ETV Bharat / entertainment

'ಬಯಲುಸೀಮೆ' ಟ್ರೇಲರ್ ಅನಾವರಣ - ಉತ್ತರ ಕರ್ನಾಟಕ ಶೈಲಿಯ ಕಥೆಗೆ ಅಭಿಷೇಕ್ ಅಂಬರೀಶ್ ಸಾಥ್

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆ ಇರುವ 'ಬಯಲುಸೀಮೆ' ಟ್ರೇಲರ್ ಅನ್ನು ಅಭಿಷೇಕ್ ಅಂಬರೀಶ್ ಅನಾವರಣಗೊಳಿಸಿದರು.

Bayaluseeme movie Trailer
ಬಯಲುಸೀಮೆ ಟ್ರೇಲರ್ ಅನಾವರಣ
author img

By

Published : Aug 2, 2023, 1:27 PM IST

ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆ ಇರುವ 'ಬಯಲುಸೀಮೆ' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

'ಬಯಲುಸೀಮೆ' ಟ್ರೇಲರ್ ಅನಾವರಣ: 2 ನಿಮಿಷ 50 ಸೆಕೆಂಡ್ ಇರುವ ಟ್ರೇಲರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರಕಥೆ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ರೋಚಕ ತಿರುವುಗಳು, ಜವಾರಿ ಭಾಷೆಯ ಸಂಭಾಷಣೆ, ರಾಜಕೀಯ ಸುತ್ತ ಸುತ್ತುವ ಕಥೆ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ 'ಬಯಲುಸೀಮೆ' ಸಿನಿ ಬಳಗ ಇದೀಗ ಟ್ರೇಲರ್ ಅನಾವರಣಗೊಳಿಸಿ ಪ್ರೇಕ್ಷಕರ ಕಾತರವನ್ನು ಇಮ್ಮಡಿಗೊಳಿಸಿದೆ.

  • " class="align-text-top noRightClick twitterSection" data="">

'ಬಯಲುಸೀಮೆ' ಚಿತ್ರತಂಡ ಹೀಗಿದೆ.. ವರುಣ್ ಕಟ್ಟಿಮನಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಸಂಯುಕ್ತ ಹೊರನಾಡು ಸಿನಿಮಾದ ನಾಯಕಿ. ಆರ್ಮುಗಂ ರವಿಶಂಕರ್, ಟಿ.ಎಸ್ ನಾಗಾಭರಣ, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕಲ್ನವರ್, ಪ್ರದೀಪ್ ರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಗಾಯಿತ್ರಿ ದೇವಿ ಕ್ರಿಯೇಷನ್ಸ್ ಮತ್ತು ಪಿ ಆರ್ ಎಸ್ ಕ್ರಿಯೇಷನ್ಸ್ ಬ್ಯಾನರ್ ಅಡಿ ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಳ್ಳಿ, ರಶ್ಮೀ ವರುಣ್ ಸೇರಿ 'ಬಯಲುಸೀಮೆ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಜೇಂದ್ರಗಡ, ಬೀಳಗಿ, ಮುಂಬೈನಲ್ಲಿ ಸಿನಿಮಾದ ಶೂಟಿಂಗ್​ ಸೆರೆ ಹಿಡಿಯಲಾಗಿದೆ. ಸುಜಯ್ ಕುಮಾರ್ ಬಾವಿಕಟ್ಟಿ ಅವರ ಕ್ಯಾಮರಾವರ್ಕ್, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಉತ್ತರ ಕರ್ನಾಟಕದ ಖಡಕ್ ಖಾನಾವಳಿ ಊಟ ಇದ್ದಂಗೆ ಇರುವ ಬಯಲುಸೀಮೆ ಸಿನಿಮಾ ಇದೇ ಆಗಸ್ಟ್ 18ಕ್ಕೆ ತೆರೆಗೆ ಬರಲಿದೆ.

ಇದನ್ನೂ ಓದಿ: SIIMA 2023: ಪ್ರತಿಷ್ಠಿತ ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕೆಜಿಎಫ್​ 2, ಕಾಂತಾರ!

2022ರಲ್ಲಿ ಕನ್ನಡ ಚಿತ್ರರಂಗ ಅದ್ಭುತ ಸಿನಿಮಾಗಳ ಮೂಲಕ ಗಮನ ಸೆಳೆದಿತ್ತು. ರಾಕಿಂಗ್​ ಸ್ಟಾರ್ ಯಶ್​​ ಅಭಿನಯದ ಕೆಜಿಎಫ್​ 2, ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ನಟನೆಯ ಕಾಂತಾರ ಎಂಬ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಇಡೀ ಭಾರತೀಯ ಸಿನಿಮಾ ರಂಗವೇ ಸ್ಯಾಂಡಲ್​​ವುಡ್​ನತ್ತ ತಿರುಗಿ ನೋಡುವಂತಾಯ್ತು. ಆದರೆ 2023ನೇ ಸಾಲಿನಲ್ಲಿ ಕನ್ನಡ ಚಿತ್ರರಂಗದಿಂದ ಸೂಪರ್​ ಹಿಟ್​ ಸಿನಿಮಾಗಳು ಹೊರಬಂದಿಲ್ಲ. ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿವೆಯಾದರೂ, ಪ್ರೇಕ್ಷಕರು ದೊಡ್ಡ ಬ್ಲಾಕ್​​ ಬಸ್ಟರ್ ಸಿನಿಮಾಗಾಗಿ ನಿರೀಕ್ಷಿಸುತ್ತಿದ್ದಾರೆ. ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆ ಇರುವ 'ಬಯಲುಸೀಮೆ' ಸಿನಿಮಾ ಎಷ್ಟರ ಮಟ್ಟಿಗೆ ಜನಮನ ತಲುಪುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. ಇನ್ನು ಕಳೆದ ಸಾಲಿನಲ್ಲಿ ಸದ್ದು ಮಾಡಿರುವ ಕೆಜಿಎಫ್​ 2, ಕಾಂತಾರ, 777 ಚಾರ್ಲಿ, ವಿಕ್ರಾಂತ್​ ರೋಣ ಸೇರಿದಂತೆ ಕೆಲ ಕನ್ನಡ ಸಿನಿಮಾಗಳು ಹಲವು ವಿಭಾಗಳಲ್ಲಿ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವೀ ಅವಾರ್ಡ್ಸ್ 2023ಕ್ಕೆ ನಾಮನಿರ್ದೇಶನಗೊಂಡಿದೆ.

ಇದನ್ನೂ ಓದಿ: ಕಲಾ ನಿರ್ದೇಶಕ ನಿತಿನ್​ ಚಂದ್ರಕಾಂತ್​ ದೇಸಾಯಿ ಇನ್ನಿಲ್ಲ - ಟ್ವಿಟರ್​ನಲ್ಲಿ ಸಂತಾಪ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.