ETV Bharat / entertainment

ವಾರದ ಕಥೆ ಕಿಚ್ಚನ ಜೊತೆ.. ಮೊದಲ ವಾರ ಎಲಿಮಿನೇಟ್ ಆಗೋದ್ಯಾರು? - bigg boss elimination

ಇಂದು ಸಂಜೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ಇರಲಿದ್ದು, ಒಬ್ಬ ಸ್ಪರ್ಧಿ ಹೊರ ಹೋಗಲಿದ್ದಾರೆ. ಅಥವಾ ಮೊದಲನೇ ವಾರ ಸ್ಪರ್ಧಿ ಉಳಿದುಕೊಳ್ಳುವ ಸಾಧ್ಯತೆಯೂ ಇದೆ.

bigg boss weekend program with actor sudeep
ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ
author img

By

Published : Oct 1, 2022, 4:36 PM IST

Updated : Oct 1, 2022, 7:02 PM IST

ಬಿಗ್​​ ಬಾಸ್ ಆರಂಭವಾಗಿ ಇಂದಿಗೆ ಒಂದು ವಾರ ಆಗಿದೆ. ಬಿಗ್​ ಬಾಸ್ ಪ್ರತಿ ದಿನ ಟಾಸ್ಕ್​​ಗಳನ್ನು ನೀಡಿ ಸ್ಪರ್ಧಿಗಳ ವ್ಯಕ್ತಿತ್ವ, ಪ್ರತಿಭೆ, ಸಾಮರ್ಥ್ಯವನ್ನು ಅನಾವರಣಗೊಳಿಸುತ್ತಿದ್ದಾರೆ. ಆಟ, ವಾದ ವಿವಾದ, ತಂತ್ರದ ಜೊತೆಗೆ ಮತ್ತೊಂದಿಷ್ಟು ಖುಷಿ ಮನೆ ಮಾಡಿದೆ. ಇಂದು ಸಂಜೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ಇರಲಿದ್ದು, ಒಬ್ಬ ಸ್ಪರ್ಧಿ ಹೊರ ಹೋಗಲಿದ್ದಾರೆ. ಅಥವಾ ಮೊದಲನೇ ವಾರ ಸ್ಪರ್ಧಿ ಉಳಿದುಕೊಳ್ಳುವ ಸಾಧ್ಯತೆಯೂ ಇದೆ.

ಬಿಗ್​​ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು : ನಟ, ಕಲಾ ನಿರ್ದೇಶಕ, ರಂಗಭೂಮಿ ಪ್ರತಿಭೆ ಅರುಣ್ ಸಾಗರ್, ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟಿ ಮಯೂರಿ. ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್. ಸಿನಿಮಾಗಳ ರಿವ್ಯೂ ಡಿಫರೆಂಟಾಗಿ ಕೊಡೋ, ಸೋಷಿಯಲ್ ಮೀಡಿಯಾ ಸ್ಟಾರ್ ನವಾಝ್. ಸೀನಸ್ 8ರ ಎರಡನೇ ರನ್ನರ್ ಅಪ್ ದಿವ್ಯಾ ಉರುಡುಗ. ಕಿರುತೆರೆ ನಟ, ಉದ್ಯಮಿ ದರ್ಶ್ ಚಂದ್ರಪ್ಪ. ಸೀನಸ್ 8ರ ಟಾಪ್​ 5 ಸ್ಪರ್ಧಿ ಪ್ರಶಾಂತ್ ಸಂಬರಗಿ. ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ ಗೌಡ. ಕಿರುತೆರೆಯ ಕಾಮಿಡಿ ಕಾರ್ಯಕ್ರಮಗಳ ಸ್ಪರ್ಧಿ ವಿನೋದ್ ಗೊಬ್ಬರಗಲ.

ಧಾರಾವಾಹಿ ಹಾಗೂ ರಿಯಾಲಿಟಿ ಶೋ ಮೂಲಕ ಫೇಮಸ್ ಆದ ನಟಿ ನೇಹಾ ಗೌಡ. ಬಿಗ್​ಬಾಸ್ ಒಟಿಟಿ ಖ್ಯಾತಿಯ ಸಾನ್ಯ ಅಯ್ಯರ್. ಬಿಗ್​ಬಾಸ್ ಒಟಿಟಿ ಟಾಪರ್​ ರೂಪೇಶ್ ಶೆಟ್ಟಿ. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ. ಒಟಿಟಿ ಸ್ಪರ್ಧಿ ಆರ್ಯವರ್ಧನ್ ಗುರೂಜಿ.

ಒಟಿಟಿ ಸ್ಪರ್ಧಿ ರಾಕೇಶ್ ಅಡಿಗ. ಲೇಡಿ ಬೈಕರ್ ಐಶ್ವರ್ಯಾ. ಮಂಗಳ ಗೌರಿ ಮದುವೆ ಧಾರಾವಾಹಿ ಮೂಲಕ ಖ್ಯಾತಿ ಪಡೆದ ಕಾವ್ಯಶ್ರೀ ಗೌಡ. ಅಕ್ಕ ಧಾರಾವಾಹಿ ಮೂಲಕ ಜನರ ಮನ ಸೆಳೆದ ಈಗ ನಿರೂಪಕಿಯಾಗಿ ಮಿಂಚಿದ ಅನುಪಮಾ ಗೌಡ.

ನಾಮಿನೇಟ್​ ಆಗಿರುವ ಸ್ಪರ್ಧಿಗಳು : ಇದು ಬಿಗ್​​ ಬಾಸ್​ ಶೋನ ಮೊದಲ ವಾರ. ಪ್ರತಿ ವಾರವೂ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತದೆ. ಆಟ ಶುರುವಾದ ಮೊದಲ ದಿನವೇ ನಾಮಿನೇಷನ್​ ಪ್ರಕ್ರಿಯೆ ನಡೆದಿತ್ತು. ಅದರಲ್ಲಿ ಆರ್ಯವರ್ಧನ್​, ದರ್ಶ್​, ದಿವ್ಯಾ ಉರುಡುಗ, ಐಶ್ವರ್ಯಾ, ಪ್ರಶಾಂತ್​ ಸಂಬರಗಿ, ವಿನೋದ್​, ಅರುಣ್​ ಸಾಗರ್​, ​ನವಾಜ್​, ಸಾನ್ಯಾ ಅಯ್ಯರ್​, ಮಯೂರಿ, ರೂಪೇಶ್​ ರಾಜಣ್ಣ, ಕಾವ್ಯಶ್ರೀ ಅವರು ನಾಮಿನೇಟ್​ ಆಗಿದ್ದಾರೆ. ಈ ಪೈಕಿ ಇಂದು ಓರ್ವರು ಎಲಿಮಿನೇಟ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಾವೇರಿದ ವಾತಾವರಣ..

ಬಿಗ್​​ ಬಾಸ್ ಎಲಿಮಿನೇಶನ್ : ಇಂದು ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಇದೆ. ಇದರಲ್ಲಿ ನಿರೂಪಕ ಸುದೀಪ್ ಇಡೀ ವಾರದಲ್ಲಿ ನಡೆದ ಘಟನೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಓರ್ವ ಸ್ಪರ್ಧಿಯನ್ನು ಎಲಿಮಿನೇಟ್ ಮಾಡಲಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಶೋನಲ್ಲಿ ಅಶ್ಲೀಲತೆ ಪ್ರದರ್ಶನ.. ಕಾರ್ಯಕ್ರಮದ ವಿರುದ್ಧ ಆಂಧ್ರ ಹೈಕೋರ್ಟ್ ಗರಂ

Last Updated : Oct 1, 2022, 7:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.