ETV Bharat / entertainment

Shiva Rajkumar:''ನೀವ್ ಗನ್​ನಲ್ಲಿ ಹೆದರಿಸಿದ್ರೆ, ನಾನ್ ಬರೀ ಕಣ್ಣಲ್ಲೇ...ಒರಿಜಿನಲ್​ ಗ್ಯಾಂಗ್​ಸ್ಟರ್'' - Shiva Rajkumar

ಸೆಂಚುರಿ ಸ್ಟಾರ್ ಶಿವ ರಾಜ್​ಕುಮಾರ್ ಜನ್ಮದಿನ ಹಿನ್ನೆಲೆ ಘೋಸ್ಟ್ ಚಿತ್ರದ 'BIG DADDY' ವಿಡಿಯೋ ಅನಾವರಣಗೊಂಡಿದೆ.

BIG DADDY video from Ghost movie
ಘೋಸ್ಟ್ ಚಿತ್ರದ ಬಿಗ್​ ಡ್ಯಾಡಿ ವಿಡಿಯೋ
author img

By

Published : Jul 12, 2023, 12:14 PM IST

Updated : Jul 12, 2023, 12:31 PM IST

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟನಿಗೆ ಎಲ್ಲೆಡೆಯಿಂದ ಶುಭಾಶಯಗಳ ಸಂದೇಶ ಹರಿದುಬರುತ್ತಿದೆ. ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ನಟನ ಜನ್ಮದಿನನ್ನು ಆಚರಿಸುತ್ತಿದ್ದಾರೆ. ಅಭಿಮಾನಿಗಳಿಗೆ ಈ ದೊಡ್ಮನೆ ಮಗ ತಮ್ಮ ಸಿನಿಮಾ ಅಪ್​ಡೇಟ್ಸ್ ಕೊಡುವ ಮೂಲಕ ಸಿಹಿ ಹಂಚಿದ್ದಾರೆ.

ಘೋಸ್ಟ್ ಸಿನಿಮಾ: 62ನೇ ಹುಟ್ಟುಹಬ್ಬ ಅಂಗವಾಗಿ ಸೆಂಚುರಿ ಸ್ಟಾರ್ ತಮ್ಮ ಮುಂದಿನ ಸಿನಿಮಾದ ಅಪ್​ಡೇಟ್ಸ್ ಅನ್ನು ಕೊಟ್ಟಿದ್ದಾರೆ. 'ಘೋಸ್ಟ್​' ಹ್ಯಾಟ್ರಿಕ್​ ಹೀರೋ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ. ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಸೌಂಡ್​ ಮಾಡುತ್ತಿರುವ ಚಿತ್ರವಿದು. ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಮತ್ತು ನಿರ್ದೇಶಕ ಶ್ರೀನಿ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.

'BIG DADDY' ಸ್ಪೆಷಲ್​ ವಿಡಿಯೋ: ಇಂದು ಕರುನಾಡಿನ ಹಿರಿಯ ನಟನ ಜನ್ಮದಿನ ಹಿನ್ನೆಲೆ ಚಿತ್ರತಂಡ 'BIG DADDY' ಎಂಬ ಸ್ಪೆಷಲ್​ ವಿಡಿಯೋ ಅನಾವಣಗೊಳಿಸಿದೆ. ಆ್ಯಕ್ಷನ್​ ಸೀನ್​ನಲ್ಲಿ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್ ಸಖತ್​​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆ, ದೃಶ್ಯ, ನಟನ ಡೈಲಾಗ್ಸ್​ ವಿಭಿನ್ನವಾಗಿ ಮೂಡಿಬಂದಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • " class="align-text-top noRightClick twitterSection" data="">

ದಸರಾಗೆ 'ಘೋಸ್ಟ್' ಉಡುಗೊರೆ: ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ, ಉತ್ತಮ ಕಥಾಹಂದರವುಳ್ಳ ಸಿನಿಮಾಗಳು ಮೂಡಿ ಬರುತ್ತಿವೆ. ಪ್ಯಾನ್​ ಇಂಡಿಯಾ ಟ್ರೆಂಡ್​ ಜೋರಾಗಿದೆ. ಸ್ಟಾರ್​ ನಟರ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಹಿರಿಯ ನಟ ಶಿವರಾಜ್​ಕುಮಾರ್​ ಸಿನಿಮಾ ಅಂದ್ರೆ ನಿರೀಕ್ಷೆ, ಕುತೂಹಲ ಹೆಚ್ಚೇ ಅಲ್ವೇ?. ದಕ್ಷಿಣ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸಿನಿಮಾ 'ಘೋಸ್ಟ್'. ಸೆಟ್ಟೇರಿ ಬಹು ಸಮಯವಾಗಿದ್ದು, ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಇಂದು ನಟನ ಜನ್ಮದಿನ ಅಂಗವಾಗಿಯೇ ಈ ಸಿನಿಮಾದ ಸ್ಪೆಷಲ್​ ವಿಡಿಯೋ ಅನಾವರಣಗೊಂಡಿದೆ. ಇದೇ ದಸರಾ ವೇಳೆಗೆ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ.

ಇದನ್ನೂ ಓದಿ: Bonalu Festival: ತೆಲುಗು ರಾಜ್ಯದಲ್ಲಿ ಬೊನಾಲು ಸಂಭ್ರಮ: ಫೋಟೋಗಳಿಲ್ಲಿವೆ ನೋಡಿ

'ಘೋಸ್ಟ್' ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ 'ಘೋಸ್ಟ್' ಮೂಡಿಬರಲಿದೆ. ಶಿವ ರಾಜ್​ಕುಮಾರ್​​ ಜೊತೆಗೆ ಅನುಪಮ್ ಖೇರ್, ಜಯರಾಂ, ದತ್ತಣ್ಣ, ಅಭಿಜಿತ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಇದೊಂದು ಆ್ಯಕ್ಷನ್​ ಸಿನಿಮಾವಾಗಿದ್ದು, ಬಿಗ್​ ಡ್ಯಾಡಿ ವಿಡಿಯೋದಲ್ಲಿ ನಟ ಸಖತ್ ಸ್ಟೈಲಿಶ್​, ಖಡಕ್​ ಲುಕ್​ನಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ಇದನ್ನೂ ಓದಿ: Shivarajkumar Birthday: ಅಪ್ಪಾಜಿಯಿಂದ ಶಿವಣ್ಣ ಕಲಿತ ವಿದ್ಯೆ ಏನು ಗೊತ್ತೇ?

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ನಿರ್ದೇಶಕ ಶ್ರೀನಿ ಅವರ ಈ ಸಿನಿಮಾಗೆ ಮಹೇಂದ್ರ ಸಿಂಹ ಕ್ಯಾಮರಾ ವರ್ಕ್, ಅರ್ಜುನ್ ಜನ್ಯ ಸಂಗೀತ ಇದ್ದು ಸಂಭಾಷಣೆ ಕೆಲಸವನ್ನು ಮಾಸ್ತಿ, ಪ್ರಸನ್ನ ನಿರ್ವಹಿಸಿದ್ದಾರೆ. 5 ಪ್ರಮುಖ ಸಾಹಸ ದೃಶ್ಯಗಳಿರಲಿವೆ.

Last Updated : Jul 12, 2023, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.