ETV Bharat / entertainment

ವೂಟ್​ನಲ್ಲಿ ಬೈರಾಗಿ ಸಿನಿಮಾ ಪ್ರಸಾರ.. ಪ್ರೇಕ್ಷಕರ ಪ್ರತಿಕ್ರಿಯೆಗೆ ಚಿತ್ರತಂಡ ಉತ್ಸುಕ - ವೂಟ್ ಸೆಲೆಕ್ಟ್​​ನಲ್ಲಿ ಚಲನಚಿತ್ರ

ಇಂದಿನಿಂದ ವೂಟ್​ನಲ್ಲಿ ಬೈರಾಗಿ ಸಿನಿಮಾ ಪ್ರಸಾರ ಆಗುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಗೆ ಚಿತ್ರತಂಡ ಉತ್ಸುಕವಾಗಿದೆ.

Bairagi movie on Woot OTT
ವೂಟ್​ನಲ್ಲಿ ಬೈರಾಗಿ ಸಿನಿಮಾ ಪ್ರಸಾರ
author img

By

Published : Aug 19, 2022, 1:18 PM IST

ಟಗರು ಚಿತ್ರದ ಬಳಿಕ‌ ಶಿವರಾಜ್ ಕುಮಾರ್ ಜೊತೆ ಡಾಲಿ ಧನಂಜಯ್ ಒಟ್ಟಿಗೆ ಕಾಣಿಸಿಕೊಂಡ ಬೈರಾಗಿ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ವಿಮರ್ಶಕರ ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾದ ಬೈರಾಗಿ ಚಲನಚಿತ್ರವನ್ನು ವೂಟ್ ಸೆಲೆಕ್ಟ್​ನಲ್ಲಿ ನೋಡಬಹುದಾಗಿದೆ.

ಈ ಬಗ್ಗೆ ಮಾತನಾಡಿರುವ ಬೈರಾಗಿ ಸಿನಿಮಾ ನಾಯಕ ನಟ ಶಿವರಾಜ್‌ ಕುಮಾರ್, ಬೈರಾಗಿಯಂತಹ ಸಂಪೂರ್ಣ ಪ್ಯಾಕೇಜ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ಖುಷಿಯಾಗಿದೆ. ಹುಲಿ ಶಿವನ ಪಾತ್ರ ಮಾಡುವುದು ಮತ್ತು ಹುಲಿವೇಷ ಹಾಕುವುದು ನನಗೆ ಸವಾಲಾಗಿತ್ತು. ನಿರ್ದೇಶಕ ವಿಜಯ್ ಈ ಪಾತ್ರವನ್ನು ಜೀವಂತಿಕೆಯಿಂದ ನಿರ್ವಹಿಸಲು ಸಹಾಯ ಮಾಡಿದರು. ವೂಟ್ ಸೆಲೆಕ್ಟ್​​ನಲ್ಲಿ ಚಲನಚಿತ್ರ ಒಟಿಟಿ ಮೂಲಕ ಬಿಡುಗಡೆ ಆಗುತ್ತಿದ್ದು, ನಾನು ಬಹಳ ಉತ್ಸುಕನಾಗಿದ್ದೇನೆ‌ ಎಂದು ತಿಳಿಸಿದರು.

Bairagi movie on Woot OTT
ವೂಟ್​ನಲ್ಲಿ ಬೈರಾಗಿ ಸಿನಿಮಾ ಪ್ರಸಾರ

ನಟ ಡಾಲಿ ಧನಂಜಯ್ ಮಾತನಾಡಿ, ಈ ಸಿನಿಮಾ ಮತ್ತು ನನ್ನ ಪಾತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ. ನಾನು ಶಿವರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಅವರೊಂದಿಗೆ ನಟಿಸಲು ಮತ್ತೆ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಅತಿ ದೊಡ್ಡ ಗೌರವವಾಗಿದೆ. ಶಿವಣ್ಣ ಮತ್ತು ವಿಜಯ್ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡುವ ಕನಸು ನನಸಾಗಿದೆ. ಪ್ರತಿ ದೃಶ್ಯವೂ ಅದ್ಭುತವಾಗಿದೆ. ವೂಟ್​ ಸೆಲೆಕ್ಟ್​ನಲ್ಲಿ ಚಿತ್ರದ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಶಶಾಂಕ್ ನಿರ್ದೇಶನದ ಬಹುನಿರೀಕ್ಷೆಯ ಸಿನಿಮಾ ಲವ್ 360 ಬೆಳ್ಳಿ ತೆರೆಗೆ

ನಿರ್ದೇಶಕ ವಿಜಯ್ ಮಿಲ್ಟನ್ ಮಾತನಾಡಿ, ಹುಲಿ ಶಿವನ ಪಾತ್ರವನ್ನು ಇಷ್ಟು ಚೆನ್ನಾಗಿ ಕಟ್ಟಿಕೊಡಲು ಶಿವಣ್ಣ ಅವರಲ್ಲದೇ ಬೇರೆ ಯಾರಿಗೂ ಸಾಧ್ಯವಾಗದು. ಅವರೊಬ್ಬ ಶ್ರೇಷ್ಠ ನಟ. ಅತ್ಯಂತ ವಿನಮ್ರ ಮತ್ತು ಉದಾರ ವ್ಯಕ್ತಿ. ಪಾತ್ರ ಮತ್ತು ಚಿತ್ರಕಥೆಗೆ ಪ್ರಾಮಾಣಿಕವಾಗಿರುವುದು ಮಾತ್ರ ಅವರ ಗಮನವಾಗಿತ್ತು.

ಬೈರಾಗಿ ನನ್ನ ಕನ್ನಡದ ಚೊಚ್ಚಲ ಚಿತ್ರವಾಗಿದ್ದು, ವಿಶೇಷವಾಗಿದೆ. ನನ್ನ ಕಥೆ ಮತ್ತು ನಿರೂಪಣೆಯಲ್ಲಿ ನಂಬಿಕೆ ಇಟ್ಟು ಶ್ರದ್ಧೆಯಿಂದ ಅಭಿನಯಿಸಿ, ಶ್ರೇಷ್ಠ ಸಿನಿಮಾ ಮೂಡಿಬರಲು ಕಾರಣರಾದ ಪಾತ್ರವರ್ಗ ಮತ್ತು ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ. ಪ್ರೇಕ್ಷಕರು ಚಿತ್ರವನ್ನು ಆನಂದಿಸುತ್ತಾರೆ. ಸಾಮಾಜಿಕ ಸಂದೇಶ ಅವರ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.