ETV Bharat / entertainment

ಅನುಷ್ಕಾ ಶರ್ಮಾ ಬೇಬಿ ಬಂಪ್ ಫೋಟೋ ವೈರಲ್​​: ಅಧಿಕೃತ ಘೋಷಣೆ ನಿರೀಕ್ಷೆ - Anushka Sharma pregnant

ಬಾಲಿವುಡ್​ ನಟಿ​ ಅನುಷ್ಕಾ ಶರ್ಮಾ ಅವರ ಬೇಬಿ ಬಂಪ್ ಫೋಟೋ ವೈರಲ್​ ಆಗುತ್ತಿದೆ.

Anushka Sharma Baby Bump
ಅನುಷ್ಕಾ ಶರ್ಮಾ ಬೇಬಿ ಬಂಪ್ ಫೋಟೋ
author img

By ETV Bharat Karnataka Team

Published : Dec 15, 2023, 6:28 PM IST

ಹಿಂದಿ ಚಿತ್ರರಂಗದ ಅಭಿನೇತ್ರಿ ಅನುಷ್ಕಾ ಶರ್ಮಾ ಮತ್ತು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಡಿಸೆಂಬರ್ 11ರಂದು ಲಂಡನ್‌ನಲ್ಲಿ ಸ್ಟಾರ್ ಕಪಲ್​ ತಮ್ಮ ಕುಟುಂಬಸ್ಥರು, ಸ್ನೇಹಿತರ ಜೊತೆ ವೆಡ್ಡಿಂಗ್​ ಆ್ಯನಿವರ್ಸರಿ ಸೆಲೆಬ್ರೇಟ್​ ಮಾಡಿಕೊಂಡಿದ್ದರು. ವಿರುಷ್ಕಾ ಜೋಡಿ ತಮ್ಮ ವಿವಾಹ ವಾರ್ಷಿಕೋತ್ಸವದ ಸುಮಧುರ ಕ್ಷಣಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಪ್ರೀತಿ ಗಳಿಸಿದ್ದರು. ಈ ಫೋಟೋಗಳಿಗೆ ಅತಿ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿತ್ತು.

ವೆಡ್ಡಿಂಗ್​ ಆ್ಯನಿವರ್ಸರಿ ಸೆಲೆಬ್ರೇಶನ್​ ಫೋಟೋಗಳ ಬಳಿಕ ಮತ್ತೊಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಂತ ಇದು ವಿವಾಹ ವಾರ್ಷಿಕೋತ್ಸವ ಸಂದರ್ಭದ್ದಲ್ಲ. ಈ ಫೋಟೋದಲ್ಲಿ ಯಶಸ್ವಿ ವೈವಾಹಿಕ ಜೀವನ ನಡೆಸುತ್ತಿರುವ ದಂಪತಿ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಅವರ ಬೇಬಿ ಬಂಪ್ ಸ್ಪಷ್ಟವಾಗಿ ಗೋಚರಿಸಿದ್ದು, ಅಧಿಕೃತವಾಗಿ ಘೋಷಿಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಇದೇ ರೀತಿಯ ಉಡುಪಿನಲ್ಲಿ ಹಿಂದೊಮ್ಮೆ ಫೋಟೋಗಳನ್ನು ಹಂಚಿಕೊಂಡಿದ್ದರು. ಹಾಗಾಗಿ ಇದು ಸದ್ಯದ ಫೋಟೋನಾ ಅಥವಾ ಹಳೇ ಫೋಟೋನಾ ಎಂಬ ಗೊಂದಲದಲ್ಲಿ ಅಭಿಮಾನಿಗಳಿದ್ದಾರೆ. ಇದು ಹಳೇ ಫೋಟೋ ಎಂದೇ ಬಹುತೇಕ ನಂಬಲಾಗಿದೆ.

ಅನುಷ್ಕಾ ಶರ್ಮಾ ಗರ್ಭಿಣಿ?: 'ಕ್ರಿಕೆಟ್ ವಿಶ್ವಕಪ್ 2023'ರಿಂದ ಅನುಷ್ಕಾ ಶರ್ಮಾ ಎರಡನೇ ಗರ್ಭಧಾರಣೆಯ ಸಲುವಾಗಿ ಸುದ್ದಿಯಲ್ಲಿದ್ದಾರೆ. ಅದಕ್ಕೂ ಮುನ್ನ ಕೆಲ ಸಮಯ ನಟಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಸಿನಿಮಾ ಈವೆಂಟ್​ಗಳಿಗೂ ಭಾಗಿಯಾಗಲಿಲ್ಲ. ಆಗಲೇ ನಟಿ ಗರ್ಭಿಣಿ ಎಂಬ ಊಹಾಪೋಹ ಹರಡಿತ್ತು. ವಿಶ್ವಕಪ್ ಸಂದರ್ಭ ಬೆಂಗಳೂರಿನಿಂದ ನಟಿಯ ವಿಡಿಯೋಗಳು ವೈರಲ್​ ಆಗಿ, ಊಹಾಪೋಹಕ್ಕೆ ತುಪ್ಪ ಸುರಿದಿತ್ತು. ವೈರಲ್​ ವಿಡಿಯೋಗಳಲ್ಲಿ ಬೇಬಿ ಬಂಪ್​​ ಪ್ರದರ್ಶನವಾಗಿತ್ತು. ಹಾಗಾಗಿ ವಿರುಷ್ಕಾ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ ಎಂದು ಬಹುತೇಕ ನಂಬಲಾಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿ. ಸದ್ಯ ವೈರಲ್ ಆಗುತ್ತಿರುವ ಚಿತ್ರದಲ್ಲಿ, ಅನುಷ್ಕಾ ಶರ್ಮಾ ಖಾಕಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ವಿರಾಟ್ ಜೊಹ್ಲಿ ಬಿಳಿ ಕುರ್ತಾ-ಧೋತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಫೇಕ್​ ಫೋಟೋ?: 2018ರ ದೀಪಾವಳಿ ಸಂದರ್ಭ ಅನುಷ್ಕಾ ಶರ್ಮಾ ಈ ಸೀರೆಯನ್ನು ಧರಿಸಿದ್ದರು. ಅದೇ ಸಮಯದಲ್ಲಿ ವಿರಾಟ್ ಕೂಡ ಇದೇ ಬಿಳಿ ಧೋತಿ ಮತ್ತು ಕುರ್ತಾ ಧರಿಸಿದ್ದರು. ಅಂದರೆ ವೈರಲ್ ಆಗುತ್ತಿರುವ ಚಿತ್ರ ಫೋಟೋಶಾಪ್ ಮೂಲಕ ರಚಿಸಿದ್ದಾಗಿರಬಹುದು. ಅದೇ ಡ್ರೆಸ್ ಅನ್ನು ಮತ್ತೊಮ್ಮೆ ಧರಿಸಿರುವ ಸಾಧ್ಯತೆಯೂ ಇದೆ. ದೀಪಾವಳಿ ಹಬ್ಬದ ಚಿತ್ರಗಳನ್ನು 2018ರಲ್ಲಿ ಸ್ವತಃ ನಟಿ ಅನುಷ್ಕಾ ಶರ್ಮಾ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. 2021ರ ಜನವರಿಯಲ್ಲಿ ವಿರುಷ್ಕಾ ಜೋಡಿ ಮೊದಲ ಮಗಳನ್ನು ಸ್ವಾಗತಿಸಿದ್ದಾರೆ. ಪುತ್ರಿಯ ಹೆಸರು ವಾಮಿಕಾ ಕೊಹ್ಲಿ.

ಇದನ್ನೂ ಓದಿ: 'ಕೆಲವೊಮ್ಮೆ ಮಾಡದ ತಪ್ಪಿಗೂ...': ರವೀನಾ ಟಂಡನ್ ಹೀಗೆ ಹೇಳಿದ್ದೇಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.