ETV Bharat / entertainment

ಶಿವಣ್ಣನ ಬರ್ತ್ ಡೇಗೆ ಸ್ಪೆಷಲ್​ ಗಿಫ್ಟ್​​ ರೆಡಿ: ಘೋಸ್ಟ್‌ ಚಿತ್ರದಿಂದ 'BIG DADDY'‌ ಸ್ಪೆಷಲ್ ವಿಡಿಯೋ - shiva rajkumar

ಶಿವ ರಾಜ್‌​​ಕುಮಾರ್ ಹುಟ್ಟುಹಬ್ಬದಂದು ಬಿಗ್ ಡ್ಯಾಡಿ ಎಂಬ ವಿಶೇಷ ವಿಡಿಯೋ ಅನಾವರಣಗೊಳ್ಳಲಿದೆ.

BIG DADDY special video
ಘೋಸ್ಟ್‌ ಚಿತ್ರದಿಂದ 'BIG DADDY'‌ ವಿಡಿಯೋ
author img

By

Published : Jun 30, 2023, 4:14 PM IST

'ಘೋಸ್ಟ್'. ಶೀರ್ಷಿಕೆಯಿಂದಲೇ ಕನ್ನಡ ಮಾತ್ರವಲ್ಲದೇ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಸೌಂಡ್​ ಮಾಡುತ್ತಿರುವ ಸಿನಿಮಾ. ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಬ್ಲಾಕ್​ ಬಸ್ಟರ್ ಸಿನಿಮಾ ಬರಲಿದೆ ಎನ್ನುವ ಪಾಸಿಟಿವ್ ವೈಬ್ಸ್ ಕ್ರಿಯೇಟ್ ಮಾಡಿರೋ ಚಿತ್ರವಿದು. ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಘೋಸ್ಟ್‌‌ ಬಹುತೇಕ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಮೋಷನ್ ಪೋಸ್ಟರ್​ನಿಂದಲೇ ಟಾಕ್ ಆಗುತ್ತಿರುವ ಘೋಸ್ಟ್ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅಂತಾ ಅಭಿಮಾನಿಗಳು ಕಾದು ಕುಳಿತಿದ್ದಾರೆ.

"BIG DADDY" ಸ್ಪೆಷಲ್​ ವಿಡಿಯೋ: ಜುಲೈ 12 ಕರುನಾಡ ಚಕ್ರವರ್ತಿ ಶಿವ ರಾಜ್​​ಕುಮಾರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಅಭಿನಯಿಸಿರೋ‌ ಬಹು ನಿರೀಕ್ಷಿತ "ಘೋಸ್ಟ್" ಚಿತ್ರತಂಡದಿಂದ ವಿಶೇಷ ವಿಡಿಯೋವೊಂದು ಅನಾವರಣಗೊಳ್ಳಲಿದೆ. "BIG DADDY" ಎಂಬ ಸ್ಪೆಷಲ್​ ವಿಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಹೌದು, ಈ BIG DADDY ವಿಡಿಯೋವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ.

BIG DADDY special video
ಘೋಸ್ಟ್‌ ಚಿತ್ರದಿಂದ 'BIG DADDY'‌ ವಿಡಿಯೋ ಅನಾವರಣ

ಮೂರು ಭಾಷೆಗಳಲ್ಲಿ 'ಘೋಸ್ಟ್': ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ 'ಘೋಸ್ಟ್' ಚಿತ್ರ ತೆರೆಕಾಣಲಿದೆ. ಸದ್ಯ ಶಿವಣ್ಣನ ಲುಕ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರದಲ್ಲಿ ಅನುಪಮ್ ಖೇರ್, ಜಯರಾಂ, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ.

ಶ್ರೀನಿವಾಸ ಕಲ್ಯಾಣ, ಓಲ್ಡ್ ಮಾಂಕ್ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಶ್ರೀನಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಜವಾಬ್ದಾರಿ ಮಾಸ್ತಿ ಹಾಗೂ ಪ್ರಸನ್ನ ಅವರದ್ದು. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಘೋಸ್ಟ್‌ ಚಿತ್ರಕ್ಕಿದೆ. ಐದು ಸಾಹಸ ಸನ್ನಿವೇಶಗಳು ಚಿತ್ರದಲ್ಲಿದೆ.

ಇದನ್ನೂ ಓದಿ: Janhvi Kapoor: ಮಿಂಚುವ ಉಡುಗೆಯಲ್ಲಿ ಮಿನುಗಿದ ಸೌಂದರ್ಯದ ಖನಿ ಜಾನ್ವಿ ಕಪೂರ್ PHOTOS

"July 12 "BD"(BIG DADDY)" : ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂದೇಶ್ ನಾಗರಾಜ್ ಅರ್ಪಿಸಲಿದ್ದಾರೆ. ಸಂದೇಶ್ ಎನ್ ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ‌ಮಾಡುತ್ತಿದ್ದಾರೆ. ಈಗಾಗಲೇ ಈ ಕುರಿತು "July 12 "BD"(BIG DADDY)" ಎಂಬ ಪೋಸ್ಟರ್ ಸಹ ಬಿಡುಗಡೆ ಅಗಿದೆ‌. ಈ ವಿಶೇಷ ವಿಡಿಯೋ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: Housefull 5: ನಕ್ಕುನಗಿಸಲು ಬರ್ತಿದೆ ಹೌಸ್‌ಫುಲ್ 5 ಸಿನಿಮಾ - ಬಿಡುಗಡೆಗೆ ಅಭಿಮಾನಿಗಳ ಕಾತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.