ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಸಖತ್ ಆ್ಯಕ್ಟಿವ್ ಆಗಿದ್ದಾರೆ. 68 ವರ್ಷ ವಯಸ್ಸಾಗಿದ್ದರೂ, ಎಂತಹದ್ದೇ ಪಾತ್ರ ಕೊಟ್ಟರೂ ಒಪ್ಪಿಕೊಂಡು ಮುನ್ನುಗ್ಗುತ್ತಾರೆ. ಹೀಗಾಗಿಯೇ ಅವರು ಹಿಂದಿ ಮಾತ್ರವಲ್ಲದೇ ಇತರೆ ಭಾಷೆಗಳಲ್ಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ಮುಂದಿನ ಸಿನಿಮಾದ ಟೈಟಲ್ ಅನಾವರಣಗೊಂಡಿದೆ. ಅನುಪಮ್ ಖೇರ್ 537ನೇ ಚಿತ್ರಕ್ಕೆ 'ವಿಜಯ್ 69' ಎಂಬ ಶೀರ್ಷಿಕೆ ಇಡಲಾಗಿದೆ. ಟೈಟಲ್ ಜೊತೆ ಹೊಸ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಅನುಪಮ್ ಖೇರ್ ನ್ಯೂ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಸಿನಿಮಾವನ್ನು ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ವೈಆರ್ಎಫ್ ಎಂಟರ್ಟೈನ್ಮೆಂಟ್ ಮೂಲಕ ಓಟಿಟಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಆದರೆ ಬಿಡುಗಡೆಗೆ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಮನೀಶ್ ಶರ್ಮಾ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಪರಿಣಿತಿ ಚೋಪ್ರಾ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ಮೇರಿ ಪ್ಯಾರಿ ಬಿಂದು ಚಿತ್ರದ ನಿರ್ದೇಶಕ ಅಕ್ಷಯ್ ರಾಯ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 69ನೇ ವಯಸ್ಸಿನಲ್ಲಿ ಟ್ರೈಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ನಿರ್ಧರಿಸುವ ವ್ಯಕ್ತಿಯ ಪಾತ್ರದಲ್ಲಿ ಬಾಲಿವುಡ್ ಹಿರಿಯ ನಟ ಮಿಂಚಲಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ವಿದೇಶಕ್ಕೆ ತೆರಳಲು ಶೀಜಾನ್ ಖಾನ್ಗೆ ಕೋರ್ಟ್ ಅನುಮತಿ
ಈ ಸಿನಿಮಾದ ಪೋಸ್ಟರ್ನಲ್ಲಿ ಅನುಪಮ್ ಖೇರ್ ಅವರು ಸೈಕಲ್ ರೇಸ್ ಮಾಡುತ್ತಿರುವುದು ಹೈಲೈಟ್ ಆಗಿದೆ. ಈ ಕಾರ್ಟೂನಿ ಪೋಸ್ಟರ್ ನೋಡುಗರಲ್ಲಿ ಕುತೂಹಲ ಮೂಡಿಸಿದೆ. ಸ್ಟಾರ್ ನಟ ಯಾವಾಗಲೂ ಸವಾಲಿನ ಪಾತ್ರಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರು ತಮ್ಮ ಫಿಟ್ನೆಸ್ ಗುರಿಯನ್ನು ಮುಂದುವರೆಸಿದ್ದಾರೆ. ತಮ್ಮ ವಯಸ್ಸಿಗಿಂತ ದೊಡ್ಡವರಿಗೆ ಅಥವಾ ಸಣ್ಣವರಿಗೆ ಹೊಸದನ್ನು ಕಲಿಯಲು ಪ್ರೇರೇಪಿಸುತ್ತಾರೆ. ಹೀಗಾಗಿಯೇ ನಟ ಬಹುಬೇಗನೆ ಎಲ್ಲಾ ವಿಷಯದಲ್ಲೂ ಜನರ ಮನ ಗೆಲ್ಲುತ್ತಾರೆ.
ಮಾರ್ಚ್ 7 ರಂದು ನಟ ಅನುಪಮ್ ಖೇರ್ ತಮ್ಮ 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಅವರು ಈಜು ಕಲಿಯುವುದನ್ನು ಪ್ರಾರಂಭಿಸುವುದಾಗಿ ಹೇಳಿದ್ದರು. ಹೊಸದನ್ನು ಪ್ರಾರಂಭಿಸಲು ಎಂದಿಗೂ ತಡವಾಗಿಲ್ಲ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅವರೆಂದಿಗೂ ತಮ್ಮ ವಯಸ್ಸನ್ನು ನೋಡುವುದಿಲ್ಲ. ಯಾವುದರಲ್ಲಿ ಆಸಕ್ತಿಯೋ ಅದನ್ನೇ ಮಾಡುತ್ತಾರೆ. ನಟ ಇತ್ತೀಚೆಗೆ ಉಂಚೈ ಮತ್ತು ಶಿವ ಶಾಸ್ತ್ರೀ ಬಲ್ಬೋವಾ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇವೆರೆಡೂ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದವು.
2022 ರಲ್ಲಿ ಅನುಪಮ್ ಖೇರ್ ನಟನೆಯ ದಿ ಕಾಶ್ಮೀರಿ ಫೈಲ್ಸ್ ಸೂಪರ್ ಹಿಟ್ ಆಯಿತು. ಸಿನಿಮಾದಲ್ಲಿನ ಅವರ ಪಾತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರದಿಂದಲೇ ಅವರು ಮತ್ತಷ್ಟು ಫೇಮಸ್ ಆದರು. ಇನ್ನು ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅವರ ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ನಟಿಸಿದ್ದಾರೆ.
ಇದನ್ನೂ ಓದಿ: ''ಮತ್ತೊಂದು ಕೇರಳ ಸ್ಟೋರಿ'': ಮಸೀದಿಯಲ್ಲಿ ಹಿಂದೂ ವಿವಾಹ, ವಿಡಿಯೋ ಹಂಚಿಕೊಂಡ ಸಂಗೀತ ಮಾಂತ್ರಿಕ ರೆಹಮಾನ್