ರೋರಿಂಗ್ ಸ್ಟಾರ್ ಜನಪ್ರಿಯತೆಯ ಶ್ರೀಮುರಳಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಉಗ್ರಂ ಸ್ಟಾರ್ಗೆ ಕಟುಂಬ ಸದಸ್ಯರು, ಸ್ನೇಹಿತರು, ಚಿತ್ರರಂಗದ ಗಣ್ಯರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಈ ವಿಶೇಷ ದಿನದಂದು ನಟನ ಮುಂದಿನ ಚಿತ್ರದ ಟೀಸರ್ ಅನಾವರಣಗೊಂಡಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ: ಸುಮಾರು 2003ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶ್ರೀಮುರಳಿ ತಮ್ಮದೇ ಆದ ಸ್ಟಾರ್ ಡಮ್ ಸಂಪಾದಿಸಿದ್ದಾರೆ. ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಿದೆ. 2014ರಲ್ಲಿ ಬಂದ ಉಗ್ರಂ ಸದಾ ನೆನಪಿನಲ್ಲಿ ಉಳಿಯೋವಂಥ ಚಿತ್ರ. ಈ ಸಿನಿಮಾ ನಟನಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ರೋರಿಂಗ್ ಸ್ಟಾರ್ ಎಂದೇ ಜನಪ್ರಿಯರು ನೋಡಿ. ಹಾಗಾಗಿ ನಟನ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
-
𝐖𝐡𝐞𝐧 𝐬𝐨𝐜𝐢𝐞𝐭𝐲 𝐛𝐞𝐜𝐨𝐦𝐞𝐬 𝐚 𝐣𝐮𝐧𝐠𝐥𝐞... 𝐚𝐧𝐝 𝐨𝐧𝐥𝐲 𝐨𝐧𝐞 𝐩𝐫𝐞𝐝𝐚𝐭𝐨𝐫 𝐫𝐨𝐚𝐫𝐬 𝐟𝐨𝐫 𝐣𝐮𝐬𝐭𝐢𝐜𝐞...💥
— Hombale Films (@hombalefilms) December 17, 2023 " class="align-text-top noRightClick twitterSection" data="
Presenting #BagheeraTeaser to you all ▶️ https://t.co/VRviuMij3o
Wishing our 'Roaring Star' @SRIMURALIII a very Happy Birthday.#Bagheera… pic.twitter.com/UxMAaJp1Qr
">𝐖𝐡𝐞𝐧 𝐬𝐨𝐜𝐢𝐞𝐭𝐲 𝐛𝐞𝐜𝐨𝐦𝐞𝐬 𝐚 𝐣𝐮𝐧𝐠𝐥𝐞... 𝐚𝐧𝐝 𝐨𝐧𝐥𝐲 𝐨𝐧𝐞 𝐩𝐫𝐞𝐝𝐚𝐭𝐨𝐫 𝐫𝐨𝐚𝐫𝐬 𝐟𝐨𝐫 𝐣𝐮𝐬𝐭𝐢𝐜𝐞...💥
— Hombale Films (@hombalefilms) December 17, 2023
Presenting #BagheeraTeaser to you all ▶️ https://t.co/VRviuMij3o
Wishing our 'Roaring Star' @SRIMURALIII a very Happy Birthday.#Bagheera… pic.twitter.com/UxMAaJp1Qr𝐖𝐡𝐞𝐧 𝐬𝐨𝐜𝐢𝐞𝐭𝐲 𝐛𝐞𝐜𝐨𝐦𝐞𝐬 𝐚 𝐣𝐮𝐧𝐠𝐥𝐞... 𝐚𝐧𝐝 𝐨𝐧𝐥𝐲 𝐨𝐧𝐞 𝐩𝐫𝐞𝐝𝐚𝐭𝐨𝐫 𝐫𝐨𝐚𝐫𝐬 𝐟𝐨𝐫 𝐣𝐮𝐬𝐭𝐢𝐜𝐞...💥
— Hombale Films (@hombalefilms) December 17, 2023
Presenting #BagheeraTeaser to you all ▶️ https://t.co/VRviuMij3o
Wishing our 'Roaring Star' @SRIMURALIII a very Happy Birthday.#Bagheera… pic.twitter.com/UxMAaJp1Qr
ಶ್ರೀಮುರಳಿ ಬರ್ತ್ಡೇಗೆ 'ಬಘೀರ' ಟೀಸರ್ ಗಿಫ್ಟ್: 2020ರಲ್ಲಿ ಮದಗಜ ಅನ್ನೋ ಸಿನಿಮಾ ಮೂಡಿಬಂತು. ಅದಾದ ಬಳಿಕ ಯಾವುದೇ ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಮುಂದಿನ ಸಿನಿಮಾ ಯಾವಾಗ ರಿಲೀಸ್ ಅನ್ನೋದು ಅಭಿಮಾನಿ ಬಳಗದ ಪ್ರಶ್ನೆ. ಬಹುನಿರೀಕ್ಷಿತ 'ಬಘೀರ' ಸಿನಿಮಾದಲ್ಲಿ ನಟಿಸುತ್ತಿರೋದು ನಿಮಗೆಲ್ಲರಿಗೂ ತಿಳಿದಿರೋ ವಿಚಾರವೇ. ಇಂದು ನಟನ ಜನ್ಮದಿನ ಆದ ಹಿನ್ನೆಲೆ ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಆಗಿರೋ ಹೊಂಬಾಳೆ ಫಿಲ್ಮ್ಸ್ 'ಬಘೀರ' ಟೀಸರ್ ಗಿಫ್ಟ್ ಕೊಟ್ಟಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಟೀಸರ್ ಅನಾವರಣಗೊಳಿಸಿ ಶ್ರೀಮುರಳಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ.
ಇದನ್ನೂ ಓದಿ: 'ಹೆಮ್ಮೆಯ ಕ್ಷಣ': ಮೊಮ್ಮಗಳು ಆರಾಧ್ಯ ಪ್ರತಿಭೆಗೆ ಮನಸೋತ ಅಮಿತಾಭ್ ಬಚ್ಚನ್
ಶೀಘ್ರದಲ್ಲೇ 'ಬಘೀರ' ಸಿನಿಮಾವನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಯುತ್ತಿದೆ. ಚಿತ್ರೀಕರಣಣದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇಂದು ಟೀಸರ್ ಅನಾವರಣಗೊಳಿಸಿದೆ. ಬಹು ಸಮಯದ ಹಿಂದೆ 'ಲಕ್ಕಿ' ಸಿನಿಮಾ ನಿರ್ದೇಶಿಸಿದ್ದ ಡಾ. ಸೂರಿ ಈ ಬಘೀರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸೂರಿ ನಿರ್ದೇಶನದ ಎರಡನೇ ಚಿತ್ರವಿದು. ಹತ್ತು ವರ್ಷಗಳ ಬಳಿಕ ಸೂರಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆನ್ನೋದು ಇಲ್ಲಿ ಗಮನಿಸಬೇಕಾದ ಸಂಗತಿ.
- " class="align-text-top noRightClick twitterSection" data="">
ಇದನ್ನೂ ಓದಿ: ಶ್ರೇಯಸ್ ತಲ್ಪಾಡೆ ಹೆಲ್ತ್ ಅಪ್ಡೇಟ್: ಹೃದಯಾಘಾತಕ್ಕೊಳಗಾಗಿದ್ದ ನಟನ ಆರೋಗ್ಯದಲ್ಲಿ ಚೇತರಿಕೆ
ಕೆಜಿಎಫ್, ಕಾಂತಾರ, ಸದ್ಯ ರಿಲೀಸ್ಗೆ ಸಜ್ಜಾಗಿರುವ ಸಲಾರ್ ಸಿನಿಮಾದ ಹಿಂದಿರುವ ಹೊಂಬಾಳೆ ಫಿಲ್ಮ್ಸ್ ಈ ಬಘೀರ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಶ್ರೀಮುರಳಿ ಅವರ ಉಗ್ರಂ ಸಿನಿಮಾ ನಿರ್ದೇಶಿಸಿದ್ದ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮೂರು ವರ್ಷಗಳ ಬ್ರೇಕ್ ಬಳಿಕ ಬರುತ್ತಿರುವ ಶ್ರೀಮುರಳಿ ಅವರಿಗೆ ಈ ಬಘೀರ ಸಿನಿಮಾ ಎಷ್ಟರ ಮಟ್ಟಿಗೆ ಯಶಸ್ಸು ತಂದುಕೊಡುತ್ತೆ ಅನ್ನೋದನ್ನು ಕಾದುನೋಡಬೇಕಿದೆ.