ETV Bharat / entertainment

ನಟ ಶ್ರೀಮುರಳಿ ಬರ್ತ್​​​ಡೇಯಂದು 'ಬಘೀರ' ಟೀಸರ್ ಬಿಡುಗಡೆ - Sri Murali

'Bagheera' teaser: ಡಿಸೆಂಬರ್ 17ರಂದು ನಟ ಶ್ರೀಮುರಳಿ ಅಭಿನಯದ 'ಬಘೀರ' ಸಿನಿಮಾದ ಟೀಸರ್ ರಿಲೀಸ್ ಆಗಲಿದೆ.

Bagheera Teaser
ಬಘೀರ ಟೀಸರ್
author img

By ETV Bharat Karnataka Team

Published : Dec 6, 2023, 8:16 PM IST

'ಮದಗಜ' ಸಿನಿಮಾ ಬಳಿಕ ರೋರಿಂಗ್ ಸ್ಟಾರ್ ಜನಪ್ರಿಯತೆಯ ಶ್ರೀಮುರಳಿ ಏನು ಮಾಡ್ತಿದ್ದಾರೆ ಅನ್ನೋದು ಅಭಿಮಾನಿ ಬಳಗದ ಪ್ರಶ್ನೆ. ಈ ಕುರಿತು ಇಲ್ಲಿದೆ ಹೊಸ ಅಪ್ಡೇಟ್‌!. ಸದ್ಯದಲ್ಲೇ ನಟನ ಹೊಸ ಸಿನಿಮಾ 'ಬಘೀರ' ತೆರೆಗೆ ಬರಲಿದೆ. ಹೌದು, ಚಿತ್ರೀಕರಣಣದಲ್ಲಿ ಬ್ಯುಸಿಯಾಗಿರುವ ತಂಡ ನಟನ ಹುಟ್ಟುಹಬ್ಬಕ್ಕೆ ಟೀಸರ್‌ ಬಿಡುಗಡೆಗೊಳಿಸಲಿದೆ.

ಡಿಸೆಂಬರ್ 17ರಂದು ಶ್ರೀಮುರಳಿ ಹುಟ್ಟುಹಬ್ಬ. ಅಂದೇ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಈ ಹಿಂದೆ 'ಲಕ್ಕಿ' ಸಿನಿಮಾ ನಿರ್ದೇಶನ ಮಾಡಿದ್ದ ಡಾ.ಸೂರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹತ್ತು ವರ್ಷಗಳ ಬಳಿಕ ಸೂರಿ ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾವಿದು.

ಇದನ್ನೂ ಓದಿ: ಮೋಹನ್‌ಲಾಲ್ ಮಖ್ಯಭೂಮಿಕೆಯ 'ಮಲೈಕೋಟೈ ವಾಲಿಬನ್‌' ಟೀಸರ್ ನೋಡಿ

ಕೆಜಿಎಫ್​​, ಕಾಂತಾರ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಬಘೀರ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಉಗ್ರಂ, ಕೆಜಿಎಫ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾಗೆ ಕಥೆ ಬರೆದಿದ್ದಾರೆ. ಈ ಸಿನಿಮಾ ಶ್ರೀಮುರಳಿಗೆ ದೊಡ್ಡ ಮಟ್ಟದ ಹೆಸರು ತಂದುಕೊಡುತ್ತೆ ಅನ್ನೋದು ಚಿತ್ರತಂಡದವರ ವಿಶ್ವಾಸ.

ಇದನ್ನೂ ಓದಿ: 500 ಕೋಟಿಯತ್ತ 'ಅನಿಮಲ್​​': ರಶ್ಮಿಕಾ, ರಣ್​ಬೀರ್​ಗೆ ದೊಡ್ಡ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.