ETV Bharat / entertainment

ಅನುಷ್ಕಾ ಶರ್ಮಾ ಫೋಟೋ ಕ್ಲಿಕ್ಕಿಸಿದ ಅರಿಜಿತ್ ಸಿಂಗ್; ವಿರುಷ್ಕಾ ವಿಡಿಯೋ ವೈರಲ್ - ಇಂಡಿಯಾ ವರ್ಸಸ್ ಪಾಕ್

ನಟಿ ಅನುಷ್ಕಾ ಶರ್ಮಾ, ಗಾಯಕ ಅರಿಜಿತ್ ಸಿಂಗ್ ಅವರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ವಿರುಷ್ಕಾ ವಿಡಿಯೋ ಸಹ ಅಭಿಮಾನಿಗಳ ಹೃದಯ ಗೆದ್ದಿದೆ.

Arijit Singh requests Anushka Sharma for pics
ಅನುಷ್ಕಾ ಶರ್ಮಾ ಫೋಟೋ ಕ್ಲಿಕ್ಕಿಸಿದ ಅರಿಜಿತ್ ಸಿಂಗ್
author img

By ETV Bharat Karnataka Team

Published : Oct 15, 2023, 4:35 PM IST

ಶನಿವಾರ ಅಹಮದಾಬಾದ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್‌ ಕ್ರಿಕೆಟ್​​​ ಪಂದ್ಯಕ್ಕೆ ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದರು. ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಾಗೂ ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಭಾಗವಹಿಸಿದ್ದರು. ಅರಿಜಿತ್ ಸಿಂಗ್ ತಂಡದ ಗಾಯನದೊಂದಿಗೆ ಪಂದ್ಯ ಆರಂಭವಾಗಿತ್ತು. ಅಂತಿಮವಾಗಿ ಭಾರತ ಗೆಲುವಿನ ನಗೆ ಬೀರಿದ್ದು, ಸ್ಟೇಡಿಯಂಗೆ ಸಂಬಂಧಿಸಿದ ಹಲವು ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಪಂದ್ಯದ ಉತ್ಸಾಹದ ನಡುವೆ ಅರಿಜಿತ್ ಅವರು ಅನುಷ್ಕಾರನ್ನು ಮಾತನಾಡಿಸಿದರು. ನಟಿಯ ಫೋಟೋ ಕ್ಲಿಕ್ಕಿಸಿಕೊಳ್ಳಲು ವಿನಂತಿಸಿದರು. ಅನುಷ್ಕಾ ಒಪ್ಪಿ ಪೋಸ್ ನೀಡಿದರು. ಈ ಉಲ್ಲಾಸಕರ ಕ್ಷಣವನ್ನು ಸೆರೆಹಿಡಿಯಲಾಗಿದೆ. ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ವಿಡಿಯೋ ವೈರಲ್ ಮಾಡಲಾಗಿದೆ. ಜೊತೆಗೆ, 'ವಿರುಷ್ಕಾ' ವಿಡಿಯೋ ಸಹ ಕಾಡ್ಗಿಚ್ಚಿನಂತೆ ವೈರಲ್​ ಆಗಿದೆ.

ಅಸಂಖ್ಯಾತ ಅಭಿಮಾನಿಗಳು ತಾವಿದ್ದ ಸ್ಥಳದಿಂದಲೇ ಟಿವಿ, ಮೊಬೈಲ್​, ಕಂಪ್ಯೂಟರ್​​ಗಳ ಮೂಲಕ ಕ್ರಿಕೆಟ್​ ವೀಕ್ಷಿಸಿದರೆ, ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೂ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಬಂದು ಸೇರಿದ್ದರು. ನಟಿ ಅಥಿಯಾ ಶೆಟ್ಟಿ (ಕೆ.ಎಲ್.ರಾಹುಲ್ ಪತ್ನಿ), ಚಂದನವನದ ಮೋಹಕತಾರೆ ರಮ್ಯಾ ಸೇರಿದಂತೆ ಅನೇಕರಿದ್ದರು.

ಸಂಭ್ರಮದ ವಾತಾವರಣದ ನಡುವೆ, ಕೊಂಚ ದೂರದಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ಅವರನ್ನು ಅರಿಜಿತ್ ಸಿಂಗ್ ಗಮನಿಸಿದ್ದಾರೆ. ನಟಿಯನ್ನು ಸಂಪರ್ಕಿಸಿ ಫೋಟೋಗೆ ವಿನಂತಿಸಿದರು. ಅನುಷ್ಕಾ ಪೋಸ್ ಕೊಟ್ಟರು. ಸಾಮಾಜಿಕ ಮಾಧ್ಯಮದಲ್ಲಿ ಫ್ಯಾನ್ಸ್ ಪೇಜ್​ಗಳು ಶೇರ್ ಮಾಡುತ್ತಿರುವ ಈ ಕ್ಲಿಪ್‌ನಲ್ಲಿ, ಅರಿಜಿತ್ ಸಿಂಗ್ ಬಿಳಿ ಶರ್ಟ್ ಹಾಗೂ ನೀಲಿ ಪ್ಯಾಂಟ್‌ ಧರಿಸಿದ್ದರೆ, ಅನುಷ್ಕಾ ವೈಟ್​ ಔಟ್​ಫಿಟ್​ನಲ್ಲಿ ಕಂಗೊಳಿಸಿದರು.

ಇದನ್ನೂ ಓದಿ: ಗೆಳೆಯನೊಂದಿಗೆ ಮ್ಯಾಚ್​​ ವೀಕ್ಷಿಸಿದ ರಮ್ಯಾ: ಭಾರತದ ಗೆಲುವಿನ ಸಂಭ್ರಮದ ಮಧ್ಯೆ ನಟಿಯ ಬೇಸರಕ್ಕೆ ಕಾರಣವಾಗಿದ್ದೇನು?

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಸಿಹಿ ಕ್ಷಣವನ್ನೂ ಸಹ ಸೆರೆಹಿಡಿಯಲಾಗಿದೆ. ವೈರಲ್ ವಿಡಿಯೋದಲ್ಲಿ, ವಿರಾಟ್ ಮೈದಾನದಿಂದ ಅನುಷ್ಕಾ ಕಡೆ ನೋಡಿ ಮಾತನಾಡುತ್ತಿರುವುದನ್ನು ಕಾಣಬಹುದು. ಒಂದೇ ಕಾರಿನಲ್ಲಿ ಹೋಗೋಣ ಎಂದು ತಿಳಿಸಲು ವಿರಾಟ್​ ಪ್ರಯತ್ನಿಸಿದಂತೆ ತೋರುತ್ತಿದೆ. ವಿರುಷ್ಕಾ ಕ್ಷಣ ಅಭಿಮಾನಿಗಳ ಹೃದಯ ಆವರಿಸಿದೆ. ಇದಲ್ಲದೇ ಇಬ್ಬರೂ ಒಟ್ಟಿಗೆ ಓಡಾಡುತ್ತಿರುವ ವಿಡಿಯೋ ಸಹ ಹರಿದಾಡುತ್ತಿದೆ.

ಇದನ್ನೂ ಓದಿ: ಕಣ್ಣೋಟದಲ್ಲೇ ಕೊಲ್ಲುವ ಚೆಲುವೆ: ತಮನ್ನಾ ಭಾಟಿಯಾ ಸೌಂದರ್ಯ ಕಣ್ತುಂಬಿಕೊಂಡ ನೆಟ್ಟಿಗರು

ಅನುಷ್ಕಾ ಶರ್ಮಾರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 2018ರಲ್ಲಿ ಶಾರುಖ್ ಖಾನ್ ಜೊತೆ ಝೀರೋ ಚಿತ್ರದಲ್ಲಿ ನಟಿಸಿದ್ದರು. ಇದು ಇವರ ಕೊನೆ ಸಿನಿಮಾ. ಕಳೆದ ವರ್ಷ ಕಾಲಾ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಪ್ರಸ್ತುತ ಚಕ್ಡಾ ಎಕ್ಸ್‌ಪ್ರೆಸ್‌ ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಐದು ವರ್ಷಗಳ ವಿರಾಮದ ನಂತರ ಬಿಗ್​ ಸ್ಕ್ರೀನ್​ಗೆ ಮರಳುತ್ತಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.