್ಲರ್, ಅಡ್ವೆಂಚರ್ ಎಲ್ಲವೂ ಕಥೆಯಲ್ಲಿ ಇದೆ. ಹಾಗಾಗಿ ಈ ಚಿತ್ರದಲ್ಲಿ ನಟಿಸಲು ಒಪ್ಪಿದೆ. ಶೂಟಿಂಗ್ ಸಮಯ ಸಖತ್ ಖುಷಿ ನೀಡಿತು ಎಂದು ಚಿತ್ರತಂಡದ ಬಗ್ಗೆ ಬಣ್ಣಿಸಿದರು.

ಚಿತ್ರ ತಂಡ
ಚಿತ್ರ ತಂಡ

ಕ್ಯಾಬ್ ಡ್ರೈವರ್ ಕಥೆ ಹೇಳುವ ಸಿನಿಮಾಗಳು ಈಗಾಗಲೇ ಬಂದಿವೆ. ಇದೊಂದು ವಿಭಿನ್ನ ಕಥೆ. ಅನಾರೋಗ್ಯದಲ್ಲಿರುವ ಕ್ಯಾಬ್ ಡ್ರೈವರ್‌ ಜೀವನದಲ್ಲಿ ನಿಗೂಢ ಮಹಿಳೆಯ ಆಗಮನ, ಅವಳು ಅವನ ದುಃಖಗಳಿಗೆ ಸ್ಪಂದಿಸುವ ದೃಶ್ಯಗಳ ಕಥಾ ಹಂದರವೇ ಈ 'ಬಿಸಿ-ಬಿಸಿ Ice-Cream'. ಸಣ್ಣ ಕಥೆಯ ಎಳೆಯೊಂದನ್ನು ಇಟ್ಟುಕೊಂಡು ಅರವಿಂದ್ ಶಾಸ್ತ್ರೀ ಈ ಸಿನಿಮಾ ಮಾಡಿದ್ದಾರೆ. ಕಥೆ ಬರೆದು ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಸಂಕಲನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಚಿತ್ರ ತಂಡ
ಚಿತ್ರ ತಂಡ

ಡಾರ್ಕ್ ಕಾಮಿಡಿ ರೋಮ್ಯಾನ್ಸ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅರವಿಂದ್ ಐಯ್ಯರ್, ಸಿರಿ ರವಿಕುಮಾರ್, ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ, ಎನೋಷ್ ಒಲಿವೇರಾ ಛಾಯಾಗ್ರಹಣ ಇದೆ. ಬೋಯಿಲ್ಡ್ ಬೀನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿ ಅಕ್ಷರ ಭಾರಧ್ವಾಜ್ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಶುರು ಮಾಡಿರುವ ಚಿತ್ರತಂಡ, ಮಾರ್ಚ್ ತಿಂಗಳಲ್ಲಿ ತೆರೆಗೆ ತರಲು ಸಜ್ಜಾಗಿದೆ.

  • " class="align-text-top noRightClick twitterSection" data="">

ಇದನ್ನೂ ಓದಿ: ನಟ ನಿಶ್ ತೇಜಶ್ವರ್​ಗೆ 'ಆರಾಮ್ ಅರವಿಂದ ಸ್ವಾಮಿ' ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.