ETV Bharat / entertainment

ಕ್ರಿಕೆಟ್​ ಟೀಮ್ ದೀಪಾವಳಿ ಸೆಲೆಬ್ರೇಶನ್​: ಬೇಬಿ ಬಂಪ್​ ಮರೆಮಾಡಲೆತ್ನಿಸಿದ ಅನುಷ್ಕಾ ಶರ್ಮಾ ವಿಡಿಯೋ ವೈರಲ್​​! - ಅನುಷ್ಕಾ ಶರ್ಮಾ ಪ್ರಗ್ನೆಂಟ್

ಶನಿವಾರ ಬೆಂಗಳೂರಿನ ಹೋಟೆಲ್​ನಲ್ಲಿ ಟೀಂ ಇಂಡಿಯಾ ದೀಪಾವಳಿ ಹಬ್ಬ ಸಂಭ್ರಮಿಸಿತು. ಈ ವೇಳೆ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಜೋಡಿ ಗಮನ ಸೆಳೆದರು.

Anushka Sharma Virat Kohli
ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ
author img

By ETV Bharat Karnataka Team

Published : Nov 12, 2023, 1:44 PM IST

ದೇಶಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಶನಿವಾರದಂದು ಇಂಡಿಯನ್​ ಕ್ರಿಕೆಟ್​ ಟೀಮ್​​ ಬೆಂಗಳೂರಿನ ಹೋಟೆಲ್​ ಒಂದರಲ್ಲಿ ದೀಪಾವಳಿ ಹಬ್ಬ ಆಚರಿಸಿದೆ. ಪವರ್​ಫುಲ್​ ಕಪಲ್​​ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸುಂದರ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದರು.

ಆನ್‌ಲೈನ್‌ನಲ್ಲಿ ವೈರಲ್​ ಆಗಿರುವ ವಿಡಿಯೋಗಳಲ್ಲಿ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಬೇಬಿ ಬಂಪ್​ ಮರೆಮಾಡಲೆತ್ನಿಸಿದ್ದನ್ನು ಕಾಣಬಹುದು. ಅನುಷ್ಕಾ ಶರ್ಮಾ ಪ್ರೆಗ್ನೆಂಟ್​ ಎಂಬ ಸುದ್ದಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು, ಹೊಸ ವಿಡಿಯೋ ಊಹಾಪೋಹಗಳಿಗೆ ತುಪ್ಪ ಸುರಿದಿದೆ. ವಿರುಷ್ಕಾ ಜೋಡಿ ಶೀರ್ಘದಲ್ಲೇ ಎರಡನೇ ಮಗುವನ್ನು ಸ್ವಾಗತಿಸಲಿದ್ದಾರೆ ಎಂದು ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ.

ವಿಶ್ವಕಪ್​ನ ಲೀಗ್ ಹಂತದ ಕೊನೆ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್​ ನಡುವೆ ಇಂದು ನಡೆಯಲಿದೆ. ಬೆಂಗಳೂರಿನಲ್ಲಿರುವ ಭಾರತ ಕ್ರಿಕೆಟ್​ ಟೀಮ್​​ ಆಟಗಾರರು ನಿನ್ನೆ ಸಂಜೆ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಈವೆಂಟ್​ನ ಫೋಟೋ, ವಿಡಿಯೋಗಳು ಸಖತ್​ ಸದ್ದು ಮಾಡುತ್ತಿವೆ.

ನವೆಂಬರ್ 11 ರಂದು ನಡೆದ ದೀಪಾವಳಿ ಹಬ್ಬದ ಆಚರಣೆಯಲ್ಲಿ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಸಹ ಭಾಗವಹಿಸಿ ಸಮಾರಂಭದ ಮೆರುಗು ಹೆಚ್ಚಿಸಿದರು. ಅನುಷ್ಕಾ ಶರ್ಮಾ ಮಿನಿಮಮ್ ಮೇಕ್​​ಅಪ್​ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಗುಲಾಬಿ - ನೇರಳೆ ಕುರ್ತಾ ಸೆಟ್, ದುಪ್ಪಟ್ಟಾ ಧರಿಸಿ ಆಗಮಿಸಿದ್ದರು. ಮತ್ತೊಂದೆಡೆ ವಿರಾಟ್ ಕೊಹ್ಲಿ ಗ್ರೀನ್​ ಕುರ್ತಾ ಸೆಟ್​ನಲ್ಲಿ ಸಾಂಪ್ರದಾಯಿಕ ನೋಟ ಬೀರಿದರು. ದೀಪಾವಳಿ ಈವೆಂಟ್ ನಡೆದ ಹೋಟೆಲ್‌ಗೆ ಜನಪ್ರಿಯ ದಂಪತಿ ಆಗಮಿಸಿರುವ ವಿಡಿಯೋ ವೈರಲ್ ಆಗಿದೆ. ಇಲ್ಲಿ ಎಲ್ಲರ ಗಮನ ಸೆಳೆದಿದ್ದು ಅನುಷ್ಕಾ ಶರ್ಮಾ ಬೇಬಿ ಬಂಪ್​​.

ಇದನ್ನೂ ಓದಿ: 2ನೇ ಮಗುವಿನ ನಿರೀಕ್ಷೆಯಲ್ಲಿ ವಿರುಷ್ಕಾ ಜೋಡಿ? ಕುತೂಹಲಕ್ಕೆ ಕಾರಣವಾದ ಈ ವಿಡಿಯೋ

ಇತ್ತೀಚಿನ ವಿಡಿಯೋಗಳು ಮತ್ತು ನಿನ್ನೆಯ ದೀಪಾವಳಿ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿವೆ. ವಿರುಷ್ಕಾ ಜೋಡಿ ಎಂದಿನಂತೆ ಕೈ ಕೈ ಹಿಡಿದು ಒಟ್ಟಿಗೆ ಅಡ್ಡಾಡಿದ್ದಾರೆ. ಆದ್ರೆ ರಬ್ ನೆ ಬನಾ ದಿ ಜೋಡಿ ಚಿತ್ರನಟಿ ಗರ್ಭಿಣಿ ಆಗಿದ್ದಾರೆಂದು ಈ ವಿಡಿಯೋಗಳನ್ನು ನೋಡಿದವರು ತಿಳಿಸುತ್ತಿದ್ದಾರೆ. ಅನುಷ್ಕಾ ಮತ್ತು ವಿರಾಟ್ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ ಎಂದು ನೇರವಾಗಿ ತಿಳಿಸದಿದ್ದರೂ, ಅವರು ತಮ್ಮ ಎರಡನೇ ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ ಎಂದು ವಿಡಿಯೋಗಳು ಬಲವಾಗಿ ಸೂಚಿಸಿವೆ. ಬೇಬಿ ಬಂಪ್​ ಮರೆಮಾಡಲೆತ್ನಿಸಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ಇದನ್ನೂ ಓದಿ: ದೀಪಾವಳಿ 2023: ರಾಧಿಕಾ ಪಂಡಿತ್​ ಸೇರಿದಂತೆ ಸ್ಯಾಂಡಲ್​ವುಡ್​ ಸ್ಟಾರ್ಸ್ ಆಕರ್ಷಕ ಫೋಟೋಗಳು

ವಿಭಿನ್ನ ಕ್ಷೇತ್ರದಲ್ಲಿ ಸಾಧನೆಗೈದಿರುವ ವಿರಾಟ್​ ಕೊಹ್ಲಿ, ಅನುಷ್ಕಾ ಶರ್ಮಾ ಕೆಲ ಕಾಲ ಡೇಟಿಂಗ್ ನಡೆಸಿ 2017ರ ಡಿಸೆಂಬರ್ 11ರಂದು ಹಸೆಮಣೆ ಏರಿದರು. ಇಟಲಿಯಲ್ಲಿ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅದ್ಧೂರಿ ಮದುವೆ ನಡೆದಿತ್ತು. 2021ರ ಜನವರಿಯಲ್ಲಿ ಜೋಡಿಗೆ ಹೆಣ್ಣು ಮಗು ಜನಿಸಿತು. ಮಗುವಿನ ಹೆಸರು ವಾಮಿಕಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.