ಮುಂಬೈ: ಬಾಲಿವುಡ್ ನಟ ಇಮ್ರಾನ್ ಖಾನ್ಗೆ ಇಂದು ಜನ್ಮದಿನದ ಸಂಭ್ರಮ. 'ಜಾನೇ ತು ಯಾ ಜಾನೇ ನಾ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ನಟ ಮೊದಲ ಚಿತ್ರದಲ್ಲೇ ಛಾಪು ಮೂಡಿಸಿದರು. ಯುವ ವಯೋಮಾನದ ಪ್ರೀತಿ ಕಥನಹೊಂದಿದ್ದ ಈ ಚಿತ್ರದಲ್ಲಿ ಲವರ್ ಬಾಯ್ ಪಾತ್ರದಲ್ಲಿ ಇಮ್ರಾನ್ ಖಾನ್ ಮಿಂಚಿದ್ದರು. ಅನೇಕ ಹಿಟ್ ಚಿತ್ರಗಳನ್ನು ನೀಡಿದ ನಂತರೂ ನಟ ಇಮ್ರಾನ್ ಖಾನ್ ಚಿತ್ರೋದ್ಯಮದಿಂದ ದೂರ ಉಳಿದರು. ಆದರೆ, ತಮ್ಮ ವೈಯಕ್ತಿಕ ಜೀವನದ ಮೂಲಕ ಸದಾ ಸುದ್ದಿಯಲ್ಲಿದ್ದಾರೆ ಈ ನಟ. ಮಾಧ್ಯಮದ ವರದಿ ಅನುಸಾರ, ಅವರ ಹೆಂಡತಿ ಅವಂತಿಕಾ ಜೊತೆ ಕಡೆಗೂ ದೂರಾಗಿದ್ದಾರೆ.
- " class="align-text-top noRightClick twitterSection" data="
">
1983ರಲ್ಲಿ ಅಮೆರಿಕದ ಮಡಿಸೊನ್ನಲ್ಲಿ ಇಮ್ರಾನ್ ಖಾನ್ ಜನಿಸಿದರು. ಅನಿಲ್ ಪಾಲ್ ಮತ್ತು ನುಸಹತ್ ಖಾನ್ ಇವರ ಪೋಷಕರು. ಇಮ್ರಾನ್ ತಂದೆ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರೆ, ತಾಯಿ ಸೈಕಾಲಾಜಿಸ್ಟ್ ಆಗಿದ್ದಾರೆ. ಇಮ್ರಾನ್ಗೆ ಒಂದೂವರೆ ವರ್ಷವಿದ್ದಾಗ ಇವರ ಪೋಷಕರು ವಿಚ್ಛೇದನ ಪಡೆದರು. ತಾಯಿ ಜೊತೆ ಇಮ್ರಾನ್ ಖಾನ್ ಮುಂಬೈಗೆ ಬಂದಿಳಿದರು. ಇಮ್ರಾನ್ ಕುಟುಂಬ ಬಾಲಿವುಡ್ನೊಂದಿಗೆ ನಂಟು ಹೊಂದಿತ್ತು. ಇಮ್ರಾನ್ ಅಜ್ಜ ನಾಸೀರ್ ಹುಸೇನ್ ಚಿತ್ರ ನಿರ್ದೇಶಕರಾದರೆ ಅವರ ಚಿಕ್ಕಪ್ಪ ಮನ್ಸೂರ್ ನಿರ್ದೇಶಕರು- ನಿರ್ಮಾಪಕರಾಗಿದ್ದರು. ಇನ್ನು ನಟ ಅಮಿರ್ ಖಾನ್ ಕೂಡ ಅವರ ಚಿಕ್ಕಪ್ಪ ಆಗಿದ್ದಾರೆ.
ಇಮ್ರಾನ್ ಬಾಂಬೆ ಸ್ಕೊಟಿಶ್ ಸ್ಕೂಲ್ನಲ್ಲಿ ಕಲಿತಿದ್ದು, ಕೂನೂರ್ನ ಬ್ಲೂ ಮೌಟೆನ್ನಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದಾರೆ. ನ್ಯೂಯಾರ್ಕ್ನ ಫಿಲ್ಮ್ ಅಕಾಡೆಮಿಯಲ್ಲಿ ಪದವಿ ಪಡೆದಿದ್ದು, ಮುಂಬೈ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದಿದ್ದಾರೆ.
ಇಮ್ರಾನ್ ಖಾನ್ ಸಂಬಂಧ: ಇಮ್ರಾನ್ ಖಾನ್ 19 ವರ್ಷವಿದ್ದಾಗ ಅವಂತಿಕ ಅವರನ್ನು ಮೊದಲ ಭೇಟಿಯಾಗಿದ್ದರು. ಇಮ್ರಾನ್ ಮತ್ತು ಅವಂತಿಕ ಹಲವು ವರ್ಷಗಳ ಕಾಲ ಡೇಟಿಂಗ್ ಶುರು ಮಾಡಿದ್ದರು. ಲಾಸ್ ಏಂಜಲಿಸ್ನಲ್ಲಿ ಒಟ್ಟಿಗೆ ಇದ್ದರು. 8 ವರ್ಷಗಳ ಕಾಲ ಡೇಟಿಂಗ್ ಮಾಡಿದ ಈ ಜೋಡಿ 2011ರಲ್ಲಿ ಮದುವೆಯಾದರು. ಇವರಿಬ್ಬರಿಗೆ ಮಲ್ಲಿಕ್ ಖಾನ್ ಎಂಬ ಹೆಣ್ಣು ಮಗಳಿದ್ದಾಳೆ. 2019ರಲ್ಲಿ ಇವರಿಬ್ಬರು ದೂರಾದರು. ದೂರಾಗಿ ಎರಡು ವರ್ಷವಾದರೂ ಇವರು ಅಧಿಕೃತವಾಗಿ ವಿಚ್ಛೇದನ ಪಡೆದಿರಲಿಲ್ಲ. ಮಾಧ್ಯಮದ ವರದಿ ಅನುಸಾರ ಇವರಿಬ್ಬರು ಇದೀಗ ಅಧಿಕೃತವಾಗಿ ದೂರಾಗಿದ್ದಾರೆ.
ಇಮ್ರಾನ್ ಖಾನ್ ವೃತ್ತಿ ಜೀವನ: ಬಾಲ್ಯದಲ್ಲೇ ಇಮ್ರಾನ್ ಬೆಳ್ಳಿತೆರೆ ಪದಾರ್ಪಣೆ ಮಾಡಿದ್ದರು. 'ಕಾಯಮತ್ ಸೇ ಕಾಯಮತ್ ತಕ್' ಚಿತ್ರದಲ್ಲಿ ಐದು ವರ್ಷವಿದ್ದಾಗಲೇ ನಟಿಸಿದ್ದರು, ಬಳಿಕ 'ಜೋ ಜೀತಾ ವಹೀ ಸಿಖಂದರ್'ನಲ್ಲೂ ಬಾಲ್ಯ ನಟನಾಗಿ ಗುರುತಿಸಿಕೊಂಡಿದ್ದರು. ಇದಾದ ಬಳಿಕ 2008ರಲ್ಲಿ 'ಜಾನೇ ತು ಯಾ ಜಾನೇ ನಾ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾದರು. ಬಳಿಕ 'ಮೇರೆ ಬ್ರದರ್ ಕೀ ದುಲ್ಹಾನ್' (2011), 'ಡೆಲ್ಲಿ ಬೆಲ್ಲಿ' (2011), 'ಲಕ್' (2009) 'ಎಕ್ ಮೇ ಔರ್ ಏಕ್ ತು' (2012), 'ಕಿಡ್ನಾಪ್' (2008) 'ಕಟ್ಟಿ ಬಟ್ಟಿ' (2015), 'ಐ ಹೇಟ್ ಲವ್ ಸ್ಟೋರಿ' (2010)ರಲ್ಲಿ ನಟಿಸಿದ್ದಾರೆ. 2015ರಲ್ಲಿ ತೆರೆಕಂಡ ಕಟ್ಟಿ ಬಟ್ಟಿ ಅವರ ಕಡೆಯ ಚಿತ್ರವಾಗಿದೆ. ಇದಾದ ಬಳಿಕ ಕಣ್ಮರೆಯಾಗಿದ್ದ ಅವರು 2022ರಲ್ಲಿ ಅಮಿರ್ ಖಾನ್ ಮಗಳ ಜೊತೆ ಫೋಟೋದಲ್ಲಿ ಕಂಡಿದ್ದರು.
ಚಿತ್ರದ್ಯೋಮ ತೊರೆದ ಇ್ರಮಾನ್: ಇಮ್ರಾನ್ ಖಾನ್ ಚಿತ್ರರಂಗವನ್ನು ಸಂಪೂರ್ಣವಾಗಿ ತೊರೆದಿದ್ದಾರೆ ಎಂದು ಅವರ ಗೆಳೆಯ ಅಕ್ಷಯ್ ಒಬೆರಾಯ್ ಸಂದರ್ಶನದಲ್ಲಿ ತಿಳಿಸಿದ್ದರು. ಆದರೆ, ಅವರು ಸಿನಿಮಾ ನಿರ್ದೇಶನದಲ್ಲಿ ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಬಹುಕೋಟಿ ಮೌಲ್ಯದ ಮನೆಯ ಒಡತಿಯಾದ 15 ವರ್ಷದ ನಟಿ ರುಹಾನಿಕಾ ಧವನ್