ETV Bharat / entertainment

ಬಿಗ್‌ ಬಾಸ್‌ ಲೋಕದಲ್ಲಿ ಗಂಧರ್ವರು-ರಕ್ಕಸರು! ಪ್ರೋಮೋ ನೋಡಿ - ಕನ್ನಡ ಬಿಗ್‌ ಬಾಸ್‌

'ರಾಕ್ಷಸ ಗಣದ ದಾಳಿಗೆ ಗಂಧರ್ವರು ಸರಿಯಾದ ಉತ್ತರ ಕೊಡ್ತಾರಾ?' ಶೀರ್ಷಿಕೆಯಡಿ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿದೆ.

Bigg Boss Kannada
ಬಿಗ್‌ ಬಾಸ್‌ ಲೋಕದಲ್ಲಿ ಗಂಧರ್ವರು-ರಕ್ಕಸರು
author img

By ETV Bharat Karnataka Team

Published : Dec 5, 2023, 4:39 PM IST

ಕಣ್ಣಿನ ಸುತ್ತ ಕೆಂಪು ಬಣ್ಣ, ಕಡುಗಪ್ಪು ದಪ್ಪ ಹುಬ್ಬುಗಳು, ಕಪ್ಪು ನಿಲುವಂಗಿ, ಕೆಂಪು ಚೂಪು ಕೋಡುಗಳು, ಭೀಕರ ರೂಪದ ರಕ್ಕಸರ ಗುಂಪು.. ಇನ್ನೊಂದೆಡೆ ಶಾಂತ ಸ್ವಭಾವವುಳ್ಳ, ಬಿಳಿಯುಡುಗೆಯಲ್ಲಿ ನಗುನಗುತ್ತಾ ನಿಂತಿರುವ, ಬಿಳಿ ಹೂತೊಟ್ಟ ಗಂಧರ್ವರು. ಏನಿದು ಗಂಧರ್ವ-ರಕ್ಕಸರ ಮುಖಾಮುಖಿ?. ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಿಗ್‌ ಬಾಸ್​​ನ ಹೊಸ ಲೋಕ ಅನಾವರಣಗೊಂಡಿದೆ.

ಬಿಗ್‌ ಬಾಸ್ ಪ್ರೋಮೋ: ಬಿಗ್‌ ಬಾಸ್ ಮನೆ ಈ ಕ್ಷಣದಿಂದ ಬಿಗ್‌ ಬಾಸ್ ಲೋಕ ಎಂಬ ಕಾಲ್ಪನಿಕ ಜಗತ್ತಾಗಿ ಬದಲಾಗುತ್ತದೆ. ಈ ಲೋಕದಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎಂಬ ಎರಡು ಗುಂಪುಗಳಿವೆ ಎಂದು ಬಿಗ್‌ ಬಾಸ್ ಘೋಷಿಸಿದಾಗ ಎಲ್ಲಾ ಸ್ಪರ್ಧಿಗಳ ಮುಖದಲ್ಲಿ ಅಚ್ಚರಿ ಮೂಡಿದೆ. 'ರಾಕ್ಷಸ ಗಣದ ದಾಳಿಗೆ ಗಂಧರ್ವರು ಸರಿಯಾದ ಉತ್ತರ ಕೊಡ್ತಾರಾ?' ಶೀರ್ಷಿಕೆಯಡಿ ಬಿಗ್​ ಬಾಸ್ ಹೊಸ​ ಪ್ರೋಮೋ ಅನಾವರಣಗೊಂಡಿದೆ.

ಗಂಧರ್ವ-ರಕ್ಕಸರ ಮುಖಾಮುಖಿ: ಕಾರ್ತಿಕ್‌, ಸಂಗೀತಾ, ತನಿಷಾ, ಅವಿನಾಶ್‌, ಪ್ರತಾಪ್​​ ಎಲ್ಲರೂ ಮುಖಕ್ಕೆ ಬಣ್ಣ ಬಳಿದುಕೊಂಡು, ಕೋಡುಗಳುಳ್ಳ ಕಡುಗಪ್ಪು, ಕೆಂಪು ಉಡುಪು ತೊಟ್ಟ ರಕ್ಕಸರಾಗಿ ಬದಲಾದರೆ, ನಮ್ರತಾ, ವರ್ತೂರು ಸಂತೋಷ್, ತುಕಾಲಿ ಸಂತೋಷ್‌ ಎಲ್ಲರೂ ಬಿಳಿಯುಡುಗೆ ತೊಟ್ಟು ಗಂಧರ್ವರಾಗಿದ್ದಾರೆ.

ಕಾರ್ತಿಕ್, ಅಡುಗೆ ಮನೆಯಲ್ಲಿ ನೀರು ಚೆಲ್ಲಿ, ಬೆಡ್‌ ರೂಮ್​​ನಲ್ಲಿನ ಬಟ್ಟೆಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಕಿರುಚಾಡುತ್ತಾ ಕುಣಿದಾಡಿದ್ದಾರೆ. ಸಂಗೀತಾ, ವಿನಯ್ ಅವರಿಗೆ ತಮ್ಮ ಹಿಂದೆ ಕುಪ್ಪಳಿಸಿಕೊಂಡು ಬರುತ್ತಿರಬೇಕು ಎಂದು ಅಪ್ಪಣೆ ಹೊರಡಿಸಿದ್ದಾರೆ. ನಮ್ರತಾ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದೆ. ರಕ್ಕಸ ಗುಂಪು ಎಷ್ಟೇ ಕಿರುಚಾಡಿದರೂ ತಾಳ್ಮೆ ಕಳೆದುಕೊಳ್ಳದೇ ತಣ್ಣಗಿದೆ ಗಂಧರ್ವರ ತಂಡ. ಹಾಗಂತ ಅವರ ಮನಸ್ಸೇನೂ ತಣ್ಣಗಿಲ್ಲ. ಅದರ ಸೂಚಕವಾಗಿ, 'ನಾನು ನನ್ನ ಪಾತ್ರದಿಂದ ಹೊರಗೆ ಬಂದರೆ ವಿಷಯವೇ ಬೇರೆ. ಪಾಪ ಅವರು, ಬೇಜಾರಗುತ್ತಿದೆ ಅವರನ್ನು ನೆನಪಿಸಿಕೊಂಡರೆ' ಎಂದು ವಿನಯ್ ಹೇಳುತ್ತಿದ್ದಾರೆ. ಅಂದರೆ ಟಾಸ್ಕ್ ಮುಗಿಯುತ್ತಿದ್ದಂತೆ ವಿನಯ್​ ತಮ್ಮ ಅಸಲಿ ಆಟ ಶುರು ಮಾಡಲಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್: ವಿನಯ್ - ಸಂಗೀತಾ ಮಧ್ಯೆ ಮತ್ತೆ ಮನಸ್ತಾಪ!

ಈ ವಿಚಿತ್ರ ಪ್ರಪಂಚದ ಉಸ್ತುವಾರಿಯನ್ನು ಕ್ಯಾಪ್ಟನ್ ಸ್ನೇಹಿತ್‌ ನೋಡಿಕೊಳ್ಳುತ್ತಿದ್ದಾರೆ. ರಕ್ಕಸರ ತೆಕ್ಕೆಗೆ ಸಿಕ್ಕ ಗಂಧರ್ವರ ಪಾಡೇನು? ಅವರು ಹೇಗೆ ಪಾರಾಗುತ್ತಾರೆ? ಈ ಆಟಕ್ಕೆ ಇನ್ನೊಂದು ಆಯಾಮವೂ ಇದೆಯಾ? ಇದ್ದರೆ ಅದು ಹೇಗಿರುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲು ನೀವು ಬಿಗ್‌ ಬಾಸ್ ನೋಡಬೇಕಿದೆ. ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಇದನ್ನೂ ಓದಿ: ಸೋಮವಾರವೂ ಭರ್ಜರಿ ಕಲೆಕ್ಷನ್​​: ಅನಿಮಲ್​​​​ ಬಾಕ್ಸ್ ಆಫೀಸ್​ ಪ್ರಯಾಣ ಅತ್ಯುತ್ತಮ

''ಗುಣ - ಋಣದ ಗುದ್ದಾಟದಲ್ಲಿ ಗೆದ್ದೋರು ಯಾರು?'' ಶೀರ್ಷಿಕೆಯಡಿ ಬೆಳಗ್ಗೆ ಒಂದು ಪ್ರೋಮೋ ಬಿಡುಗಡೆ ಆಗಿತ್ತು. ಬಿಳಿ ಮತ್ತು ಕಪ್ಪು ಹೂಗಳನ್ನಿರಿಸಿ, ಸ್ಪರ್ಧಿಗಳಿಗೆ ಚಟುವಟಿಕೆಯೊಂದನ್ನು ನೀಡಿದ್ದಾರೆ. ಧನಾತ್ಮಕ ಮತ್ತು ಋಣಾತ್ಮಕ ಸ್ವಭಾವವುಳ್ಳವರನ್ನು ಉಲ್ಲೇಖಿಸಿ, ಅವರಿಗೆ ಕ್ರಮವಾಗಿ ಬಿಳಿ ಮತ್ತು ಕಪ್ಪು ಹೂಗಳನ್ನು ಕೊಡಬೇಕು. ಈ ಚಟುವಟಿಕೆಯಲ್ಲಿ ಸಂಗೀತಾ ಮತ್ತು ವಿನಯ್​ ನಡುವೆ ಮನಸ್ತಾಪದ ಕಿಡಿ ಹೊತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.