ETV Bharat / entertainment

'ಪ್ರೇಮಿಗಳ ಗಮನಕ್ಕೆ'! ಅದೃಷ್ಟ ಪರೀಕ್ಷೆಗಿಳಿದಿದ್ದಾರೆ 'ಬಿಗ್ ಬಾಸ್' ಶಶಿಕುಮಾರ್ - Shashikumar in premigala gamanakke

ಕನ್ನಡದ ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್ 'ಪ್ರೇಮಿಗಳ ಗಮನಕ್ಕೆ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

premigala gamanakke movie
ಪ್ರೇಮಿಗಳ ಗಮನಕ್ಕೆ ಸಿನಿಮಾ
author img

By

Published : Mar 21, 2023, 12:20 PM IST

ಅಭಿನಯ ಚಕ್ರವರ್ತಿ ನಿರೂಪಣೆಯ 'ಕನ್ನಡ ಬಿಗ್ ಬಾಸ್' ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೆಷ್ಟೋ ಮಂದಿ ಕನ್ನಡಿಗರ ಮನೆ ಮಾತಾಗೋದುಂಟು. ಅಷ್ಟೇ ಏಕೆ? ಹಲವು ಸ್ಪರ್ಧಿಗಳ ನಸೀಬೂ ಬದಲಾಗಿದೆ.

ರಿಯಾಲಿಟಿ ಶೋನಿಂದ ಜನಪ್ರಿಯರಾಗಿ ಸಿನಿಮಾ ಇಂಡಸ್ಟ್ರಿಗೆ ಬರೋದು ಹೊಸತೇನಲ್ಲ. ಈಗಾಗಲೇ ಸಾಕಷ್ಟು ಬಿಗ್ ಬಾಸ್ ಶೋ ಸ್ಪರ್ಧಿಗಳು ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲವರಿಗೆ ಯಶಸ್ಸು ಸಿಕ್ಕಿದ್ರೆ ಮತ್ತೆ ಕೆಲವರು ಸೈಲೆಂಟ್ ಆಗಿ ತೆರೆಮರೆಗೆ ಸರಿದುಬಿಡುತ್ತಾರೆ.‌ ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 6 ವಿನ್ನರ್ ಶಶಿಕುಮಾರ್ 'ಪ್ರೇಮಿಗಳ ಗಮನಕ್ಕೆ' ಎಂಬ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

premigala gamanakke movie
'ಪ್ರೇಮಿಗಳ ಗಮನಕ್ಕೆ' ಸಿನಿಮಾದಲ್ಲಿ ಚಿರಶ್ರೀ

ಲಿವಿಂಗ್ ಟುಗೆದರ್ ರಿಲೇಶನ್ ಶಿಪ್: ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ ಯುವಜನತೆಯಲ್ಲಿ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಹೆಚ್ಚಾಗುತ್ತಿದೆ. ಬೆಂಗಳೂರಿನಂಥ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಅದರಲ್ಲೂ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿಗೆ ಬಂದ ಯುವಕ, ಯುವತಿಯರು ಮದುವೆ ಮಾಡಿಕೊಳ್ಳದೇ ಒಂದೇ ಮನೆಯಲ್ಲಿ ಅನ್ಯೋನ್ಯತೆಯಿಂದ ವಾಸವಾಗಿರುವ ಸಂಬಂಧವನ್ನು ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಎಂದು ಕರೆಯಲಾಗುತ್ತದೆ. ಇಂಥದೇ ಸಂಬಂಧದ ಮೇಲೆ ಹೆಣೆಯಲಾದ ಕಥೆಯಿರುವ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಪ್ರೇಮಿಗಳ ಗಮನಕ್ಕೆ ಎಂಬ ಶೀರ್ಷಿಕೆಯುಳ್ಳ ಚಿತ್ರ ಇದೇ ಸಾಲಿನಲ್ಲಿ ಬಿಡುಗಡೆ ಆಗಲಿದೆ.

ಕೋವಿಡ್​​ ಸಂದರ್ಭದಲ್ಲಿ ದೇಶವೇ ಲಾಕ್‌ಡೌನ್ ಆಗಿ ಹೊರಗೆ ಎಲ್ಲೂ ಹೋಗದಂತಹ ಸಂದರ್ಭದಲ್ಲಿ ಬೆಂಗಳೂರಿನ ಎಲ್ಲಾ ಐಟಿ, ಬಿಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಗಳಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿಕೊಟ್ಟವು. ಅದರಂತೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ (ಈ ಚಿತ್ರದ ನಾಯಕ, ನಾಯಕಿ) ಇಬ್ಬರೂ ಒಂದೇ ಮನೆಯಲ್ಲಿ ವಾಸಿಸತೊಡಗುತ್ತಾರೆ. ಆಗ ಅವರಿಗೆ ಎದುರಾಗುವ ಸಂದರ್ಭಗಳನ್ನು ಹೇಗೆ ಎದುರಿಸಿದರು ಎಂಬುದೇ ಚಿತ್ರದ ಹೂರಣ.

ಶಶಿಕುಮಾರ್ ಈ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸುತ್ತಿದ್ದಾರೆ. ಶಶಿಕುಮಾರ್ ಜೋಡಿಯಾಗಿ ಚಿರಶ್ರೀ ಅಭಿನಯಿಸುತ್ತಿದ್ದಾರೆ. ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿರುವ ಚಿರಶ್ರೀ ಈ ಸಿನಿಮಾದಲ್ಲಿ ಶಶಿ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. 2 ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಬೆಂಗಳೂರಿನ ಉತ್ತರಹಳ್ಳಿಯ ಮನೆಯೊಂದರಲ್ಲಿ ನಡೆಸಲಾಗಿದೆ. ಉಳಿದ ಹಾಡಿನ ಚಿತ್ರೀಕರಣ ಮಂಗಳೂರಲ್ಲಿ ನಡೆಸುವ ಯೋಜನೆ ಇದೆ. ಶಶಿಕುಮಾರ್ ಹಾಗೂ ಚಿರಶ್ರೀ ಅಲ್ಲದೇ ಸುಬ್ಬು ಸೇರಿದಂತೆ ಹಲವರು 'ಪ್ರೇಮಿಗಳ ಗಮನಕ್ಕೆ' ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟ ಸೂರ್ಯ: ಬೆಲೆ ಕೇಳಿದ್ರೆ ದಂಗಾಗ್ತೀರಿ!

ವಿನ್ಸೆಂಟ್ ಇನ್ಬರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅರುಳ್ ಸೆಲ್ವನ್ ಅವರ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಸಹ ನಿರ್ದೇಶಕರಾಗಿ ಕೃಷ್ಣ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಸಿಟಾಡಿಲ್ ಫಿಲ್ಮ್ಸ್​​ ಮೂಲಕ ಸುಬ್ಬು ಚಿತ್ರ ನಿರ್ಮಾಣ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಪ್ರೇಮಿಗಳ ಗಮನಕ್ಕೆ ಸಿನಿಮಾ ಜುಲೈ ಅಥವಾ ಆಗಸ್ಟ್ ವೇಳೆಗೆ ಬಿಡುಗಡೆಗೆ ಚಿತ್ರತಂಡ ತಯಾರಿ ಮಾಡುತ್ತಿದೆ.

ಇದನ್ನೂ ಓದಿ: ಹೊಸ ಬಾಳಿಗೆ ಹೆಜ್ಜೆ ಇಡುತ್ತಿರುವ ಬಿಗ್​ಬಾಸ್​ ಸ್ಪರ್ಧಿ ಅಕ್ಷತಾ ಕುಕಿ: ಬೀಚ್​ ಬದಿ ಬ್ಯಾಚುಲರೆಟ್​​ ಪಾರ್ಟಿ ಮಾಡಿಕೊಂಡ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.