ETV Bharat / entertainment

ಆರ್​​ಆರ್​ಆರ್​ ಯಶಸ್ಸು: ಅಮೆರಿಕದಲ್ಲಿ ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ - rrr movie awards

ಆರ್​​ಆರ್​ಆರ್​ ಸಿನಿಮಾ ನಿರ್ದೇಶಕ ರಾಜಮೌಳಿ ಅಮೆರಿಕದಲ್ಲಿ ಫಿಲ್ಮ್ ಫೆಸ್ಟಿವಲ್​ನಲ್ಲಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಯನ್ನು ಪಡೆದುಕೊಂಡರು.

Best Director Award for Rajamouli
ರಾಜಮೌಳಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ
author img

By

Published : Dec 3, 2022, 12:46 PM IST

Updated : Dec 3, 2022, 1:08 PM IST

ಆರ್​​ಆರ್​ಆರ್​.. ಇದು ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಸಿನಿಮಾ. ರಾಜಮೌಳಿ ಆ್ಯಕ್ಷನ್​ ಕಟ್ ಹೇಳಿರುವ ಈ ಚಿತ್ರದಲ್ಲಿ ರಾಮ್​ಚರಣ್​ ಮತ್ತು ಜೂನಿಯರ್​ ಎನ್​ಟಿಆರ್​ ಅತ್ಯದ್ಭುತ ಅಭಿನಯ ಮಾಡಿ ಸಿನಿಪ್ರಿಯರ ಮನ ಗೆದ್ದಿದ್ದಾರೆ. ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಈ ಚಿತ್ರ ಮತ್ತೊಂದು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಈ ಚಲನಚಿತ್ರದ ನಿರ್ದೇಶಕರು ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದನ್ನು ಹಾಲಿವುಡ್‌ನಲ್ಲಿ ಪ್ರತಿಷ್ಠಿತವೆಂದು ಪರಿಗಣಿಸಲಾಗಿದೆ. ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡೈರೆಕ್ಟರ್​ ರಾಜಮೌಳಿ ಅವರು ಈ ಆರ್​ಆರ್​ಆರ್​ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಎಂಬ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಭಿಮಾನಿಗಳು ರಾಜಮೌಳಿ ಮತ್ತು ಚಿತ್ರತಂಡಕ್ಕೆ ಶುಭ ಕೋರುತ್ತಿದ್ದಾರೆ.

ಕೆಲ ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಆನ್‌ಲೈನ್ ಪ್ರಕಟಣೆಗಳ ಪ್ರಮುಖ ವ್ಯಕ್ತಿಗಳ ಗುಂಪು 1935ರಿಂದ ಚಲನಚಿತ್ರೋದ್ಯಮದಲ್ಲಿನ ಅತ್ಯುತ್ತಮ ಪ್ರದರ್ಶನಕಾರರಿಗೆ ಈ ಪ್ರಶಸ್ತಿಗಳನ್ನು ನೀಡಲು ಒಟ್ಟುಗೂಡಿದೆ. ಅಂದಿನಿಂದ ಈ ಪ್ರಶಸ್ತಿ ನಿಡುತ್ತಾ ಬಂದಿದ್ದಾರೆ. ಈ ಸಾಲಿನಲ್ಲಿ ರಾಜಮೌಳಿ ಅವರಿಗೆ ಈ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ ದೊರೆತಿದೆ.

ಇದನ್ನೂ ಓದಿ: ವಸಿಷ್ಠ ಜೊತೆ ಕ್ರಿಯೇಟಿವ್ ಆಗಿ ನಿಶ್ಚಿತಾರ್ಥ ಮಾಡಿಕೊಂಡರಂತೆ ನಟಿ ಹರಿಪ್ರಿಯಾ..

ಆರ್‌ಆರ್‌ಆರ್ ಆ್ಯಕ್ಷನ್​ ಎಂಟರ್​ಟೈನ್​ಮೆಂಟ್ ಚಿತ್ರವಾಗಿದ್ದು,​​ ಇದು 400 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದೆ. ಚಿತ್ರ ಸೂಪರ್​ ಹಿಟ್​​ ಆಗಿ ಸುಮಾರು 1,200 ಕೋಟಿ ಕಲೆಕ್ಷನ್ ಮಾಡಿದೆ. ವಿಶ್ವದೆಲ್ಲೆಡೆ ರಂಜಿಸುತ್ತಿರುವ ಈ ಸಿನಿಮಾ ಈಗಾಗಲೇ ಸ್ಯಾಟರ್ನ್, ಸನ್ ಸೆಟ್ ಸರ್ಕಲ್ ನಂತಹ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇನ್ನೊಂದೆಡೆ ಈ ಸಿನಿಮಾ ಆಸ್ಕರ್ ಕಣಕ್ಕೆ ಇಳಿದಿದ್ದು ಗೊತ್ತೇ ಇದೆ. ಇದು ಸುಮಾರು 14 ವಿಭಾಗಗಳಲ್ಲಿ ಆಸ್ಕರ್​ಗೆ ಸ್ಪರ್ಧಿಸಲಿದೆ.

Last Updated : Dec 3, 2022, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.