ETV Bharat / entertainment

ಕೆ ಎಲ್ ರಾಹುಲ್ - ಅಥಿಯಾ ಶೆಟ್ಟಿ ಮದುವೆಗೆ ಮುಹೂರ್ತ ಫಿಕ್ಸ್?! - ನಟ ಸುನೀಲ್ ಶೆಟ್ಟಿ

ನಟ ಸುನೀಲ್ ಶೆಟ್ಟಿ ಅವರ ಮುಂಬೈನ ತೋಟದ ಮನೆಯಲ್ಲಿ ಜನವರಿ 21 ರಿಂದ 23 ರವರೆಗೆ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಕಾರ್ಯಕ್ರಮ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Athiya Shetty KL Rahul marriage date
ಕೆಎಲ್ ರಾಹುಲ್ - ಅಥಿಯಾ ಶೆಟ್ಟಿ ಮದುವೆ
author img

By

Published : Dec 13, 2022, 4:20 PM IST

ಟೀಂ ಇಂಡಿಯಾ ಕ್ರಿಕೆಟ್​ ಪ್ಲೇಯರ್​​ ಕೆಎಲ್ ರಾಹುಲ್ ಮತ್ತು ಬಾಲಿವುಡ್‌ನ ಹಿರಿಯ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ವಿವಾಹದ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಈ ಸ್ಟಾರ್​ ಕಪಲ್​​ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ.

ಆಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆ ಬಗ್ಗೆ ಸ್ವತಃ ನಟ ಸುನೀಲ್ ಶೆಟ್ಟಿ ದೊಡ್ಡ ಹೇಳಿಕೆ ನೀಡಿದ್ದರು. ಶೀಘ್ರದಲ್ಲೇ ಮಗಳ ಮದುವೆ ಮಾಡಲಿದ್ದೇನೆ ಎಂದು ಇತ್ತೀಚೆಗೆ ನಟ ಸುನೀಲ್ ಶೆಟ್ಟಿ ತಿಳಿಸಿದ್ದರು.

ಇನ್ನು ಕೆಲವೇ ದಿನಗಳಲ್ಲಿ ಅಂದರೆ ಬರುವ ಜನವರಿಯಲ್ಲಿ ಅಥಿಯಾ ಮತ್ತು ರಾಹುಲ್ ವಿವಾಹವಾಗಲಿದ್ದಾರೆ ಎಂಬುದು ಗಮನಾರ್ಹ. ಜನವರಿ 21 ರಿಂದ 23 ರವರೆಗೆ ಈ ಜೋಡಿಯ ಮದುವೆ ಕಾರ್ಯಕ್ರಮ ನಡೆಯಲಿದೆ ಎಂಬುದು ಅವರ ಆಪ್ತ ಮೂಲಗಳ ಮಾಹಿತಿ. ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಪಾಲ್ಗೊಳ್ಳಲಿದ್ದಾರಂತೆ.

Athiya Shetty KL Rahul marriage date
ಶೀಘ್ರದಲ್ಲೇ ನಡೆಯಲಿದೆ ಕೆಎಲ್ ರಾಹುಲ್ - ಅಥಿಯಾ ಶೆಟ್ಟಿ ಮದುವೆ

ವರದಿಗಳ ಪ್ರಕಾರ, ಅಥಿಯಾ ಮತ್ತು ರಾಹುಲ್ ಸಾಂಪ್ರದಾಯಿಕವಾಗಿ ಮದುವೆಯಾಗಲಿದ್ದಾರೆ. 2023ರ ಜನವರಿ 21 ರಿಂದ 23 ರವರೆಗೆ ಈ ಜೋಡಿಯ ವಿವಾಹ ಸಮಾರಂಭ ನಡೆಯಲಿದೆ. ಆದರೆ ಸದ್ಯಕ್ಕೆ ಮದುವೆ ದಿನಾಂಕದ ಬಗ್ಗೆ ಸ್ಟಾರ್ ಫ್ಯಾಮಿಲಿಯಿಂದ ಯಾವುದೇ ಹೇಳಿಕೆ ಬಂದಿಲ್ಲ.

ಮುಂಬೈನಲ್ಲಿರುವ ಸುನೀಲ್ ಶೆಟ್ಟಿ ಅವರ ತೋಟದ ಮನೆಯಲ್ಲಿ ಈ ಪ್ರೇಮ ಪಕ್ಷಿಗಳು ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಹತ್ವದ ಸಂಗತಿ ಎಂದರೆ ಈಗಾಗಲೇ ಮದುವೆಗೆ ಸಿದ್ಧತೆಗಳು ಆರಂಭವಾಗಿವೆ. ಇವರಿಬ್ಬರ ವಿವಾಹದ ಉಡುಗೆ ವಿಶೇಷವಾಗಿ ರೆಡಿಯಾಗುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಅಥಿಯಾ-ರಾಹುಲ್​​ ಮದುವೆ: ನಟ ಸುನೀಲ್​ ಶೆಟ್ಟಿ

ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕಳೆದ ಹಲವು ಸಮಯದಿಂದ ಡೇಟಿಂಗ್​ನಲ್ಲಿದ್ದು, ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಈ ಜೋಡಿ ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನು ಸುನೀಲ್ ಶೆಟ್ಟಿ ಅವರ ಮುಂಬರುವ ವೆಬ್​ ಸೀರಿಸ್​​ 'ಧಾರವಿ ಬ್ಯಾಂಕ್' ಕುರಿತು ಚರ್ಚೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮಗಳ ಮದುವೆ ಬಗ್ಗೆ ಸಂದರ್ಶನವೊಂದರಲ್ಲಿ ಕೇಳಿದಾಗ, 'ಶೀಘ್ರವೇ ಆಗಲಿದೆ' ಎಂದು ಹೇಳಿದ್ದು, ಯಾವಾಗ ಆಗುವುದು ಎಂದು ಸ್ಪಷ್ಟ ಮಾಹಿತಿ ನೀಡಿರಲಿಲ್ಲ.

ಇದನ್ನೂ ಓದಿ: ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆರ್​ಆರ್​​ಆರ್​ ನಾಮ ನಿರ್ದೇಶನ.. ಧನ್ಯವಾದ ಅರ್ಪಿಸಿದ ರಾಜಮೌಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.