ETV Bharat / entertainment

ಅಪ್ಪನ ಜೊತೆ ಮಗಳ ಲಾಂಗ್​ ಡ್ರೈವ್​: ವಿಡಿಯೋ ಹಂಚಿಕೊಂಡ ನಟಿ ಬಿಪಾಶಾ ಬಸು - ಈಟಿವಿ ಭಾರತ ಕನ್ನಡ

ನಟ ಕರಣ್​ ಸಿಂಗ್​ ಗ್ರೋವರ್​ ಕಾರ್​ ಡ್ರೈವ್​ ಮಾಡುತ್ತಿದ್ದು, ಮಗಳು ದೇವಿ ಅಪ್ಪನ ಮಡಿಲಲ್ಲಿ ಕೂತು ಪ್ರಪಂಚ ನೋಡುತ್ತಿದ್ದಾಳೆ.

Daughter's long drive with father
ಅಪ್ಪನ ಜೊತೆ ಮಗಳ ಲಾಂಗ್​ ಡ್ರೈವ್
author img

By

Published : May 29, 2023, 8:06 PM IST

ಅಪ್ಪನ ಜೊತೆ ಮಗಳ ಲಾಂಗ್​ ಡ್ರೈವ್​

ಬಾಲಿವುಡ್​ ನಟಿ ಬಿಪಾಶಾ ಬಸು ಅವರು ಸೋಷಿಯಲ್​ ಮೀಡಿಯಾಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ತಮ್ಮ ಪತಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರ ಜೊತೆಗೆ ಆಗಾಗ್ಗೆ ತಮ್ಮ ಮಗಳು ದೇವಿ ಬಸು ಸಿಂಗ್ ಗ್ರೋವರ್ ಅವರ ಮುದ್ದಾದ ಚಿತ್ರಗಳು ಮತ್ತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಸೋಮವಾರ, ನಟ ತನ್ನ ಮಗಳು ತಂದೆ ಕರಣ್ ಸಿಂಗ್ ಗ್ರೋವರ್ ಜೊತೆ ಕಾರ್ ರೈಡ್ ಅನ್ನು ಆನಂದಿಸುತ್ತಿರುವ ವಿಡಿಯೋವನ್ನು ನಟಿ ಬಿಪಾಶು ಹಂಚಿಕೊಂಡಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿಕೊಂಡಿರುವ ನಟಿ ಬಿಪಾಶಾ ಬಸು, ಅದಕ್ಕೆ "ದೇವಿ ಮತ್ತು ಪಾಪಾ" ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ. ವಿಡಿಯೋದಲ್ಲಿ, ಹೇಟ್ ಸ್ಟೋರಿ 3 ನಟ ಮಗಳು ದೇವಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಕಾರಿನ ಹೊರಗಿನ ನೋಟವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಬಿಪಾಶಾ ಅವರ ಮಗಳು ಮುದ್ದಾದ ಗುಲಾಬಿ ಬಣ್ಣದ ಉಡುಪು ಧರಿಸಿದ್ದು, ಅದರ ಮೇಲೆ ಕೆಂಪು ಹಾರ್ಟ್​ ಚಿತ್ರಗಳಿರುವುದನ್ನು ಕಾಣಬಹುದು.

ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮದುವೆಯಾದ ಆರು ವರ್ಷಗಳ ನಂತರ ಕಳೆದ ವರ್ಷ ನವೆಂಬರ್ 12 ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಬಿಪಾಶಾ ತಮ್ಮ ಮಗಳ ಹೆಸರನ್ನು ಪ್ರಕಟಿಸಿದ ಪೋಸ್ಟ್ ಅನ್ನು ಕೂಡ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, "12.11.2022. ದೇವಿ ಬಸು ಸಿಂಗ್ ಗ್ರೋವರ್. ನಮ್ಮ ಪ್ರೀತಿಯ ಭೌತಿಕ ಅಭಿವ್ಯಕ್ತಿ ಮತ್ತು ಅಮ್ಮನ ಆಶೀರ್ವಾದ ಈಗ ಇಲ್ಲಿದೆ ಮತ್ತು ಅವಳು ದೈವಿಕಳು." ಎಂದು ಬರೆಯಲಾಗಿತ್ತು.

ಕಳೆದ ವರ್ಷ ಆಗಸ್ಟ್ 16 ರಂದು ದಂಪತಿಗಳು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಅಧಿಕೃತವಾಗಿ ಒಟ್ಟಿಗೆ ಘೋಷಿಸಿದರು. ಆರಂಭದಲ್ಲಿ, ದಂಪತಿಗಳು ತಮ್ಮ ಮಗಳ ಚಿತ್ರಗಳು ಸಾರ್ವಜನಿಕ ಡೊಮೇನ್‌ನಿಂದ ಹೊರಗಿರುವಂತೆ, ಖಾಸಗಿಯಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ನಿಧಾನವಾಗಿ, ಜೋಡಿಯು ತಮ್ಮ ಖಾಸಗಿತನದಿಂದ ಹೊರಬಂದು, ಮಗಳ ಚಿತ್ರಗಳನ್ನು ಸ್ವತಃ ತಾವೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದ್ದರು.

ಏತನ್ಮಧ್ಯೆ, ಸಿನಿಮಾಗಳ ಬಗ್ಗೆ ನೋಡುವುದಾದರೆ, ಕರಣ್ ಸಿಂಗ್ ಗ್ರೋವರ್ ಅವರು ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮುಂದಿನ ಆ್ಯಕ್ಷನ್ ಥ್ರಿಲ್ಲರ್ ಚಲನಚಿತ್ರ ಫೈಟರ್‌ನಲ್ಲಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಜನವರಿ 25, 2024 ರಂದು ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.

ಇದನ್ನೂ ಓದಿ: IIFA Awards 2023: ಆಲಿಯಾ ಭಟ್, ಹೃತಿಕ್ ರೋಷನ್ ಅತ್ಯುತ್ತಮ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.