ETV Bharat / entertainment

ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬಾಲಿವುಡ್​ ಜೋಡಿ: ವಿಡಿಯೋ ಹಂಚಿಕೊಂಡ ಬಿಪಾಶಾ - ನಟಿ ಬಿಪಾಶಾ ಬಸು

ಬಾಲಿವುಡ್ ಜೋಡಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಏಪ್ರಿಲ್ 30 ರಂದು ಏಳನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.

bipasha basu wedding anniversary
ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬಾಲಿವುಡ್​ ಜೋಡಿ
author img

By

Published : May 1, 2023, 5:29 PM IST

ಬಿಪಾಶಾ ಬಸು ಹಾಗೂ ಕರಣ್​ ಸಿಂಗ್​ ಗ್ರೋವರ್​ ಬಾಲಿವುಡ್​ ಅಂಗಳದ ಅತ್ಯಂತ ಪ್ರೀತಿಪಾತ್ರ ಜೋಡಿ. ತಾರಾ ಜೋಡಿ ನಿನ್ನೆ ತಮ್ಮ ಏಳನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡರು. ಧೂಮ್​ 2 ಚಿತ್ರದಲ್ಲಿ ಓರ್ವ ನಾಯಕಿಯಾಗಿ ಅಭಿನಯಿಸಿದ್ದ ನಟಿ ಬಿಪಾಶಾ ಬಸು ಭಾನುವಾರ ರಾತ್ರಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಮ್ಮ ಮದುವೆ ವಾರ್ಷಿಕೋತ್ಸವದ ಸುಂದರ ವಿಡಿಯೋ ಹಂಚಿಕೊಂಡಿದ್ದಾರೆ.

ಈ ಜೋಡಿ ಯಾವಾಗಲೂ ಗಂಡ ಹೆಂಡತಿ ಸಂಬಂಧದ, ಅನ್ಯೋನ್ಯತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಡೇಟ್​ಗಳನ್ನು ನೀಡುತ್ತಲೇ ಇರುತ್ತಾರೆ. ಫೋಟೋಗಳು ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ, ತಮ್ಮ ಅಭಿಮಾನಿಗಳ ಜೊತೆ ಟಚ್​ ಅಲ್ಲಿ ಇರುತ್ತಾರೆ. ನಟಿ ಬಿಪಾಶಾ ಹಾಗೂ ನಟ ಕರಣ್​ ಸಿಂಗ್​ ಗ್ರೋವರ್​ 2015 ರಲ್ಲಿ ತೆರೆಕಂಡ ಅಲೋನ್​ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಅಲೋನ್​ ಸಿನಿಮಾದ ಸೆಟ್​ನಿಂದಲೇ ಆತ್ಮೀಯವಾಗಿದ್ದ ಇಬ್ಬರು ಅಲ್ಲಿಂದಲೇ ಪ್ರೀತಿಸಲು ಆರಂಭಿಸಿದ್ದರು. 2016 ಏಪ್ರಿಲ್​ 30 ರಂದು ಈ ಸ್ಟಾರ್​ ಕಪಲ್​ ಹಸೆಮಣೆ ಏರಿದ್ದರು. ಮದುವೆಯಾದ ಆರು ವರ್ಷಗಳ ಬಳಿಕ 2022 ರ ನವೆಂಬರ್​ನಲ್ಲಿ ಇವರು ತಮ್ಮ ಮೊದಲ ಮಗುವನ್ನು ಆಹ್ವಾನಿಸಿದ್ದರು. ಹೆಣ್ಣು ಮಗುವನ್ನು ಮನೆ ತುಂಬಿಸಿಕೊಂಡಿದ್ದರು.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವನ್ನು ಹಂಚಿಕೊಂಡಿರುವ ಬಿಪಾಶಾ, "ನಾವು ಗಂಡ-ಹೆಂಡತಿಯಾಗಿ ಸುಂದರವಾದ 7 ವರ್ಷಗಳು ಪೂರೈಸಿದೆವು. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿಯೇ #monkeylove #monkeyversary #brunch #settemara #stregismumbai #mybestfriend" ಎಂದು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ, ಬಿಪಾಶಾ ಮತ್ತು ಕರಣ್ ಕ್ಯಾಶುಯಲ್ ಕಪ್ಪು ಬಟ್ಟೆಗಳಲ್ಲಿ ಜೊತೆಯಾಗಿರುವುದನ್ನು ಕಾಣಬಹುದು. ವಿಡಿಯೊದ ಆರಂಭದಲ್ಲಿ ದಂಪತಿ ನೃತ್ಯ ಮಾಡುವುದನ್ನು ಕಾಣಬಹುದು ಮತ್ತು ನಂತರ ಅವರ ಮದುವೆ ವಾರ್ಷಿಕೋತ್ಸವದ ಕೇಕ್ ಕತ್ತರಿಸುವುದು. ಬಾಯಲ್ಲಿ ನೀರೂರಿಸುವ ಮ್ಯಾಂಗೋ ಕೇಕ್​ ಅನ್ನು ಒಬ್ಬರಿಗೊಬ್ಬರು ತಿನ್ನಿಸುವುದೂ ಬಹಳ ಸುಂದರವಾಗಿ ಕಂಡುಬಂದಿದೆ.

ಬಿಪಾಶಾ ಬಸು ಮದುವೆ ವಾರ್ಷಿಕೋತ್ಸವದ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ, ಅಭಿಮಾನಿಗಳು ಮುಗಿಬಿದ್ದು, ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವಿಡಿಯೋ ಶೇರ್ ಆದ ತಕ್ಷಣ ಅಭಿಮಾನಿಗಳು ಕಾಮೆಂಟ್ ವಿಭಾಗಕ್ಕೆ ಬಂದು ದಂಪತಿಗೆ ಶುಭ ಕೋರಿದ್ದಾರೆ. ಅಭಿಮಾನಿಯೊಬ್ಬರು "ಅತ್ಯಂತ ಸುಂದರವಾದ ದಂಪತಿಗೆ ವಾರ್ಷಿಕೋತ್ಸವದ ಶುಭಾಶಯಗಳು" ಎಂದೂ, ಮತ್ತೊಬ್ಬರು, "ಹ್ಯಾಪಿ ಆನಿವರ್ಸರಿ ಬಿಪಾಶಾ ಮೇಮ್ ಮತ್ತು ಕರಣ್ ಸರ್ @iamksgofficial @bipashabasu." ಮತ್ತೊಬ್ಬ ಅಭಿಮಾನಿ "ವಾರ್ಷಿಕೋತ್ಸವದ ಶುಭಾಶಯಗಳು ಯಾವಾಗಲೂ ಆಶೀರ್ವಾದ ನಿಮ್ಮ ಮೇಲಿರಲಿ ಮತ್ತು ಸಂತೋಷವಾಗಿರಿ" ಎಂದು ಕಾಮೆಂಟ್​ ಮಾಡಿದ್ದಾರೆ. ಜೊತೆಗೆ ಪ್ರೀತಿ ತುಂಬಿದ ಇಮೋಜಿಗಳನ್ನು ತುಂಬಿ ಕಾಮೆಂಟ್​ ಮಾಡಿದ್ದಾರೆ.

ಕರಣ್ ಸಿಂಗ್ ಗ್ರೋವರ್, ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಅಭಿನಯದ ಸಿದ್ಧಾರ್ಥ್ ಆನಂದ್ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ಚಲನಚಿತ್ರ ಫೈಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಕರಣ್ ತಮ್ಮ ಭಾಗದ ಚಿತ್ರೀಕರಣಕ್ಕಾಗಿ ಅಸ್ಸಾಂಗೆ ಹೋಗಿದ್ದು ಸುದ್ದಿಯಾಗಿತ್ತು. ಚಿತ್ರವು 2024 ಜನವರಿಯಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಇದನ್ನೂ ಓದಿ: ಸಿಂಧೂ ನಾಗರೀಕತೆ ಕುರಿತು ಸಿನಿಮಾ ಮಾಡುವಂತೆ ರಾಜಮೌಳಿಗೆ ಆನಂದ್​ ಮಹೀಂದ್ರಾ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.